For Quick Alerts
  ALLOW NOTIFICATIONS  
  For Daily Alerts

  ನೀವು ವರ್ಜಿನ್ ಹಾ?, ಅಭಿಮಾನಿಯ ಪ್ರಶ್ನೆಗೆ ಸಲ್ಮಾನ್ ಹೆಸರು ಹೇಳಿದ್ದೇಕೆ ಟೈಗರ್ ಶ್ರಾಫ್?

  |

  ಬಾಲಿವುಡ್ ಖ್ಯಾತ ನಟರ ಸಾಲಿನಲ್ಲಿ ಟೈಗರ್ ಶ್ರಾಫ್ ಕೂಡ ಇದ್ದಾರೆ. ಫಿಟ್ನೆಸ್ ಫ್ರೀಕ್ ಟೈಗರ್ ಶ್ರಾಫ್‌ಗೆ ಫಿದಾ ಆಗದ ಅಭಿಮಾನಿಗಳಿಲ್ಲ. ನಟನೆ ಜೊತೆಗೆ ಫಿಟ್ನೆಸ್ ಕಡೆಯೂ ಹೆಚ್ಚಾಗಿ ಗಮನಕೊಡುವ ಟೈಗರ್ ಶ್ರಾಫ್, ಎಲ್ಲಾ ಸಾಹಸವನ್ನು ಸುಲಭವಾಗಿ ಮಾಡುವ ಆಕ್ಷನ್ ಸ್ಟಾರ್. ಹೀರೋಪಂಥಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಟೈಗರ್ ಶ್ರಾಫ್ ಈಗಾಗಲೇ ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.

  ಖ್ಯಾತ ನಟ ಜಾಕಿ ಶ್ರಾಫ್ ಮಗ ಟೈಗರ್ ಶ್ರಾಫ್‌ಗೆ ಚಿತ್ರರಂಗದ ಎಂಟ್ರಿ ಏನು ಕಷ್ಟವಾಗಿರಲಿಲ್ಲ. ಅವರ ಶ್ರಮ ಮತ್ತು ನಟನೆ ಮೇಲಿನ ಆಸಕ್ತಿ ಅವರನ್ನು ಬಾಲಿವುಡ್‌ನ ಖ್ಯಾತ ನಟನ ಸ್ಥಾನದಲ್ಲಿ ನಿಲ್ಲಿಸಿದೆ. ಸಿನಿಮಾಗಿಂತ ಹೆಚ್ಚಾಗಿ ಟೈಗರ್ ಶ್ರಾಫ್ ಫಿಟ್ನೆಸ್ ಮೂಲಕವೇ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ.

  ಇತ್ತೀಚಿಗೆ ಟೈಗರ್ ಶ್ರಾಫ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ನಡೆಸಿಕೊಡುತ್ತಿರುವ ಟಾಕ್ ಶೋ, ಕ್ವಿಕ್ ಹೀಲ್ ಪಿಂಚ್ ನಲ್ಲಿ ಟೈಗರ್ ಶ್ರಾಫ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಪ್ರೋಮೋ ಸದ್ಯ ಬಿಡುಗಡೆಯಾಗಿದ್ದು, ಟೈಗರ್ ಶ್ರಾಫ್ ಮಾತುಗಳು ವೈರಲ್ ಆಗುತ್ತಿವೆ.

  ಇತ್ತೀಚಿಗೆ ಈ ಶೋನಲ್ಲಿ ಸಲ್ಮಾನ್ ಖಾನ್ ಮತ್ತು ಆಯುಷ್ಮಾನ್ ಖುರಾನ ಭಾಗಿಯಾಗಿದ್ದರು. ಇದೀಗ ಮೂರನೇ ಅತಿಥಿಯಾಗಿ ಟೈಗರ್ ಶ್ರಾಫ್ ಕಾಣಿಸಿಕೊಂಡಿದ್ದಾರೆ. ಶೋನಲ್ಲಿ ಟೈಗರ್ ಟ್ರೋಲ್ ಮತ್ತು ನಕರಾತ್ಮಕ ಟೀಕೆಗಳಿಗೆ ನಗುತ್ತಲೇ ಉತ್ತರ ನೀಡಿದ್ದಾರೆ. ಸಿನಿಮಾರಂಗಕ್ಕೆ ಬರುವ ಮೊದಲೇ ಅವರನ್ನು ಹೇಗೆ ಟ್ರೋಲ್ ಮಾಡುತ್ತಿದ್ದರು ಎನ್ನುವ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆೆ.

  ಜಾಕಿ ಶ್ರಾಫ್ ಮಗನ ಹಾಗೆ ಕಾಣುತ್ತಿಲ್ಲ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದ ಬಗ್ಗೆ ಟೈಗರ್ ವಿವರಿಸಿದ್ದಾರೆ. ಟ್ರೋಲ್‌ಗಳ ಬಗ್ಗೆ ಮಾತನಾಡಿದ ಟೈಗರ್, "ನಿಮ್ಮನ್ನು ಟ್ರೋಲ್ ಮಾಡುತ್ತಾರೆ, ಹಿಂಸೆ ಮಾಡುತ್ತಾರೆ ಎಂದರೆ ನೀವು ಎಲ್ಲರ ಮೇಲೆ ಪ್ರಭಾವ ಬೀರಿದ್ದೀರಿ ಎಂದರ್ಥ. ಅಭಿಮಾನಿಗಳ ಹೃದಯದಲ್ಲಿ ನಂಬರ್ ಒನ್ ಆಗಿರುವುದು ನನಗೆ ತುಂಬಾ ಮುಖ್ಯ" ಎಂದು ಹೇಳಿದ್ದಾರೆ.

  Tiger Shroff On Being Asked If He Is A Virgin, “Like Salman Bhai, I Am A Virgin”

  "ಹೆಚ್ಚು ಟ್ರೋಲ್ ಆಗುತ್ತಿದ್ದರೆ ನಾವು ಪ್ರಭಾವ ಬೀರಿದ್ದರಿಂದ ಮಾತ್ರ ಸಾಧ್ಯ. ನಾನು ಇವತ್ತು ಏನು ಆಗಿದ್ದೇನು ಅದು ಪ್ರೇಕ್ಷಕರೇ ಕಾರಣ. ನಾನು ನಿಮ್ಮ ಹೃದಯದಲ್ಲಿ ಮೊದಲ ಸ್ಥಾನದಲ್ಲಿದ್ದೇನೆ. ಅದು ನನಗೆ ಮುಖ್ಯ" ಎಂದು ಟೈಗರ್ ಶ್ರಾಫ್ ಹೇಳಿದ್ದಾರೆ.

  ಅಭಿಮಾನಿಯೊಬ್ಬ ನೀವು ವರ್ಜಿನ್ ಹಾ? ಎಂದು ಟೈಗರ್ ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಟೈಗರ್, "ಸಲ್ಮಾನ್ ಭಾಯ್ ಹಾಗೆ..ನಾನು ವರ್ಜಿನ್" ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಹೆಸರನ್ನು ಹೇಳುವ ಮೂಲಕ ವರ್ಜಿನ್ ಪ್ರಶ್ನೆಗೆ ಉತ್ತರಿಸಿದ ಟೈಗರ್‌ಗೆ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ಇನ್ನು ಸಾಕಷ್ಟು ಪ್ರಶ್ನೆಗಳು ಟೈಗರ್‌ಗೆ ಎದುರಾಗಿವೆ. ಸದ್ಯ ಪ್ರೋಮೋ ಮಾತ್ರ ಬಿಡುಗಡೆಯಾಗಿದ್ದು, ಸಂಪೂರ್ಣ ಸಂದರ್ಶನಕ್ಕಾಗಿ ಅಭಿಮಾನಿಗಳು ಕಾತರಿಂದ ಕಾಯುತ್ತಿದ್ದಾರೆ.

  ಟೈಗರ್ 2019ರಲ್ಲಿ ಬಂದ ವಾರ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದರು. ಈ ಸಿನಿಮಾದಲ್ಲಿ ಗ್ರೀಕ್ ಗಾಡ್ ಹೃತಿಕ್ ರೋಷನ್ ಜೊತೆ ತೆರೆಹಂಚಿಕೊಂಡಿದ್ದರು. ಇಬ್ಬರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಸಿನಿಮಾ ಬಳಿಕ ಟೈಗರ್ ಮತ್ತೆ ಬಾಘಿ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 2020ರಲ್ಲಿ ಬಾಘಿ-2 ಬಿಡುಗಡೆಯಾಗಿದೆ. ಇದೀಗ ಹೀರೋಪಂಥಿ-2ನಲ್ಲಿ ಬ್ಯುಸಿಯಾಗಿದ್ದಾರೆ.

  ಟೈಗರ್ ಸಿನಿಮಾ, ಫಿಟ್ನೆಸ್ ಜೊತೆಗೆ ಪ್ರೀತಿ- ಪ್ರೇಮದ ವಿಚಾರಕ್ಕೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ನಟಿ ದಿಶಾ ಪಟಾಣಿ ಜೊತೆ ಟೈಗರ್ ಪ್ರೀತಿಯಲ್ಲಿರುವ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಅನೇಕ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿಯೂ ಆಗಾಗ ಕೇಳಿಬರುತ್ತಿರುತ್ತೆ. ಆದರೆ ಈ ಬಗ್ಗೆ ಟೈಗರ್ ಅಥವಾ ದಿಶಾ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

  English summary
  Actor Tiger Shroff On Being Asked If He Is A Virgin, “Like Salman Bhai, I Am A Virgin”.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X