»   » ದಿಶಾ ಪಟಾನಿ ಜೊತೆಗಿನ ಡೇಟಿಂಗ್ ಸೀಕ್ರೇಟ್ ಬಿಚ್ಚಿಟ್ಟ ಟೈಗರ್ ಶ್ರಾಫ್!

ದಿಶಾ ಪಟಾನಿ ಜೊತೆಗಿನ ಡೇಟಿಂಗ್ ಸೀಕ್ರೇಟ್ ಬಿಚ್ಚಿಟ್ಟ ಟೈಗರ್ ಶ್ರಾಫ್!

Posted By:
Subscribe to Filmibeat Kannada

'ಹೀರೋಪಂತಿ' ನಟ ಟೈಗರ್ ಶ್ರಾಫ್ ಹಲವು ವಿಷಯಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಸಿನಿಮಾಗಳು, ಮ್ಯೂಸಿಕ್, ಡ್ಯಾನ್ಸ್ ಹೀಗೆ ಹಲವು ವಿಷಯಗಳಿಂದ ಮಾಧ್ಯಮಗಳಲ್ಲಿ ಹೆಡ್‌ಲೈನ್ ಪಡೆಯುತ್ತಿರುತ್ತಾರೆ. ಅಂದಹಾಗೆ ಟೈಗರ್ ಶ್ರಾಫ್ ಈಗ ಸುದ್ದಿಯಲ್ಲಿರುವುದು ನಟಿ ದಿಶಾ ಪಟಾನಿ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂದು.

ಬಿಟೌನ್‌ ನಲ್ಲಿ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಹಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇಬ್ಬರು ಸಹ ಎಲ್ಲೂ ತುಟಿಬಿಚ್ಚಿರಲಿಲ್ಲ. ಈಗ ಈ ಗಾಳಿಸುದ್ದಿ ಬಗ್ಗೆ ಸ್ವತಃ ಟೈಗರ್ ಶ್ರಾಫ್ ಮಾತನಾಡಿದ್ದಾರೆ. ದಿಶಾ ಜೊತೆಗಿನ ರಿಲೇಶನ್‌ಶಿಪ್ ಬಗ್ಗೆ ಹರಿದಾಡುತ್ತಿರುವ ರೂಮರ್ಸ್ ಬಗ್ಗೆ ಟೈಗರ್ ಪ್ರತಿಕ್ರಿಯೆ ಈ ಕೆಳಗಿನಂತಿದೆ.

ಸಮಸ್ಯೆಯೇ ಇಲ್ಲ..

'ನೊ.. ದಿಶಾ ಜೊತೆ ನಾನು ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹರಿದಾಡುತ್ತಿರುವ ಸುದ್ದಿಯಿಂದ ಯಾವುದೇ ಸಮಸ್ಯೆ ಇಲ್ಲ. ಇದು ಹೆಚ್ಚು ಪ್ರಚಾರದಲ್ಲಿರುವ ಪ್ರತಿಯೊಬ್ಬ ತಾರೆಯರ ಒಂದು ಭಾಗವಾಗಿಬಿಟ್ಟಿದೆ' ಎಂದಿದ್ದಾರೆ ಟೈಗರ್ ಶ್ರಾಫ್.

ದಿಶಾ ಜೊತೆ ವರ್ಕ್ ಮಾಡುವುದೆಂದರೇ ಸಂತೋಷ..

'ಎಲ್ಲರೂ ಸಹ ಈ ಬಗ್ಗೆ ಮಾತನಾಡುತ್ತಿದ್ದಾರೆ. ಜನರು ಏನು ಬೇಕಾದ್ರು ಮಾತಾಡಲಿ. ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದಿಶಾ ಜೊತೆ ವರ್ಕ್ ಮಾಡಲು ಮುನ್ನೋಡುತ್ತಿದ್ದೇನೆ. ಆಕೆಯೊಂದಿಗೆ ರಿಯಲಿ ಕಂಫರ್ಟ್ ಆಗಿದ್ದೇನೆ. ನಮ್ಮಿಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿದೆ. ಹಾಗೆ ಆಕೆ ಜೊತೆ ನಟಿಸುವುದು ರಿಯಲಿ ಫನ್ ಆಗಿರುತ್ತದೆ' -ಟೈಗರ್ ಶ್ರಾಫ್

ಇಬ್ಬರ ಬಗ್ಗೆ ರೂಮರ್ಸ್ ಆರಂಭವಾಗಿದ್ದು ಏಕೆ?

ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಇಬ್ಬರು ಮುಂಬೈನ ಬಾಂದ್ರಾದಲ್ಲಿ ಜೊತೆಯಲ್ಲಿ ಹಲವು ವೇಳೆ ಕಾಣಿಸಿಕೊಂಡಿದ್ದರು. ಅಲ್ಲದೇ ಇಬ್ಬರು ಸಹ ಒಂದೇ ಜಿಮ್ ಸೆಂಟರ್ ಗೆ ಹೋಗುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ರೂಮರ್ಸ್ ಹಬ್ಬಿದೆ. ಆದರೆ ಈ ಬಗ್ಗೆ ದಿಶಾ ಇನ್ನು ತುಟಿಬಿಚ್ಚಿಲ್ಲ.

ಟೈಗರ್ ಶ್ರಾಫ್ ಡೇಟಿಂಗ್ ಕುರಿತು ಜಾಕಿ ಶ್ರಾಫ್ ಹೇಳಿದ್ದು..

ಇತ್ತೀಚೆಗೆ ಟೈಗರ್ ಶ್ರಾಫ್ ತಂದೆ ಜಾಕಿ ಶ್ರಾಫ್ ರವರು ಮಗನ ಡೇಟಿಂಗ್ ಕುರಿತು, 'ಅವರೇನಾದ್ರು ಡೇಟಿಂಗ್ ಮಾಡುತ್ತಿದ್ದರೆ ಒಳ್ಳೆಯದೇ. ಅದರಲ್ಲೇನಿದೆ. ಆದರೆ ಇದುವರೆಗೆ ನನ್ನ ಜೊತೆ ಆ ಬಗ್ಗೆ ಮಾತನಾಡಿಲ್ಲ' ಎಂದಿದ್ದರು. ಆ ವಿಡಿಯೋ ನೋಡಲು ಕ್ಲಿಕ್ ಮಾಡಿ.

'ಬಾಘಿ 2' ನಲ್ಲಿ ರೂಮರ್ಸ್ ಕಪಲ್ಸ್

ಅಂದಹಾಗೆ ಟೈಗರ್ ಶ್ರಾಫ್ 'ಬಾಘಿ' ಚಿತ್ರದ ಸೀಕ್ವೆಲ್ 'ಬಾಘಿ 2' ಸಿನಿಮಾದಲ್ಲಿ ದಿಶಾ ಪಟಾನಿ ಅಭಿನಯಿಸುತ್ತಿದ್ದಾರೆ.

English summary
Bollywood Actor Tiger Shroff Reveals His Relationship Status With Disha Patani.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada