For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಟೈಗರ್ ಶ್ರಾಫ್ ಗೆ ತೆಲುಗಿನ ಈ ಹೀರೋ ಅಚ್ಚು-ಮೆಚ್ಚು

  |

  ನಟ ಟೈಗರ್ ಶ್ರಾಫ್ ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನ ಸಂಪಾದಿಸಿದ್ದಾರೆ. ತಮ್ಮ ಅದ್ಭುತ ಡಾನ್ಸ್, ಹುರಿಗಟ್ಟಿದ ದೇಹ, ಅದ್ಭುತವಾದ ಆಕ್ಷನ್ ದೃಶ್ಯಗಳಿಂದ ಯುವಕರನ್ನು ಸೆಳೆದಿದ್ದಾರೆ. ಬಾಲಿವುಡ್‌ನಲ್ಲಿ ಟೈಗರ್ ಒಬ್ಬ 'ಪೈಸಾ ವಸೂಲ್' ನಟ.

  ಸ್ವತಃ ಅದ್ಭುತವಾಗಿ ಡಾನ್ಸ್ ಹಾಗೂ ಫೈಟ್ ಮಾಡಬಲ್ಲ ಈ ನಟನಿಗೆ ತೆಲುಗಿನ ಹೀರೋ ಒಬ್ಬ ಬಹಳ ಇಷ್ಟವಂತೆ. ಅವರೇ ಅಲ್ಲು ಅರ್ಜುನ್.

  ಹೌದು, ನಿನ್ನೆಯಷ್ಟೆ, ಇನ್‌ಸ್ಟಾಗ್ರಾಂ ನಲ್ಲಿ 'ಆಸ್ಕ್ ಮಿ ಎನಿತಿಂಗ್' ಹೆಸರಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು ಟೈಗರ್ ಶ್ರಾಫ್. ಈ ಸಮಯ ಅಲ್ಲು ಅರ್ಜುನ್ ಅಭಿಮಾನಿಗಳ ಕಡೆಯಿಂದ, ಅಲ್ಲು ಅರ್ಜುನ್ ಕುರಿತಂತೆ ಪ್ರಶ್ನೆ ಎದುರಾಯಿತು.

  ಇದಕ್ಕೆ ಉತ್ತರಿಸಿದ ಟೈಗರ್ ಶ್ರಾಫ್, 'ಅಲ್ಲು ಅರ್ಜುನ್ ನನ್ನ ಅಚ್ಚು ಮೆಚ್ಚಿನ ನಟ. ನಾನು ಅವರಂತೆ ಡಾನ್ಸ್‌ ಮಾಡಲು ಸಾಧ್ಯವಾದರೆ ಸಾಕು' ಎಂದರು. ಟೈಗರ್ ಶ್ರಾಫ್ ಅವರ ಈ ಉತ್ತರ ಅಲ್ಲು ಅರ್ಜುನ್ ಅಭಿಮಾನಿಗಳ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.

  ಟೈಗರ್ ಶ್ರಾಫ್ ಸ್ವತಃ ಅದ್ಭುತವಾದ ಡಾನ್ಸರ್, ಜೊತೆಗೆ ಅದ್ಭುತವಾದ ಫೈಟರ್ ಸಹ. ಅದ್ದಭುತವಾದ ಆಕ್ಷನ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಟೈಗರ್ ಅಷ್ಟೇ ಅಲ್ಲದೆ, ಆಕ್ಷನ್ ದೃಶ್ಯಗಳಲ್ಲಿ ಡ್ಯೂಪ್ ಇಲ್ಲದೇ ತಾವೇ ನಟಿಸುತ್ತಾರೆ.

  ಇದೇ ಪ್ರಶ್ನೋತ್ತರದ ವೇಳೆ ಯುವತಿಯೊಬ್ಬರು, 'ಬ್ರಿಟನ್ ಗೆ ಬಾ, ನನ್ನನ್ನು ಮದುವೆಯಾಗು' ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜಾಕಿ ಶ್ರಾಫ್, 'ಇನ್ನೂ ಕೆಲವು ವರ್ಷಗಳಾಗಬಹುದು, ನಿನಗೆ ಬೆಂಬಲ ನೀಡಲು ಯೋಗ್ಯನಾಗುವವರೆಗೂ. ಆ ವರೆಗೆ ಸಾಕಷ್ಟು ಕಲಿಯುವುದಿದೆ, ಸಂಪಾದಿಸುವುದಿದೆ' ಎಂದಿದ್ದಾರೆ ಟೈಗರ್ ಶ್ರಾಫ್.

  ಅಲ್ಲು ಅರ್ಜುನ್ ಮಗ ಟೈಗರ್ ಶ್ರಾಫ್ ಅವರ ದೊಡ್ಡ ಅಭಿಮಾನಿ, ಟೈಗರ್ ಶ್ರಾಫ್ ಸಿನಿಮಾಗಳನ್ನು ನೋಡುವುದು, ಟೈಗರ್ ನಂತೆ ಡಾನ್ಸ್ ಮಾಡುವುದು ಅಲ್ಲು ಮಗನಿಗೆ ಇಷ್ಟ. ಇದನ್ನು ಅಲ್ಲು ಅರ್ಜುನ್ ಟ್ವಿಟ್ಟರ್‌ ನಲ್ಲಿ ಹಂಚಿಕೊಂಡಿದ್ದರು.

  ಕಳೆದು ಹೋದದನ್ನ ಪುನಃ ಪಡೆದುಕೊಂಡ ಮೇಘಾ ಶೆಟ್ಟಿ | Filmibeat Kannada

  ನಟ ಟೈಗರ್ ಶ್ರಾಫ್ ಸದ್ಯಕ್ಕೆ ಹೀರೊಪನ್ತಿ2, ಗಣ್‌ಪತ್, ಹಾಗೂ ರ್ಯಾಂಬೊ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

  English summary
  Tiger Shroff said his favorite Telugu movie hero is Allu Arjun. He said 'i wish i could move like him'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X