ಮತ್ತೆ ಆಕ್ಷನ್ ಥ್ರಿಲ್ಲರ್ ಚಿತ್ರದೊಂದಿಗೆ ಟೈಗರ್ ಶ್ರಾಫ್ ಎಂಟ್ರಿ
ಬಾಲಿವುಡ್ ಆಕ್ಷನ್ ಸ್ಟಾರ್ ಟೈಗರ್ ಶ್ರಾಫ್ ಮತ್ತೆ ಆಕ್ಷನ್ ಥ್ರಿಲ್ಲಿಂಗ್ ಚಿತ್ರದೊಂದಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. 'ವಾರ್' ಮತ್ತು 'ಭಾಗಿ-3' ಚಿತ್ರಗಳ ಸಕ್ಸಸ್ ಬಳಿಕ ಪುನಃ ಆಕ್ಷನ್ ಜಾನರ್ ಸಿನಿಮಾ ಮಾಡುತ್ತಿದ್ದಾರೆ.
ಈ ಚಿತ್ರಕ್ಕೆ ಗಣಪತ್ ಎಂದು ಹೆಸರಿಟ್ಟಿದ್ದು, ಇತ್ತೀಚಿಗಷ್ಟೆ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಇದೀಗ, ಗಣಪತ್ ಚಿತ್ರದಲ್ಲಿ ಟೈಗರ್ ಶ್ರಾಫ್ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಕುತೂಹಲಕ್ಕೆ ಬ್ರೇಕ್ ಹಾಕಲು ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ.
ಟೈಗರ್ ಶ್ರಾಫ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿದ್ದು, ಸಿನಿಮಾ ಕುರಿತು ಥ್ರಿಲ್ ಆಗಿದ್ದಾರೆ.

ಅಂದ್ಹಾಗೆ, ಈ ಚಿತ್ರವನ್ನು ವಿಕಾಸ್ ಭಾಲ್ ನಿರ್ದೇಶನ ಮಾಡುತ್ತಿದ್ದಾರೆ. ಚಿಲ್ಲರ್ ಪಾರ್ಟಿ, ಕ್ವೀನ್, ಶಾಂದರ್, ಸೂಪರ್ 30 ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ವಿಕಾಸ್ ಭಾಲ್ ಈಗ ಆಕ್ಷನ್ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಈ ಗಣಪತ್ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿರುವ ವಿಕಾಸ್ ಭಾಲ್ ''ನಾನು ನೋಡಿದ ಅತ್ಯುತ್ತಮ ಆಕ್ಷನ್ ಹೀರೋ ಜೊತೆ ನಾನು ಸಿನಿಮಾ ಮಾಡುತ್ತಿದ್ದೇನೆ. ಹಿಂದೆಂದೂ ನೋಡದ ರೀತಿ ಟೈಗರ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ'' ಎಂದು ಖುಷಿ ಹಂಚಿಕೊಂಡಿದ್ದಾರೆ.
ಇನ್ನು ವಾಶು ಭಗ್ನಾನಿ, ವಿಕಾಸ್ ಭಾಲ್, ದೀಪ್ಶಿಖಾ ದೇಶ್ಮುಖ್ ಮತ್ತು ಜಾಕಿ ಭಗ್ನಾನಿ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. 2021ರ ಮಧ್ಯದಿಂದ ಚಿತ್ರೀಕರಣ ಆರಂಭವಾಗಲಿದ್ದು, 2022ರಲ್ಲಿ ತೆರೆಗೆ ಬರಲಿದೆ.


Click it and Unblock the Notifications











