Ganapath: ಟೈಗರ್ ಶ್ರಾಫ್ ವೃತ್ತಿಜೀವನದ ಅತೀ ಕೆಟ್ಟ ಬಾಕ್ಸ್ ಆಫೀಸ್ ಕಲೆಕ್ಷನ್ ಇದೆ!

ಬಾಲಿವುಡ್ ನಟ ಟೈಗರ್ ಶ್ರಾಫ್ ವೃತ್ತಿಜೀವನದ ಕೆಟ್ಟ ಬಾಕ್ಸ್ ಆಫೀಸ್ ಕಲೆಕ್ಷನ್ ಎಂದರೆ ಗಣಪತ್ ಸಿನಿಮಾ ಕಲೆಕ್ಷನ್. ಬಿಡುಗಡೆಯಾದ ಕೇವಲ ಮೂರೇ ದಿನಕ್ಕೆ ಈ ಸಿನಿಮಾ ಚಿತ್ರಮಂದಿರಗಳಿಂದ ಹೊರಬರುವ ಸಾಧ್ಯತೆ ಕಾಣಿಸುತ್ತಿದೆ. ವೀಕೆಂಡ್‌ಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡುವ ಸಿನಿಮಾಗಳ ಪಟ್ಟಿಯಲ್ಲಿ ಗಣಪತ್‌ಗೆ ಯಾವುದೇ ಸ್ಥಾನವಿಲ್ಲ!.

ಮೊದಲ ಸೋಮವಾರದ ಮುಂಚೆಯೇ 'ಗಣಪತ್ ಎ ಹೀರೋ ಈಸ್ ಬರ್ನ್‌'ನ ಆಟ ಮುಗಿದಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಇತ್ತೀಚಿನ ಟೈಗರ್ ಶ್ರಾಫ್ ಆಕ್ಷನ್ ಭಾನುವಾರ ಬಾಕ್ಸ್ ಆಫೀಸ್‌ನಲ್ಲಿ ಯಾವುದೇ ಬೆಳವಣಿಗೆ ಕಾಣಿಸಿಲ್ಲ. ಭಾನುವಾರ ಅದು ಗಳಿಸಿದ್ದು ಕೇವಲ 2.25 ಕೋಟಿ ರೂಪಾಯಿ.

Tiger Shroffs Ganapath records career worst box office performance

ನಿರ್ದೇಶಕ ವಿಕಾಸ್ ಬಹ್ಲ್ ಅವರ 'ಗಣಪತ್' ಅಕ್ಟೋಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ವಿಮರ್ಶಕರು ಮತ್ತು ಅಭಿಮಾನಿಗಳಿಂದ ಉತ್ತಮ ವಿಮರ್ಶೆ ಪಡೆಯುವಲ್ಲಿ ಮೊದಲ ದಿನ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 2.5 ಕೋಟಿ ರೂಪಾಯಿ ಗಳಿಸಿತ್ತು. ಕಳೆದ ಮೂರು ದಿನಗಳಿಂದ ಚಿತ್ರ ಥಿಯೇಟರ್‌ಗಳಲ್ಲಿ ಯಾವುದೇ ಬೆಳವಣಿಗೆಯಿಲ್ಲದೆ ನಿಂತಿದ್ದು, ಜನರು ಬರುವ ನಿರೀಕ್ಷೆಗಳು ಹುಸಿಯಾಗಿವೆ. ಅಕ್ಟೋಬರ್ 22 ರಂದು ಚಿತ್ರ 2.25 ಕೋಟಿ ಗಳಿಸಿದೆ. ಹೀಗಾಗಿ ಮೂರು ದಿನಗಳಲ್ಲಿ ಕೇವಲ 7 ಕೋಟಿ ರೂಪಾಯಿ ಗಳಿಸುವ ಮೂಲಕ ಅತೀ ಕಡಿಮೆ ಸಂಗ್ರಹಿಸಿದೆ.

ಸಾಲು ಸಾಲು ರಜೆಯಲ್ಲೂ ಏರಿಕೆಯಾಗದ ಗಣಪತ್ ಕಲೆಕ್ಷನ್

ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದ್ದ ಟೈಗರ್ ಶ್ರಾಫ್ ಅವರ ಗಣಪತ್ ಈಗ ನಟನ ಜೀವನದ ಅತೀ ಕಡಿಮೆ ಹಣ ಗಳಿಸಿದ ಸಿನಿಮಾವಾಗಿ ದಾಖಲಾಗುತ್ತಿದೆ. ಈ ಚಿತ್ರವು 5 ದಿನಗಳ ದಸರಾ ವಾರಾಂತ್ಯದಲ್ಲಿ ಉತ್ತಮ ಕಲೆಕ್ಷನ್ ಮಾಡುವ ಗುರಿಯನ್ನು ಹೊಂದಿತ್ತು, ಆದರೆ ಎಲ್ಲಾ ಭರವಸೆಗಳು ಈಗ ಹುಸಿಯಾಗಿದೆ.

Tiger Shroffs Ganapath records career worst box office performance

ದಸರಾ ಮುಗಿಯುವ ವೇಳೆಗೆ, ಈ ಸಿನಿಮಾ ಕನಿಷ್ಠ ಎರಡಂಕಿಯ ಕಲೆಕ್ಷನ್ ಮಾಡಬಹುದು ಅಷ್ಟೇ. ನಟನ ಹೀರೋಪಂತಿ 2 ಕೂಡ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿರಲಿಲ್ಲ. ಈಗ ಅಮಿತಾಬ್ ಬಚ್ಚನ್, ಕೃತಿ ಸನನ್ ನಂತಹ ನಟರಿದ್ದರೂ ಗಲ್ಲಾ ಪೆಟ್ಟಿಗೆಯಲ್ಲಿ ಚಿಕ್ಕ ಸದ್ದು ಮಾಡಲು ಆಗುತ್ತಿಲ್ಲ. ಇದು ಅವರ ವೃತ್ತಿಜೀವನದ ಅತೀ ಕಳಪೆ ಕಲೆಕ್ಷನ್.

ಗಣಪತ್

ಈ ಜಗತ್ತಿನಲ್ಲಿ, ಗಣಪತ್ ಅಲಿಯಾಸ್ ಗುಡ್ಡು (ಟೈಗರ್ ಶ್ರಾಫ್) ಬಡವರ ರಕ್ಷಕನಾಗಿದ್ದು, ಚಿತ್ರದ ಮೊದಲಾರ್ಧದಲ್ಲಿ ತನ್ನ ಹಣೆಬರಹದ ಬಗ್ಗೆ ತಿಳಿದಿಲ್ಲದ ವ್ಯಕ್ತಿಯಾಗಿ ಕಾಣಿಸಿಕೊಂಡ ಅವರು, ಬಳಿಕ ತನ್ನ ಅಸ್ತಿತ್ವದ ಬಗ್ಗೆ ತಿಳಿಯುತ್ತಾನೆ. ನಂತರ ತನ್ನ ಜನರಿಗೆ ನಾಯಕನಾಗಿ ಗಣಪನಾಗಿ ರೂಪಾಂತರಗೊಳ್ಳುತ್ತಾನೆ. ಈ ಹೋರಾಟದಲ್ಲಿ, ಅವರು ಸಮರ ಕಲೆಗಳಲ್ಲಿ ತರಬೇತಿ ಪಡೆದಿರುವ ಮತ್ತು ಪುರುಷರಿಗೆ ಸರಿಸಮನಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರುವ ಜಸ್ಸಿ (ಕೃತಿ ಸನನ್) ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೆ.

ಇನ್ನು, 2014 ರಲ್ಲಿ ಬಿಡುಗಡೆಯಾದ ಟೈಗರ್ ಶ್ರಾಫ್ ಅವರ ಚೊಚ್ಚಲ ಚಿತ್ರ 'ಹೀರೋಪಂತಿ'ಗೂ ನಾಯಕಿ ಕೃತಿ ಸನನ್. ಈ ಸಿನಿಮಾದಲ್ಲೂ ಅವರೆ ನಾಯಕಿ. ಆದರೆ, ಗಣಪತ್ ಅವರಿಗೂ ಕೂಡ ಇದು ದೊಡ್ಡ ಲಾಸ್. ಸಾಲು ಸಾಲು ಸೋಲುಗಳು ಅವರನ್ನು ಆವರಿಸಿವೆ. ಪಾಣಿಪತ್, ಬಚ್ಚನ್ ಪಾಂಡೆ, ಭೇಡಿಯಾ, ಶೆಹಜಾದಾ ಮತ್ತು ಆದಿಪುರುಷದಂತಹ ಚಿತ್ರಗಳ ಸತತ ಸೋಲುಗಳ ಸಾಲಿಗೆ ಗಣಪತ್ ಕೂಡ ಸೇರಿಕೊಂಡಿದೆ.

ಇನ್ನು, ಟೈಗರ್ ಶ್ರಾಫ್ ಮುಂದೆ ರೋಹಿತ್ ಶೆಟ್ಟಿ ನಿರ್ದೇಶನದ ಅಕ್ಷಯ್ ಕುಮಾರ್ ಜೊತೆಗೆ ಬಡೇ ಮಿಯಾನ್ ಚೋಟೆ ಮಿಯಾನ್ ಸಿನಿಮಾ ಮತ್ತು ಸಿಂಗಮ್ ಎಗೇನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Tiger Shroff's Ganapath box office collection day 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X