»   » ಸಲ್ಮಾನ್ ಖಾನ್ ಈಸ್ ಬ್ಯಾಕ್: ಬಾಕ್ಸ್ ಆಫೀಸ್ ನಲ್ಲಿ 'ಟೈಗರ್' ಹವಾ

ಸಲ್ಮಾನ್ ಖಾನ್ ಈಸ್ ಬ್ಯಾಕ್: ಬಾಕ್ಸ್ ಆಫೀಸ್ ನಲ್ಲಿ 'ಟೈಗರ್' ಹವಾ

Posted By:
Subscribe to Filmibeat Kannada

'ಟ್ಯೂಬ್ ಲೈಟ್' ಚಿತ್ರದ ದೊಡ್ಡ ಸೋಲಿನ ಬಳಿಕ ಸಲ್ಮಾನ್ ಖಾನ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. 'ಟೈಗರ್ ಜಿಂದಾ ಹೈ' ಚಿತ್ರದ ಮೂಲಕ ಬಾಲಿವುಡ್ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆದಿದ್ದಾರೆ.

ಮೊದಲ ದಿನ 34 ಕೋಟಿ ಗಳಿಕೆ ಕಂಡ 'ಟೈಗರ್ ಜಿಂದಾ ಹೈ' ಚಿತ್ರ, ಎರಡನೇ ದಿನ 35 ಕೋಟಿ ಹಾಗೂ ಮೂರನೇ ದಿನ 36 ಕೋಟಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಮೊದಲ ಮೂರು ದಿನದಲ್ಲಿ ನೂರು ಕೋಟಿ ಕ್ಲಬ್ ಸೇರಿತ್ತು. ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿಯೇ 100 ಕೋಟಿ ಗಳಿಸಿದ ಸಲ್ಮಾನ್ ಖಾನ್ ಸಿನಿಮಾ ತನ್ನ ಬೇಟೆ ಮುಂದುವರೆಸಿದೆ.

ವಿಮರ್ಶೆ: ದೇಶಗಳ ನಡುವೆ ಬಾಂಧವ್ಯ ಬೆಸೆಯುವ 'ಟೈಗರ್'

Tiger zinda hai movie collection

ದಾಖಲೆಗಳ ಪ್ರಕಾರ, ಸಲ್ಲು ಸಿನಿಮಾ 5 ದಿನಗಳಲ್ಲಿ ಸುಮಾರು 150 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಸಕ್ಸಸ್ ನೋಡಿದ್ರೆ, ಸದ್ಯದಲ್ಲೇ 200 ಕೋಟಿ ದಾಟಲಿದೆ. ಅಂದ್ಹಾಗೆ, 'ಟೈಗರ್ ಜಿಂದಾ ಹೈ' ಸಿನಿಮಾ 2012 ರಲ್ಲಿ ತೆರೆಕಂಡಿದ್ದ ಏಕ್ತಾ ಟೈಗರ್ ಸಿನಿಮಾದ ಮುಂದುವರೆದ ಭಾಗ. 'ಏಕ್ತಾ ಟೈಗರ್' ಬಾಕ್ಸ್ ಆಫಿಸ್ ನಲ್ಲಿ 320 ಕೋಟಿ ಬಿಸಿನೆಸ್ ಮಾಡಿತ್ತು.

ಯಶ್ ರಾಜ್ ಫಿಲ್ಮ್ಸ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಅಬ್ಬಾಸ್ ಅಲಿ ಜಾಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಲ್ಮಾನ್ ಖಾನ್ ಜೊತೆಯಲ್ಲಿ ಮಾಜಿ ಪ್ರಯೇಸಿ ಕತ್ರಿನಾ ಕೈಫ್ ಜೋಡಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಜನಮೆಚ್ಚಿಕೊಂಡಿದ್ದಾರೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 22 ರಂದು ಸಿನಿಮಾ ತೆರೆಕಂಡಿತ್ತು. ಜಗತ್ತಿನಾದ್ಯಂತ ಸುಮಾರು 5700 ಸ್ಕ್ರೀನ್ ಗಳಲ್ಲಿ ಭಾರತದಲ್ಲಿ 4700 ಸ್ಕ್ರೀನ್ ನಲ್ಲಿ ಬಿಡುಗಡೆಯಾಗಿತ್ತು.

English summary
After Tubelight’s lukewarm performance at the box office, Salman Khan is back with 'Tiger Zinda Hai', that is expected to cross the Rs 200 crore mark by the end of its first week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X