'ಟೈಗರ್ ಜಿಂದಾ ಹೈ' ಚಿತ್ರದ ಟಿಕೆಟ್ ಬೆಲೆ ಇಷ್ಟೊಂದಾ?
ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಜಿಂದಾ ಹೈ' ಚಿತ್ರದ ರಿಲೀಸ್ ದಿನಾಂಕ ಹತ್ತಿರ ಬರುತ್ತಿದ್ದಂತೆ ಸಲ್ಲು ಅಭಿಮಾನಿಗಳ ಸಂಭ್ರಮ ಹೆಚ್ಚಾಗುತ್ತಿದೆ. ಈಗಾಗಲೇ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ.
ಡಿಸೆಂಬರ್ 22 ರಂದು ಸಲ್ಲು ಸಿನಿಮಾ ವರ್ಲ್ಡ್ ವೈಡ್ ತೆರೆಕಾಣುತ್ತಿದ್ದು, ಒಂದು ಟಿಕೆಟ್ ಬೆಲೆ ಸುಮಾರು 2400 ರೂಪಾಯಿವರೆಗೂ ಮಾರಾಟವಾಗುತ್ತಿದೆಯಂತೆ. ಕೆಲವು ಮಲ್ಟಿಫ್ಲೆಕ್ಸ್ ಗಳು 2000 ದಿಂದ 2400 ರೂಪಾಯಿವರೆಗೂ ಶುಕ್ರವಾರದ ಟಿಕೆಟ್ ನಿಗದಿ ಮಾಡಿದೆ ಎನ್ನಲಾಗಿದೆ.

ಅದನ್ನ ಹೊರತು ಪಡಿಸಿದರೇ, ಬೇರೆ ಬೇರೆ ರಾಜ್ಯಗಳಲ್ಲಿ ಟಿಕೆಟ್ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು. ದೆಹಲಿಯಲ್ಲಿ 2000, 2400 ಹಾಗೂ ಮುಂಬೈನಲ್ಲಿ 1200, 1600 ರೂಪಾಯಿವರೆಗೂ ಮಾರಾಟವಾಗುತ್ತಿದೆ.
ಇನ್ನು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸುಮಾರು 300 ವರೆಗೂ ಟಿಕೆಟ್ ಬೆಲೆ ನಿಗದಿ ಮಾಡಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಬುಕ್ಕಿಂಗ್ ಸೋಲ್ಡ್ ಔಟ್ ಆಗಿದ್ದು, ಸಲ್ಲು ಸಿನಿಮಾವನ್ನ ಮೊದಲ ಶೋ ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡಿರುವ ಈ ಚಿತ್ರವನ್ನ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಅಂಗಡ್ ಬೇಡಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.


Click it and Unblock the Notifications











