ಸುದೀಪ್ ಇಲ್ಲದ 'ಟೈಗರ್ ಜಿಂದಾ ಹೈ' ಟ್ರೈಲರ್ ರಿಲೀಸ್.!

By Bharath Kumar

ಎಲ್ಲ ಅಂದುಕೊಂಡಂತೆ ಆಗಿದ್ದರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸಲ್ಮಾನ್ ಖಾನ್ ಜೊತೆ ಅಭಿನಯಿಸಬೇಕಿತ್ತು. ಆದ್ರೆ, ಸುದೀಪ್ ಅವರ ಬಿಜಿ ಶೆಡ್ಯೂಲ್ ನಿಂದ ಈ ಸಿನಿಮಾದಿಂದ ಕಿಚ್ಚ ಹಿಂದೆ ಸರಿಯಬೇಕಾಯಿತು. ಇದೀಗ ಸುದೀಪ್ ಇಲ್ಲದೇ ಸಲ್ಮಾನ್ ಖಾನ್ ಅಭಿನಯಿಸಿರುವ 'ಟೈಗರ್ ಜಿಂದಾ ಹೈ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

ಇಂಡಿಯನ್ ಸೀಕ್ರೆಟ್ ಏಜೆಂಟ್ ಪಾತ್ರದಲ್ಲಿ ಸಲ್ಲು ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಹಿಂದೆ 'ಏಕ್ತಾ ಟೈಗರ್' ಚಿತ್ರದಲ್ಲಿ ಸಲ್ಲು ಅಬ್ಬರಿಸಿದ್ದರು. ಈ ಚಿತ್ರದ ಮುಂದುವರೆದ ಭಾಗ 'ಟೈಗರ್ ಜಿಂದಾ ಹೈ' ಚಿತ್ರವಾಗಿದ್ದು, ಈ ಸಲವೂ ತಮ್ಮ ಅಭಿಮಾನಿಗಳಿಗೆ ಫುಲ್ ಎಂಟರ್ ಟೈನ್ ನೀಡಲಿದ್ದಾರೆ.

Tiger Zinda Hai trailer release

ಇನ್ನು ಸಲ್ಮಾನ್ ಗೆ ಕತ್ರಿನಾ ಕೈಫ್ ಸಾಥ್ ಕೊಟ್ಟಿದ್ದು, ಪಾಕಿಸ್ತಾನದ ಸ್ಪೈ (ಪತ್ತೆದಾರಿ) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ 'ಏಕ್ತಾ ಟೈಗರ್' ನಲ್ಲಿದ್ದ ಅದ್ಭುತ ಸಾಹಸ ಮತ್ತೆ ಈ ಚಿತ್ರದಲ್ಲೂ ಮುಂದುವರೆಯಲಿದೆ.

ಅಂದ್ಹಾಗೆ, ಇದೊಂದು ಟೆರರಿಸಂ ಕುರಿತಾದ ಕಥೆಯಾಗಿದ್ದು, ಭಾರತದ 25 ನರ್ಸ್ ಗಳನ್ನ ಐ.ಎಸ್.ಐ ಟೆರರಿಸ್ಟ್ ಕಿಡ್ನಾಪ್ ಮಾಡ್ತಾರೆ. ಅವರನ್ನ ರಕ್ಷಿಸಿ ಭಾರತಕ್ಕೆ ಕರೆತರುವುದು 'ಟೈಗರ್ ಜಿಂದಾ ಹೈ' ಆಪರೇಷನ್.

Tiger Zinda Hai trailer release

ಅಲಿ ಅಬ್ಬಾಸ್ ಜಾಫರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಖಳನಾಯಕನಾಗಿ ಅಂಗದ್ ಬೇಡಿ ಬಣ್ಣ ಹಚ್ಚಿದ್ದಾರೆ. ಸದ್ಯ, ಪೋಸ್ಟರ್ ಮತ್ತು ಟ್ರೈಲರ್ ಮೂಲಕ ನಿರೀಕ್ಷೆ ಡಬಲ್ ಮಾಡಿರುವ 'ಟೈಗರ್ ಜಿಂದಾ ಹೈ' ಇದೇ ಕ್ರಿಸ್ ಮಸ್ ಪ್ರಯುಕ್ತ ಬಿಡುಗಡೆಯಾಗುತ್ತಿದೆ.

More from Filmibeat

English summary
The trailer of the much-awaited Christmas release Tiger Zinda Hai is finally out, and Salman Khan is back with a bang.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X