For Quick Alerts
  ALLOW NOTIFICATIONS  
  For Daily Alerts

  ಟಿಕ್ ಟಾಕ್ ಸ್ಟಾರ್ ಮೋಹಿತ್ ರನ್ನ ಗುಂಡಿಕ್ಕಿ ಹತ್ಯೆ ಮಾಡಿದ ಅಪರಿಚಿತರು

  |

  ಟಿಕ್ ಟಾಕ್ ಅಪ್ಲಿಕೇಶನ್ ಮೂಲಕ ಅನೇಕರು ಸ್ಟಾರ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಂತು ಟಿಕ್ ಟಾಕ್ ಬಳಸುವವರು ಹೆಚ್ಚಾಗಿದ್ದಾರೆ. ಇದೆ ಟಿಕ್ ಟಾಕ್ ಮೂಲಕ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಮೋಹಿತ್ ಮೋರ್ ಎಂಬಾತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.

  ನಿನ್ನೆ(ಮೇ-21) ದೆಹಲಿಯಲ್ಲಿ ಈ ಘಟನೆ ಸಂಭವಸಿದೆ. ದೆಹಲಿಯ ನಜಾಫ್ ಗಡದಲ್ಲಿ ವಾಸವಿದ್ದ ಮೋಹಿತ್ ಮೋರ್ ಅವರ ಮೇಲೆ ಏಕಾಏಕಿ ಮೂವರು ಅಪರಿಚಿತರು ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದಾರೆ.

  ಪದೇ ಪದೇ 'ಕಿಸ್' ಬಗ್ಗೆ ಪ್ರಶ್ನೆ ಕೇಳಿದ ರಿಪೋರ್ಟರ್ : ಶಾಹಿದ್ ಅಸಮಾಧಾನ

  ಹರಿಯಾಣ ಮೂಲದವರಾದ ಮೋಹಿತ್ ಮೋರ್ ದೆಹಲಿಯ ನಜಾಫ್ ಗಡದಲ್ಲಿ ವಾಸಿಸುತ್ತಿದ್ದರು. ಜಿಮ್ ಟ್ರೈನರ್ ಆಗಿಯೂ ಕೆಲಸ ಮಾಡುತ್ತಿದ್ದ ಮೋಹಿತ್ ಟಿಕ್ ಟಾಕ್ ಮೂಲಕ ಭಾರಿ ಜನಪ್ರಿಯ ಗಳಿಸಿದ್ದರು. 5 ಲಕ್ಷಕ್ಕು ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಮೋಹಿತ್.

  ಮೋಹಿತ್ ಸ್ನೇಹಿತನನ್ನು ಭೇಟಿಯಾಗಲು ಮನೆಯ ಪಕ್ಕದಲ್ಲಿದ್ದ ಅಂಗಡಿಗೆ ತೆರಳಿದ್ದಾರೆ. ಅದೆ ಸಮಯದಲ್ಲಿ ಮೋಹತ್ ಮೇಲೆ ಗುಂಡಿನ ದಾಳಿ ನಡೆದಿದೆ. ಮೋಹಿತ್ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಎಂಟು ಗುಂಡುಗಳು ಬಿದ್ದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

  ಕಪ್ಪು ಬಣ್ಣದ ಹೆಲ್ಮೆಟ್ ಧರಿಸಿರುವ ಮೂವರು ಬೈಕ್ ಯಲ್ಲಿ ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಬಗ್ಗೆ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಆದಷ್ಟು ಬೇಗ ಆರೋಪಿಗಳನ್ನು ಬಂದಿಸುವುದಾಗಿ ಹೇಳಿದ್ದಾರೆ.

  English summary
  Famous Tik Tok star and gym trainer Mohith was shoot dead in Delhi. He had become popular in his locality for his TikTok videos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X