ಅಂಜಲಿ ಅರೋರಾ ಎಂಎಂಎಸ್ ವಿಡಿಯೋ ವಿವಾದ: ಕಣ್ಣೀರಿಟ್ಟ ದೆಹಲಿ ಚೆಲುವೆ!

ಸೋಶಿಯಲ್ ಮೀಡಿಯಾ ಪುಣ್ಯದಿಂದ ಪ್ರಪಂಚದ ಮೂಲೆ ಮೂಲೆಯಲ್ಲಿರುವವರು ರಾತ್ರೋರಾತ್ರಿ ಸ್ಟಾರ್‌ಗಳಾಗಿಬಿಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ ಫಾಲೋ ಮಾಡುವವರಿಗೆ ಅಂಜಲಿ ಅರೋರ ಯಾರು ಅನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಇನ್‌ಸ್ಟಾ ರೀಲ್‌ಗಳಿಂದ ಈಕೆ ಸಿಕ್ಕಾಪಟ್ಟೆ ಫೇಮಸ್. ಇತ್ತೀಚೆಗೆ ಈಕೆಯ ಎಂಎಂಎಸ್‌ ಅಂತೇಳಿ ಒಂದು ವಿಡಿಯೋ ವೈರಲ್‌ ಆಗಿತ್ತು. ಆ ಬಗ್ಗೆ ಸ್ವತಃ ಅಂಜಲಿ ಅರೋರ ಈಗ ಸ್ಪಷ್ಟನೆ ನೀಡಿದ್ದಾಳೆ.

ಟಿಕ್‌ಟಾಕ್, ಇನ್‌ಸ್ಟಾ ರೀಲ್‌ಗಳಿಂದ ಎಲ್ಲಾ ಜನ ಸ್ಟಾರ್‌ಗಳಾಗಿದ್ದಾರೆ. ಅದರಲ್ಲಿ ದೆಹಲಿ ಹುಡುಗಿ ಅಂಜಲಿ ಕೂಡ ಒಬ್ಬರು. 'ಕಚ್ಚಾ ಬದಾಮ್' ಹಾಡಿಗೆ ಸಾಕಷ್ಟು ಜನ ರೀಲ್‌ಗಳನ್ನು ಮಾಡಿದ್ದರು. ಅದೇ ಹಾಡಿಗೆ ಪಿಂಕ್‌ ಕಲರ್ ಡ್ರೆಸ್‌ನಲ್ಲಿ ಅಂಜಲಿ ಅರೋರ ಮಾಡಿದ ಬಿಂದಾಸ್ ಡ್ಯಾನ್ಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಇನ್‌ಸ್ಟಾ ರೀಲ್ರಾತ್ರೋರಾತ್ರಿ ಆಕೆಯನ್ನು ಸೆಲೆಬ್ರೆಟಿ ಮಾಡಿ ಬಿಡ್ತು. ಅದ್ಯಾವ ಮಟ್ಟಿಗೆ ಅಂದರೆ ಕಂಗನಾ ರಾಣಾವತ್ ನಡೆಸಿಕೊಡುವ 'ಲಾಕಪ್' ಅನ್ನುವ ಶೋಗೆ ಎಂಟ್ರಿ ಕೊಡುವ ಮಟ್ಟಿಗೆ.

ಹೀಗೆ ನೆಟ್‌ವರ್ಲ್ಡ್‌ನಲ್ಲಿ ಫೇಮಸ್ ಆದ ಅಂಜಲಿ ಅರೋರಾಗೆ ಅದೇ ನೆಟ್‌ ವರ್ಲ್ಡ್‌ನಲ್ಲಿ ಆಘಾತ ಎದುರಾಗಿತ್ತು. ಕಳೆದ ಕೆಲ ದಿನಗಳಿಂದ ಅಂಜಲಿ ಹೆಸರಿನಲ್ಲಿ ಒಂದು ಅಶ್ಲೀಲ ಎಂಎಂಎಸ್ ವಿಡಿಯೋ ಹರಿದಾಡ್ತಿದೆ. ಆಕೆಯ ಜನಪ್ರಿಯತೆ ಸಹಿಸದ ಕಿಡಿಗೇಡಿಗಳು ಫೇಕ್ ವಿಡಿಯೋ ಮಾಡಿ ತೇಲಿ ಬಿಟ್ಟಿದ್ದಾರೆ. ಅ ವಿಡಿಯೋದಲ್ಲಿ ಅಂಜಲಿ ಮುಖ ಕಾಣಿಸುವಂತಿದ್ದು, ಆಕೆಗೆ ಆಪ್ತನಾಗಿರುವ ಯುವಕನೇ ಆ ವಿಡಿಯೋದಲ್ಲಿ ಇರುವುದನ್ನು ನೋಡಿದ ಕೆಲವರು ಇದು ನಿಜವಾದ ಎಂಎಂಎಸ್ ವಿಡಿಯೋ ಅಂತಲೇ ನಂಬಿದ್ದಾರೆ. ಸದ್ಯ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಂಜಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾಳೆ.

 ಆ ವಿಡಿಯೋದಲ್ಲಿ ಇರುವುದು ನಾನಲ್ಲ

ಆ ವಿಡಿಯೋದಲ್ಲಿ ಇರುವುದು ನಾನಲ್ಲ

ಅಂಜಲಿ ಅರೋರ "ಆ ವಿಡಿಯೋದಲ್ಲಿ ಇರುವುದು ನಾನಲ್ಲ, ಅದು ಫೇಕ್ ವಿಡಿಯೋ. ಆ ವಿಡಿಯೋ ಯಾರು ಮಾಡಿದರು, ಯಾಕೆ ಮಾಡಿದರು ಅನ್ನುವುದು ನನಗೆ ಗೊತ್ತಿಲ್ಲ. ಆ ವಿಡಿಯೋದಿಂದ ನನಗೆ ಬಹಳ ಆಘಾತವಾಗಿದೆ" ಎಂದು ಭಾವುಕರಾಗಿ ಮಾತನಾಡಿದ್ದಾಳೆ.

 ನನನ್ನು ಎಲ್ಲರೂ ಬೈಯುತ್ತಿದ್ದಾರೆ

ನನನ್ನು ಎಲ್ಲರೂ ಬೈಯುತ್ತಿದ್ದಾರೆ

"ಆ ವಿಡಿಯೋಗೂ ನನಗೂ ಸಂಬಂಧವಿಲ್ಲ. ನನಗೆ ಸಂಬಂಧವಿಲ್ಲದ ವಿಡಿಯೋಗೆ ನನ್ನ ಹೆಸರು ಸೇರಿಸಿ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ನನ್ನ ಫೋಟೊ ಅಂಟಿಸಿ, ಬೇಕಂತಲೇ ಹೀಗೆಲ್ಲಾ ಮಾಡಿದ್ದಾರೆ. ನನ್ನನ್ನು ಈ ಸ್ಥಾನಕ್ಕೆ ಕರೆತಂದ ನೆಟ್ಟಿಗರೇ ಈಗ ನನ್ನನ್ನು ಬೈಯುತ್ತಿದ್ದಾರೆ. ನನಗೂ ಒಂದು ಫ್ಯಾಮಿಲಿ ಇದೆ. ನನ್ನ ಮನೆಯವರು ಆ ವಿಡಿಯೋ ನೋಡುತ್ತಾರೆ ಅನ್ನುವ ಪರಿಜ್ಞಾನವಿಲ್ಲದೇ ಹೀಗೆಲ್ಲಾ ಮಾಡುವುದು ಸರಿಯಲ್ಲ. ಬರೀ ಯೂಟ್ಯೂಬ್‌ ವೀವ್ಸ್‌ಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಇದನ್ನೆಲ್ಲಾ ತಡೆದುಕೊಳ್ಳುವ ಶಕ್ತಿ ನನಗಿಲ್ಲ" ಎಂದು ಅಂಜಲಿ ಕಣ್ಣೀರು ಇಟ್ಟಿದ್ದಾಳೆ.

 ಅಂಜಲಿ ಅರೋರ ಸಖತ್ ಟ್ರೋಲ್

ಅಂಜಲಿ ಅರೋರ ಸಖತ್ ಟ್ರೋಲ್

ಫೇಕ್ ಎಂಎಂಎಸ್‌ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಂಜಲಿ ಅರೋರ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾಳೆ. ಆಕೆ ಯಾವುದೇ ವಿಡಿಯೋ ಹಾಕಿದರೂ ನೆಟ್ಟಿಗರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅಂಜಲಿ ರಾಷ್ಟ್ರಧ್ವಜ ಹಿಡಿದುಕೊಂಡಿರೋವ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಆಕೆಯ ಡ್ರೆಸ್ ನೋಡಿ ಕೆಲವರು ಮನಬಂದಂತೆ ಟೀಕೆ ಮಾಡುತ್ತಿದ್ದಾರೆ.

 ಇನ್‌ಸ್ಟಾಗ್ರಾಂನಲ್ಲಿ ಅಂಜಲಿಗೆ ಸಿಕ್ಕಾಪಟ್ಟೆ ಕ್ರೇಜ್

ಇನ್‌ಸ್ಟಾಗ್ರಾಂನಲ್ಲಿ ಅಂಜಲಿಗೆ ಸಿಕ್ಕಾಪಟ್ಟೆ ಕ್ರೇಜ್

ಅಂಜಲಿ ಅರೋರ ಇನ್‌ಸ್ಟಾ ವಿಡಿಯೋಗಳಿಗೆ ಭಾರೀ ಕ್ರೇಜ್ ಇದೆ. ಇನ್‌ಸ್ಟಾಗ್ರಾಂನಲ್ಲಿ ಅಂಜಲಿಗೆ 11 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ನು ಕೆಲ ಆಲ್ಬಮ್‌ ಸಾಂಗ್‌ಗಳಲ್ಲೂ ಈಕೆ ಮಿಂಚಿದ್ದಾಳೆ. ಯಾವುದೇ ಬಾಲಿವುಡ್ ಹೀರೊಯಿನ್‌ಗೂ ಕಮ್ಮಿ ಅನ್ನುವಂತ ಕ್ರೇಜ್‌ ಈ ದೆಹಲಿ ಮೂಲದ ಚೆಲುವೆಗಿದೆ. ಹಿಂದಿ ಬಿಗ್‌ಬಾಸ್‌ ಮನೆಗೂ ಅಂಜಲಿ ಹೋಗುವ ಬಗ್ಗೆ ಗುಸುಗುಸು ಶುರುವಾಗಿದೆ. ಇನ್ನು ಹಾಟ್ ಹಾಟ್ ವಿಡಿಯೋ ಹಾಗೂ ಫೋಟೊಗಳಿಂದ ಚೆಲುವೆ ಸಖತ್ ಸದ್ದು ಮಾಡುತ್ತಿರುತ್ತಾಳೆ.

More from Filmibeat

English summary
Tiktok Star Anjali Arora Breaks Down Into Tears About Fake MMS Controversy. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X