ಮದುವೆ ಬೇಡ , ಗಂಡ ಬೇಡ ಆದರೆ ಮಗು ಮಾತ್ರ ಬೇಕು ಎಂದ ಬಿಗ್ ಬಾಸ್ ಸ್ಫರ್ಧಿ...!

ಮದುವೆ ಮತ್ತು ತಾಯ್ತನದ ಸುಖ ಹೆಣ್ಣಿನ ಬದುಕಿನ ಬಹುದೊಡ್ಡ ಹಂತ ಎನ್ನುವುದು ಹಿಂದೆ ನಂಬಲಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಬಾಡಿಗೆ ತಾಯ್ತನದ ಮೂಲಕ ಅನೇಕರು ತಾಯಿಯಾಗುತ್ತಿದ್ದಾರೆ. ಕರಣ್‌ ಜೋಹರ್‌, ತುಷಾರ್‌ ಕಪೂರ್‌, ಸೇರಿ ಅನೇಕರು ಮದುವೆಯಾಗದೇ ತಂದೆ ಕೂಡ ಆದ ಉದಾಹರಣೆಗಳು ಇಲ್ಲಿವೆ. ಈ ಸಾಲಿಗೆ ಸೇರುವ ಬಯಕೆಯನ್ನು ಟೀನಾ ದತ್ತ ವ್ಯಕ್ತಪಡಿಸಿದ್ದಾರೆ.

ಹೌದು, ಟೀನಾ ದತ್ತ, ಉತ್ತರನ್ ಧಾರಾವಾಹಿಯ ಮೂಲಕ ಖ್ಯಾತಿಯನ್ನು ಪಡೆದು ಆ ನಂತರ ಹಿಂದಿಯ ಬಿಗ್ ಬಾಸ್ ಸೀಸನ್ 16ರಲ್ಲಿ ಕೂಡ ಕಾಣಿಸಿಕೊಂಡ ಟೀನಾ ದತ್ತ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ. ನನಗೆ ಮದುವೆ ಆಗಬೇಕು, ಗಂಡ ಬೇಕೆ ಬೇಕು ಅಂತೇನು ಇಲ್ಲ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಆಸೆ ನನಗೆ ಇದೆ ಎಂದು ಹೇಳಿದ್ದಾರೆ

Tina Datta a former Bigg Boss contestant wants to become a mother without getting married

ಮದುವೆಯಾಗದೇ ನಮ್ಮ ನಡುವೆ ಅನೇಕರು ತಾಯ್ತನದ ಸುಖ ಅನುಭವಿಸುತ್ತಿದ್ದಾರೆ, ಸುಶ್ಮೀತಾ ಸೇನ್ ಅವರಂತಹ ನಾಯಕಿಯರು ಮಕ್ಕಳನ್ನು ದತ್ತು ಪಡೆದು ಸಾಕಿ ಸಲುಹುತ್ತಿದ್ದಾರೆ ಎಂದಿರುವ ಟೀನಾ ದತ್ತ ಈಗೀಗ ಸಿಂಗಲ್ ಪೇರೆಂಟಿಂಗ್‌ ಸಮಾಜದಲ್ಲಿ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ. ಇನ್ನು ನನ್ನ ತಂದೆ ತಾಯಿ ನನ್ನ ಈ ನಿರ್ಧಾರವನ್ನು ಮೆಚ್ಚಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ ಎಂದಿರುವ ಟೀನಾ ದತ್ತ ನನ್ನ ಹೆತ್ತವರು ಬೆಂಗಾಲಿ ಹಿನ್ನೆಲೆಯಿಂದ ಬಂದವರು, ಪ್ರಗತಿಪರ ಚಿಂತಕರು ಹೀಗಾಗಿ ನನ್ನ ಈ ಆಯ್ಕೆಯನ್ನು ಅವರು ಬೆಂಬಲಿಸುವುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದ್ದಾರೆ.

ಸ್ವತಂತ್ರ್ಯವಾಗಿ ಬದುಕುವುದರಲ್ಲಿ ನನಗೆ ನಂಬಿಕೆ ಇದೆ, ನನ್ನನ್ನು ಮತ್ತು ನನ್ನ ಕುಟುಂಬವನ್ನು ನಾನು ಈಗ ನೋಡಿಕೊಳ್ಳುತ್ತಿದ್ದೇನೆ ಎಂದರೆ ಮುಂದೊಂದು ದಿನ ಮಗುವನ್ನು ಕೂಡ ನಾನು ಸಾಕಿ ಸಲುಹಬಹುದು ಆ ಶಕ್ತಿ ನನ್ನಲ್ಲಿದೆ ಎಂದು ಕೂಡ ಟೀನಾ ದತ್ ಹೇಳಿದ್ದಾರೆ. ಮುಂದುವರೆದು ಮಗು ಬೇಕೆಂದರೆ ಮದುವೆಯಾಗಲೇಬೇಕು ಅದಕ್ಕೆ ಗಂಡನ ಮೇಲೆಯೇ ಅವಲಂಬಿತರಾಗಿರಬೇಕು ಎಂಬ ಕಾಲ ಇದಲ್ಲ, ಮಕ್ಕಳನ್ನು ದತ್ತು ಪಡೆದಿರುವ ಅನೇಕ ಸ್ನೇಹಿತರು ನನಗೆ ಇದ್ದಾರೆ ಎಂದಿರುವ ಟೀನಾ ದತ್ತ ಅವರು ಸೆಲೆಬ್ರಿಟಿ ಅಲ್ಲ ಹೀಗಾಗಿ ಅವರು ಮಕ್ಕಳನ್ನು ದತ್ತು ಪಡೆದ ವಿಚಾರ ಸುದ್ದಿಯಾಗಿಲ್ಲ ಅಷ್ಟೇ ಎಂದು ಹೇಳಿದ್ದಾರೆ. ಸಮಾಜ ಬದಲಾಗುತ್ತಿದೆ, ಈ ತರಹದ ವಿಚಾರಗಳನ್ನು ಒಪ್ಪಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಸದ್ಯ ನನಗೆ ಈ ಕುರಿತು ನಿರ್ದಿಷ್ಟವಾದ ಯೋಚನೆ ಯೋಜನೆ ಇಲ್ಲ ಆದರೆ ನಾನು ಅದಕ್ಕೆ ಮುಕ್ತಳಾಗಿದ್ದೇನೆ ಎಂದಿರುವ ಟೀನಾ ದತ್ತ ನಾನು ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು ಇಲ್ಲದಿದ್ದರೆ ಸರೋಗಸಿಯನ್ನು ಆಯ್ಕೆ ಮಾಡಬಹುದು ಎಂದು ಹೇಳಿದ್ದಾರೆ. ಅಂದ್ಹಾಗೇ 33ರ ಹರೆಯದ ಟೀನಾ ದತ್ತ ಈ ಈ ಹಿಂದೆ ತಮ್ಮ ಮದುವೆಯ ವಿಚಾರಕ್ಕೆ ಸಾಕಷ್ಟು ಸದ್ದು ಮಾಡಿದ್ದರು. ಒಂದು ಕಾಲದಲ್ಲಿ ಇವರ ಮದುವೆಯ ಕುರಿತು ಸಾಕಷ್ಟು ಸುದ್ದಿಗಳಿದ್ದವು. ಟೀನಾ ದತ್ತ ಗಂಧರ್ವ ವಿವಾಹ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಇಂಥಾ ಟೀನಾ ದತ್ತ ಮೊನ್ನೆ ಮೊನ್ನೆ ಪರ್ಸನಲ್ ಟ್ರೇನರ್ ಎಂಬ ವೆಬ್ ಸರಣಿಯಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಮಿಕ್ಕಂತೆ ಬೇರೆ ಯಾವ ಪ್ರೊಜೆಕ್ಟ್‌ಗಳು ಟೀನಾ ದತ್ತ ಅವರ ಕೈಯಲ್ಲಿ ಸದ್ಯಕ್ಕೆ ಇಲ್ಲ.

More from Filmibeat

Read more about: biggboss bigg boss tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X