ಕಾಂ*ಡೋಮ್‌ ರಾಶಿ, ಮಸಾಜ್ ಮಷೀನ್ ; ನಟಿಯ ವಾರ್ಡ್ ಆಫೀಸ್‌ನಲ್ಲಿ ಬೆಚ್ಚಿ ಬೀಳಿಸುವ ವಸ್ತುಗಳು ಪತ್ತೆ, ಯಾರು ಈ ಅನನ್ಯಾ ಬ್ಯಾನರ್ಜಿ ?

ರಾಜಕಾರಣ ಅಂದರೆ ಸಮಾಜ ಸೇವೆ, ರಾಷ್ಟ್ರ ನಿರ್ಮಾಣ ಹಾಗೂ ಅಭಿವೃದ್ಧಿ ಎಂಬ ವ್ಯಾಖ್ಯಾನ ಇದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಅಂದರೆ ಕೇವಲ ಅಧಿಕಾರ ಎನ್ನುವಂತಾಗಿದೆ. ತತ್ವ ಸಿದ್ಧಾಂತಗಳನ್ನೆಲ್ಲಾ ಮೂಲೆ ಗುಂಪಾಗಿ ನೈತಿಕತೆಯ ಅರ್ಥವೇ ಬದಲಾಗುತ್ತಿರುವ ಈ ಕಾಲದಲ್ಲಿ ರಾಜಕೀಯದ ಪಡಸಾಲೆಯಲ್ಲಿ ನಡೆಯುವ ಚದುರಂಗದ ಆಟ ಇಡೀ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡುತ್ತಿದೆ.

ಇನ್ನು ಎಲ್ಲರಿಗೆ ಗೊತ್ತಿರುವಂತೆ ರಾಜಕೀಯ ಮತ್ತು ಸಿನಿಮಾ ಒಂದೇ ನಾಣ್ಯದ ಎರಡು ಮುಖಗಳು. ಚಿತ್ರರಂಗದಿಂದ ಇಲ್ಲಿಯವರೆಗೆ ಹಲವರು ರಾಜಕೀಯಕ್ಕೆ ಹೋಗಿದ್ದಾರೆ. ಆದರೆ. ಹೀಗೆ ಹೋದವರಲ್ಲಿ ಅದರಲ್ಲಿಯೂ ವಿಶೇ‍ಷವಾಗಿ ನಾಯಕಿಯರು ರಾಜಕೀಯ ರಂಗ ಪ್ರವೇಶಿಸಿದಾಗ ಎದುರಿಸಬೇಕಾದ ಸವಾಲುಗಳೇ ಬೇರೆ.

inside-ward-109-condoms-make-up-room-ledgers-found-in-tmc-councillor-s-ananya-banerjee-office

ಗ್ಲಾಮರ್ ಲೋಕದ ಹಿನ್ನೆಲೆಯನ್ನು ರಾಜಕೀಯ ಎದುರಾಳಿಗಳು ಅತ್ಯಂತ ಸುಲಭವಾಗಿ ತಮ್ಮ ಅಸ್ತ್ರವನ್ನಾಗಿಸಿಕೊಳ್ಳುತ್ತಾರೆ. ಸೈದ್ಧಾಂತಿಕವಾಗಿ ಅಥವಾ ಆಡಳಿತಾತ್ಮಕವಾಗಿ ಮುಖಾಮುಖಿಯಾಗಲು ಧೈರ್ಯವಿಲ್ಲದಿದ್ದಾಗ, ಹಲವು ನಾಯಕಿಯರ ಖಾಸಗಿ ಬದುಕನ್ನು ಸಾರ್ವಜನಿಕ ಚರ್ಚೆಯ ಚೌಕಟ್ಟಿಗೆ ತಂದು ನಿಲ್ಲಿಸುವ ತಂತ್ರಗಳು ರಾಜಕೀಯದಲ್ಲಿ ತೆರೆಯ ಮರೆಯಲ್ಲಿ ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

ಹಾಗಂಥ, ಇಲ್ಲಿ ಎಲ್ಲರೂ ಸಭ್ಯರಲ್ಲ. ಇಲ್ಲಿಯೂ ಕೂಡ ಕೆಲವು ನಾಯಕಿಯರು ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ. ಮಾತು ತಪ್ಪಿದ್ದಾರೆ. ಅಸಭ್ಯತೆಯ ಎಲ್ಲೆಯನ್ನೆಲ್ಲ ಮೀರಿದ್ದಾರೆ. ಈ ಸಾಲಿಗೆ ಅನನ್ಯಾ ಬ್ಯಾನರ್ಜಿ ಕೂಡ ಇದ್ದಾರೆ ಎನ್ನುವುದು ಈ ಕ್ಷಣದ ವಿಶೇಷ.

ಹೌದು, ಅನನ್ಯಾ ಬ್ಯಾನರ್ಜಿ.. ಪಶ್ಚಿಮ ಬಂಗಾಳದ ಚೆಲುವೆ. ಬೆಂಗಾಲಿ ಚಿತ್ರರಂಗದ ಜನಪ್ರಿಯ ಬೆಡಗಿ. ಇಷ್ಟೇ ಅಲ್ಲ ಕವಿ ಮತ್ತು ಲೇಖಕಿ ಕೂಡ ಹೌದು. ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (MA) ಪದವಿ ಪಡೆದಿರುವ ಅನನ್ಯಾ ಬ್ಯಾನರ್ಜಿ, ವೃತ್ತಿಜೀವನವನ್ನು ಆರಂಭಿಸಿದ್ದು ಬೆಳ್ಳಿತೆರೆಯಿಂದ ಅಲ್ಲ. ಬದಲಿಗೆ ಬೆಂಗಾಲಿ ಕಿರುತೆರೆಯ ಮೂಲಕ. ''ಓ ಮನ್ ಭ್ರಮೋನ್''.. ''ರಕ್ತಬೀಜ್ 2''.. ''ಕರ್ಪೂರ್''.. ''ಮಿತ್ತಿರ್ ಬಾರಿ''.. ಇವು ಇವರ ಕೆಲ ಇತ್ತೀಚಿನ ಜನಪ್ರಿಯ ಸಿನಿಮಾಗಳು.

ಇನ್ನು ಅನನ್ಯಾ ಬ್ಯಾನರ್ಜಿ ಕೇವಲ ಚಿತ್ರರಂಗಕ್ಕೆ ಸೀಮಿತವಾಗಿಲ್ಲ.ರಾಜಕಾರಣಕ್ಕೂ ಬಂದರು. ಮಮತಾ ಬ್ಯಾನರ್ಜಿ ಅವರ ಅಭಿವೃದ್ದಿ ಕೆಲಸಕ್ಕೆ ಆಕರ್ಷಿತರಾಗಿ ಟಿಎಂಸಿ ಪಕ್ಷ ಸೇರಿದರು. ಹತ್ತಾರು ಸಾಂಸ್ಕೃತಿಕ ಮತ್ತು ಸಾಮಾಜಿಕ ಕೆಲಸಗಳನ್ನು ಮಾಡುವುದರ ಮೂಲಕ ಜನರಿಗೆ ಹತ್ತಿರವಾದರು. ಬಂಗಾಳದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಕ್ರಿಯ ಸದಸ್ಯರಾಗಿಯೂ ಪ್ರಮುಖ ಜವಾಬ್ದಾರಿಯನ್ನು ಹೊತ್ತಿದ್ದರು.

inside-ward-109-condoms-make-up-room-ledgers-found-in-tmc-councillor-s-ananya-banerjee-office

ಹೀಗೆ ಸಾರ್ವಜನಿಕ ಹುದ್ದೆಗಳಲ್ಲಿ ಮಹತ್ವದ ಸುಧಾರಣೆ ತಂದ ಬಳಿಕವೇ ಫುಲ್ ಟೈಮ್ ರಾಜಕಾರಣಿಯಾದ ಅನನ್ಯಾ ಬ್ಯಾನರ್ಜಿ, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (KMC) ಚುನಾವಣೆಯಲ್ಲಿ ಸ್ಪರ್ಧಿಸಿ, ಮುಕುಂದಪುರ ಒಳಗೊಂಡಿರುವ ವಾರ್ಡ್ ಸಂಖ್ಯೆ 109 ರ ಕೌನ್ಸಿಲರ್ ಆಗಿ ಆಯ್ಕೆಯಾದರು.

ಇಂಥಾ ಅನನ್ಯಾ ಬ್ಯಾನರ್ಜಿ ಅವರ ಅಧಿಕೃತ ವಾರ್ಡ್‌ (ವಾರ್ಡ್‌ ಸಂಖ್ಯೆ 109) ಮೇಲೆ ಅಲ್ಲಿನ ಸ್ಥಳಿಯ ನಿವಾಸಿಗಳು ಮತ್ತು ಆಡಳಿತಾರೂಢ ಪಕ್ಷದ ಕಾರ್ಯಕರ್ತರು (ಬಿಜೆಪಿ ) ಮತ್ತು ಸಿಪಿಐಎಂ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಬೀಗ ಮುರಿದು ಒಳನುಗ್ಗಿದ್ದಾರೆ.

ಈ ಘಟನೆ ಸದ್ಯ ಪಶ್ಚಿಮ ಬಂಗಾಳದ ರಾಜಕೀಯದ ದಿಕ್ಕನ್ನೇ ಬದಲಿಸಿದೆ. ಯಾಕೆಂದರೆ ಅಲ್ಲಿಂದ ಹೊರ ಬಿದ್ದ ದೃಶ್ಯಾವಳಿಗಳೇ ಬೆಚ್ಚಿ ಬೀಳಿಸುವಂತೆ ಇವೆ. ಸಾರ್ವಜನಿಕರ ದಿನನಿತ್ಯದ ಆಡಳಿತಾತ್ಮಕ ಅವಶ್ಯಕತೆಗಳನ್ನು ಪೂರೈಸಬೇಕಾಗಿದ್ದ ಆ ಸರ್ಕಾರಿ ಕಚೇರಿಲ್ಲಿ ಸುಸಜ್ಜಿತ ಮೇಕಪ್ ರೂಮ್, ಮಸಾಜ್ ಉಪಕರಣಗಳು, ಹಾಸಿಗೆಯ ವ್ಯವಸ್ಥೆ ಹಾಗೂ ಭಾರಿ ಪ್ರಮಾಣದ ಕಾಂಡೋಮ್ ಪತ್ತೆಯಾಗಿವೆ. ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ಅನನ್ಯಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.

ಇನ್ನು, ಇದೇ ವೇಳೆ ''ಹಳದಿ ಡೈರಿ" ಕೂಡ ಪತ್ತೆಯಾಗಿದೆ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪ ಮಾಡಿದ್ದು, ಈ ರಹಸ್ಯ ಡೈರಿಯಲ್ಲಿ ಸ್ಥಳೀಯ ರಿಯಲ್ ಎಸ್ಟೇಟ್ ಎಜೆಂಟ್‌ಗಳಿಂದ ವಸೂಲಿ ಮಾಡಲಾದ ಹಣ, ಅಕ್ರಮ ನಗದು ವ್ಯವಹಾರ, ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ರೇಟ್ ಚಾರ್ಟ್ ಮತ್ತು ಲೆಕ್ಕಾಚಾರಗಳು ಅಡಗಿವೆ ಎಂಬ ಆರೋಪವನ್ನು ಮಾಡಲಾಗಿದೆ.

ಇತ್ತ ತನ್ನ ವಿರುದ್ಧ ಕೇಳಿಬರುತ್ತಿರುವ ಎಲ್ಲಾ ಆಪಾದನೆಗಳನ್ನು ಕೌನ್ಸಿಲರ್ ಅನನ್ಯಾ ಬ್ಯಾನರ್ಜಿ ತಳ್ಳಿಹಾಕಿದ್ದಾರೆ. ಮುನ್ಸಿಪಲ್ ಬೋರ್ಡ್ ವಿಸರ್ಜನೆಯಾದ ನಂತರ ತಮಗೆ ಆ ಕಚೇರಿಯ ಮೇಲೆ ಯಾವುದೇ ಕಾನೂನಾತ್ಮಕ ಅಥವಾ ಆಡಳಿತಾತ್ಮಕ ನಿಯಂತ್ರಣವಿರಲಿಲ್ಲ ಮತ್ತು ತಾವು ಇತ್ತೀಚಿನ ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡಿಲ್ಲ ಎಂದು ವಾದ ಮಾಡಿದ್ಧಾರೆ.

ಮುಂದುವರೆದು ಸಾರ್ವಜನಿಕರು ದಿನನಿತ್ಯ ಬಂದು ಹೋಗುವ ಕಾರ್ಯಾಲಯದಲ್ಲಿ ಯಾರಾದರೂ ಇಂತಹ ವಸ್ತುಗಳನ್ನು ಇಡಲು ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು, ತಮ್ಮ ರಾಜಕೀಯ ಮತ್ತು ವೃತ್ತಿಪರ ವರ್ಚಸ್ಸಿಗೆ ಧಕ್ಕೆ ತರಲು ವಿರೋಧಿಗಳೇ ವ್ಯವಸ್ಥಿತ ಸಂಚು ರೂಪಿಸಿ ಈ ವಸ್ತುಗಳನ್ನು ಅಲ್ಲಿ ತಂದಿಟ್ಟಿದ್ದಾರೆ ಎಂದು ಕೆಂಡ ಕಾರಿದ್ದಾರೆ ಅನನ್ಯಾ ಬ್ಯಾನರ್ಜಿ.

Disclaimer : ಅನನ್ಯಾ ಬ್ಯಾನರ್ಜಿ ಅವರ ಮೇಲೆ ಮಾಡಲಾದ ಈ ಗಂಭೀರ ಆಪಾದನೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗಳ ಸತ್ಯಾಸತ್ಯತೆ ಮೇಲೆ ಹಿರಿಯ ತನಿಖಾಧಿಕಾರಿಗಳು ಅಧಿಕೃತವಾದ ಮುದ್ರೆ ಇನ್ನು ಒತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದಾಖಲೆಗಳ ಸತ್ಯಾಸತ್ಯತೆಯನ್ನು ರಾಷ್ಟ್ರೀಯ ಮಾಧ್ಯಮಗಳು ಮತ್ತು ಸ್ಥಳೀಯ ಪೊಲೀಸ್‌ರು ದೃಢೀಕರಿಸಿಲ್ಲ. ಆದರೆ ಈ ವಿವಾದ ಮಾತ್ರ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

English summary
From a private luxury lounge to financial charts, look inside the massive controversy surrounding TMC Councillor Ananya Banerjee following a public raid on her Mukundapur office. Find out what was uncovered
Read more about: politics actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X