ತನ್ನ ಮಗುವಿನ ತಂದೆ ಯಾರೆಂದು ಪ್ರಶ್ನೆ ಮಾಡಿದವರಿಗೆ ನಟಿ, ಸಂಸದೆ ನುಸ್ರುತ್ ಖಡಕ್ ಉತ್ತರ

By ಫಿಲ್ಮಿಬೀಟ್ ಡೆಸ್ಕ್

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ಹಾಗು ಚಲನಚಿತ್ರ ನಟಿ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ನುಸ್ರುತ್ ಆಗಸ್ಟ್ 26ರಂದು ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ತಾಯಿಯಾದ ಬಳಿಕ ನುಸ್ರುತ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಬುಧವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.

ಕಲ್ಕತ್ತಾದ ಸಲೂನ್ ಉದ್ಘಾಟನೆಗೆ ಗೆಸ್ಟ್ ಆಗಿ ನುಸ್ರುತ್ ಆಗಮಿಸಿದ್ದರು. ಈ ವೇಳೆ ನುಸ್ರುತ್ ಅವರಿಗೆ ತನ್ನ ಮಗುವಿನ ತಂದೆ ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು. ಅಂದಹಾಗೆ ಈ ಪ್ರಶ್ನೆಗೆ ನುಸ್ರುತ್ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿದೆ. ನುಸ್ರುತ್ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಮಗುವಿನ ತಂದೆಯ ಯಾರು ಎನಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಪ್ರಶ್ನಿಸಿದವರಿಗೆ ನುಸ್ರುತ್ ಖಡಕ್ ಉತ್ತರ ನೀಡಿದ್ದಾರೆ. ಇದೇ ಸಮಯದಲ್ಲಿ ನುಸ್ರುತ್ ಮುಂದಿನ ಸಂಸತ್ ಅಧಿವೇಶನಕ್ಕೆ ಮರಳುವುದಾಗಿ ಹೇಳಿದ್ದಾರೆ. ಮುಂದೆ ಓದಿ..

ತನ್ನ ಮಗುವಿನ ತಂದೆ ಬಗ್ಗೆ ನುಸ್ರುತ್ ಹೇಳಿದ್ದನು?

ತನ್ನ ಮಗುವಿನ ತಂದೆ ಬಗ್ಗೆ ನುಸ್ರುತ್ ಹೇಳಿದ್ದನು?

ಮಾಧ್ಯಮದ ಜೊತೆ ಮಾತನಾಡಿದ ನುಸ್ರುತ್ ಈ ಸಮಯದಲ್ಲಿ ಎಲ್ಲಾ ಪ್ರಶ್ನೆಗಳನ್ನು ಎದುರಿಸಲು ಸಿದ್ಧ ಎಂದರು. ನುಸ್ರುತ್ ಹಾಗೆ ಹೇಳುತ್ತಿದ್ದಂತೆ ಮಗುವಿನ ತಂದೆ ಯಾರು ಎನ್ನುವ ಪ್ರಶ್ನೆ ಎದುರಾಯಿತು. ಆದರೆ ನುಸ್ರುತ್ ತನ್ನ ಮಗುವಿನ ತಂದೆ ಯಾರು ಎಂದು ಹೇಳಲು ನಿರಾಕರಿಸಿದರು. ಮತದಾರರ ಬಗ್ಗೆ ಜವಾಬ್ದಾರಿಯುತ ಭಾವನೆಯನ್ನು ಹೊಂದಿದ್ದೇನೆ. ಹಾಗಾಗಿ ಮತ್ತೆ ಕೆಲಸಕ್ಕೆ ಮರಳಿದ್ದೇನೆ ಎಂದರು.

ತಾಯ್ತನದ ಬಗ್ಗೆ ನುಸ್ರುತ್ ಮಾತು

ತಾಯ್ತನದ ಬಗ್ಗೆ ನುಸ್ರುತ್ ಮಾತು

ತಾಯ್ತನದ ಬಗ್ಗೆ ಮಾತನಾಡಿದ ನುಸ್ರುತ್, "ಇದು ನನ್ನ ಹೊಸ ಜೀವನ, ಉತ್ತಮವಾಗಿದೆ. ಹೊಸ ಆರಂಭದಂತೆ ತೋರುತ್ತಿದೆ" ಎಂದರು. ನುಸ್ರುತ್ ಎಂಟು ತಿಂಗಳ ಗರ್ಭಿಯಾಗಿದ್ದ ಕಾರಣ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಗೈರಾಗಿದ್ದರು. ಹಾಗಾಗಿ ಚಳಿಗಾಲದ ಅಧಿವೇಶನಕ್ಕೆ ಖಂಡಿತ ಬರುತ್ತೇನೆ ಎಂದರು.

ತಂದೆ ಯಾರೆಂದು ತಂದೆಗೆ ಗೊತ್ತು

ತಂದೆ ಯಾರೆಂದು ತಂದೆಗೆ ಗೊತ್ತು

ಇದೇ ವೇಳೆ ನುಸ್ರುತ್ ತನ್ನ ಮಗುವಿನ ತಂದೆ ಯಾರೆಂದು ಕೇಳುತ್ತಿದ್ದವರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. "ತಂದೆ ಯಾರೆಂದು ತಂದೆಗೆ ಖಂಡಿತ ತಿಳಿದಿದೆ. ಈ ಸಮಯದಲ್ಲಿ ನಾನು ಮತ್ತು ಯಶ್ (ನಟ ಯಶ್ ದಾಸ್ ಗುಪ್ತ) ಉತ್ತಮ ಪೋಷಕರನ್ನು ಹೊಂದಿದ್ದೇವೆ. ಉತ್ತಮ ಸಮಯ ಹೊಂದಿದ್ದೇವೆ" ಎಂದು ಹೇಳಿದರು.

2019ರಲ್ಲಿ ನಿಖಿಲ್ ಜೊತೆ ನುಸ್ರುತ್ ಮದುವೆ

2019ರಲ್ಲಿ ನಿಖಿಲ್ ಜೊತೆ ನುಸ್ರುತ್ ಮದುವೆ

ನುಸ್ರುತ್ 2019ರಲ್ಲಿ ನಿಖಿಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಎರಡು ವರ್ಷದೊಳಗೆ ಇಬ್ಬರು ಬೇರೆ ಬೇರೆ ಆಗಿದ್ದಲ್ಲದೇ ಬೀದಿ ರಂಪಾಟ ಮಾಡಿಕೊಂಡಿದ್ದರು. ಇಬ್ಬರು ದೂರ ದೂರ ಆಗಲು ಕಾರಣ ನಟ ಯಶ್ ಎಂದು ಹೇಳಲಾಗುತ್ತಿದೆ. ನುಸ್ರುತ್ ಮತ್ತು ನಿಖಿಲ್ ನಡುವೆ ಬ್ರೇಕಪ್ ಸುದ್ದಿ ವೈರಲ್ ಆಗುತ್ತಿದ್ದಂತೆ ನಟ ಯಶ್ ಹೆಸರು ವೈರಲ್ ಆಗಿತ್ತು. ನುಸ್ರುತ್ ಜೊತೆ ನಟ ಯಶ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮಗುವಿಗೆ ಜನ್ಮ ನೀಡಿದ ಸಮಯದಲ್ಲಿ ನುಸ್ರುತ್ ಜೊತೆ ನಟ ಯಶ್ ಆಸ್ಪತ್ರೆಯಲ್ಲಿದ್ದರು ಎನ್ನುವ ಸುದ್ದಿ ಕೇಳಿಬರುತ್ತಿದೆ. ಸದ್ಯ ಯಶ್ ಮತ್ತು ನುಸ್ರುತ್ ಒಬ್ಬರು ಒಟ್ಟಿಗೆ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ.

ಯಶ್ ಮತ್ತು ನುಸ್ರುತ್ ಅನೇಕ ವರ್ಷಗಳ ಸ್ನೇಹಿತರು

ಯಶ್ ಮತ್ತು ನುಸ್ರುತ್ ಅನೇಕ ವರ್ಷಗಳ ಸ್ನೇಹಿತರು

ನುಸ್ರುತ್ ತಾಯಿಯಾಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಮಾಜಿ ಪತಿ ನಿಖಿಲ್ ತಾನು ಈ ಮಗುವಿಗೆ ತಂದೆಯಲ್ಲ ಎಂದು ಹೇಳಿದ್ದರು. ಯಶ್ ಮತ್ತು ನುಸ್ರುತ್ ಇಬ್ಬರು ಅನೇಕ ವರ್ಷಗಳಿಂದ ಸ್ನೇಹಿತರು. ಆದರೆ 2020ರಲ್ಲಿ ಬಿಡುಗಡೆಯಾದ ಬೆಂಗಾಲಿಯ 'SOS Kolkata' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಬಳಿಕ ಇಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಗಿತ್ತು. ಈ ಸಿನಿಮಾ ನಂತರ ಇಬ್ಬರ ಕ್ಲೋಸ್ ನೆಸ್ ಗಾಳಿಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಇಬ್ಬರ ಅತಿಯಾದ ಸ್ನೇಹ ಪತಿ ನಿಖಿಲ್ ಅವರಿಂದ ದೂರ ಆಗುವಂತೆ ಮಾಡಿತು.

More from Filmibeat

English summary
TMC MP, Actress Nusrat Jahan Response On Father Of Her Baby.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X