ಗಂಡು ಮಗುವಿಗೆ ಜನ್ಮ ಕೊಟ್ಟ ನಟಿ ನುಸ್ರತ್ ಜಹಾನ್: ಮಾಜಿ ಪತಿ ಹೇಳಿದ್ದೇನು?

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ಹಾಗು ಚಲನಚಿತ್ರ ನಟಿ ನುಸ್ರತ್ ಜಹಾನ್ ಗುರುವಾರ (ಆಗಸ್ಟ್ 26) ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಸಂಜೆ ಪಾರ್ಕ್‌ ಸ್ಟ್ರೀಟ್‌ನಲ್ಲಿರುವ ಆಸ್ಪತ್ರೆಗೆ ನಟಿ ನುಸ್ರತ್ ದಾಖಲಾಗಿದ್ದರು. ಗುರುವಾರ ಮಧ್ಯಾಹ್ನ 12.20ರ ಸಮಯಕ್ಕೆ ಗಂಡು ಮಗುವಿಗೆ ಜನ್ಮ ನೀಡಿದರು ಎಂದು ತಿಳಿದು ಬಂದಿದೆ. ಈ ವೇಳೆ ಆಸ್ಪತ್ರೆಯಲ್ಲಿ ನುಸ್ರತ್ ಅವರ ಬಾಯ್‌ಫ್ರೆಂಡ್ ಯಶ್ ದಾಸ್ ಗುಪ್ತಾ ಇದ್ದರು ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ನುಸ್ರತ್ ಜಹಾನ್‌ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಾಜಿ ಪತಿ ನಿಖಿಲ್ ಜೈನ್ ಪ್ರತಿಕ್ರಿಯಿಸಿದ್ದಾರೆ. ಆಜ್ ತಕ್ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿರುವ ನಿಖಿಲ್, ನನ್ನ ಮತ್ತು ನುಸ್ರತ್ ನಡುವಿನ ಭಿನ್ನಾಭಿಪ್ರಾಯಗಳು ನವಜಾತ ಶಿಶುವಿಗೆ ಶುಭಾಶಯ ಹೇಳುವುದನ್ನು ತಡೆಯುವುದಿಲ್ಲ ಎಂದಿದ್ದಾರೆ. ''ನಾನು ಅವಳಿಗೆ ಮತ್ತು ಆಕೆಯ ಮಗುವಿಗೆ ಒಳ್ಳೆಯದನ್ನೇ ಬಯಸುತ್ತೇನೆ. ಮಗು ಜೀವನದಲ್ಲಿ ಉತ್ತಮವಾಗಿ ಬೆಳೆಯಲಿ ಮತ್ತು ಏಳಿಗೆ ಕಾಣಲಿ. ನನ್ನ ಮತ್ತು ಆಕೆಯ ನಡುವಿನ ಭಿನ್ನಾಭಿಪ್ರಾಯಗಳು ನವಜಾತ ಶಿಶುವಿಗೆ ಶುಭಕೋರುವುದನ್ನು ತಡೆಯವುದಿಲ್ಲ. ನುಸ್ರತ್‌ಗೆ ಒಳ್ಳೆಯದಾಗಲಿ ಹಾಗೂ ಮಗು ಸಮೃದ್ಧವಾಗಿ ಬೆಳೆಯಲಿ'' ಎಂದು ನಿಖಿಲ್ ಜೈನ್ ವಿಶ್ ಮಾಡಿದ್ದಾರೆ. ಮುಂದೆ ಓದಿ...

ಟರ್ಕಿಯಲ್ಲಿ ನುಸ್ರತ್ ಮದುವೆ

ಟರ್ಕಿಯಲ್ಲಿ ನುಸ್ರತ್ ಮದುವೆ

2019ರಲ್ಲಿ ನಟಿ ಹಾಗು ಸಂಸದೆ ನುಸ್ರತ್ ಜಹಾನ್ ಟರ್ಕಿ ದೇಶದಲ್ಲಿ ನಿಖಿಲ್ ಜೈನ್ ಜೊತೆ ಮದುವೆಯಾಗಿದ್ದರು. ಮದುವೆಯಾದ ಕೆಲವು ತಿಂಗಳು ಚೆನ್ನಾಗಿಯೇ ಇದ್ದರು. ಆಮೇಲೆ ಇದ್ದಕ್ಕಿದ್ದಂತೆ ಇಬ್ಬರು ನಡುವೆ ಎಲ್ಲವೂ ಸರಿಯಿಲ್ಲ. ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಭಾರತೀಯ ಕಾನೂನು ಪ್ರಕಾರ ನಮ್ಮದು ಮದುವೆಯೇ ಅಲ್ಲ ಎಂದು ನಟಿ ನುಸ್ರತ್ ಹೇಳಿದರು. ನಮ್ಮದ್ದು ಲೀವ್ ಇನ್ ರಿಲೇಶನ್‌ಷಿಪ್ ಅಷ್ಟೇ ಎಂದಿದ್ದರು.

ನುಸ್ರತ್ ಗರ್ಭಿಣಿ, ತಂದೆ ನಾನಲ್ಲ

ನುಸ್ರತ್ ಗರ್ಭಿಣಿ, ತಂದೆ ನಾನಲ್ಲ

ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ದಾಂಪತ್ಯದಲ್ಲಿ ಬಿರುಕು ಉಂಟಾದ ಬಳಿಕ ಪರಸ್ಪರ ದೂರ ಉಳಿದರು. ಈ ನಡುವೆ ನಟಿ ನುಸ್ರತ್ ಜಹಾನ್ ಗರ್ಭಿಣಿ ಎನ್ನುವ ವಿಚಾರ ಬಹಿರಂಗವಾಯಿತು. ಆ ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ನಿಖಿಲ್ ಜೈನ್, ಈ ಮಗು ನನ್ನದಲ್ಲ, ನಾನು ತಂದೆಯಲ್ಲ ಎಂದು ಹೇಳಿಕೆ ನೀಡಿದರು.

ಯಶ್ ಜೊತೆ ನುಸ್ರತ್ ಸಂಬಂಧ

ಯಶ್ ಜೊತೆ ನುಸ್ರತ್ ಸಂಬಂಧ

ನಿಖಿಲ್ ಜೈನ್ ಜೊತೆ ಬೇರೆಯಾಗುವುದಕ್ಕೂ ಮೊದಲಿನಿಂದಲೂ ನಟ ಯಶ್ ದಾಸ್ ಗುಪ್ತಾ ಜೊತೆ ನುಸ್ರತ್ ಜಹಾನ್ ಪ್ರೀತಿಯಲ್ಲಿದ್ದರು ಎಂಬ ವಿಚಾರ ಬೆಳಕಿಗೆ ಬಂತು. ಯಶ್ ಮತ್ತು ನುಸ್ರತ್ ಡೇಟಿಂಗ್ ಮಾಡ್ತಿದ್ದರು. ಇಬ್ಬರು ಸಂಬಂಧದಲ್ಲಿದ್ದಾರೆ. ನುಸ್ರತ್ ಗರ್ಭಿಣಿಯಾಗಲು ಯಶ್ ಕಾರಣ ಎಂದು ಸುದ್ದಿಗಳು ವರದಿಯಾದವು. ಆದರೆ, ಈ ಬಗ್ಗೆ ಯಶ್ ಆಗಲಿ ಅಥವಾ ನುಸ್ರತ್ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಆಸ್ಪತ್ರೆಗೆ ದಾಖಲಿಸಿದ್ದು ಯಶ್

ಆಸ್ಪತ್ರೆಗೆ ದಾಖಲಿಸಿದ್ದು ಯಶ್

ನುಸ್ರತ್ ಜಹಾನ್ ಅವರನ್ನು ಬುಧವಾರ ಸಂಜೆ ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಿಸಿದ್ದೇ ಇದೇ ಯಶ್ ದಾಸ್ ಗುಪ್ತಾ ಎಂದು ಹೇಳಲಾಗಿದೆ. ಮಗು ಆಗುವ ಸಂದರ್ಭದಲ್ಲಿಯೂ ಯಶ್ ದಾಸ್ ಆಸ್ಪತ್ರೆಯಲ್ಲಿಯೇ ಇದ್ದರು. ಸ್ವತಃ ನಟಿಯೇ ಅವರನ್ನು ಅಲ್ಲೇ ಇರಿಸಿಕೊಳ್ಳಲು ವೈದ್ಯರಿಗೆ ಸೂಚಿಸಿದ್ದರು ಎಂದು ವರದಿಯಾಗಿದೆ. ನುಸ್ರತ್‌ಗೆ ಗಂಡು ಮಗು ಆಯ್ತು ಎನ್ನುವ ಸಂತಸದ ಸುದ್ದಿ ಒಂದು ಕಡೆಯಾದರೆ, ಆ ಮಗುವಿನ ತಂದೆ ಯಾರು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟಿಕೊಂಡಿದೆ. ಇದಕ್ಕೆಲ್ಲಾ ನುಸ್ರತ್ ಅವರೇ ಅಧಿಕೃತವಾಗಿ ಉತ್ತರ ಕೊಡಬೇಕಿದೆ.

More from Filmibeat

English summary
Trinamool Congress MP and actor Nusrat Jahan gives birth to baby boy at private hospital in Kolkata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X