ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾನೆ ಒಬ್ಬ ರಸಿಕ ; ಡಿವೋರ್ಸ್ ಆಗಿದ್ರೂ ನಟಿಗೆ ಬಿಡದೇ ಕಿರುಕುಳ, ಯಾರು ಆ ಆಟಗಾರ ?

ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ.. ಮೊಹಮ್ಮದ್ ಅಜರುದ್ದೀನ್ ಅವರಿಂದ ಹಿಡಿದು ವಿರಾಟ್ ಕೊಹ್ಲಿಯವರೆಗೆ, ಅಜಯ್ ಜಡೇಜಾ ಅವರಿಂದ ಹಿಡಿದು ಕೆ.ಎಲ್.ರಾಹುಲ್‌ವರೆಗೆ..

ಅನೇಕರು ನಾಯಕಿಯರ ಬೆಡಗು-ಭಿನ್ನಾಣಕ್ಕೆ ಮನ ಸೋತಿದ್ದಾರೆ. ಕೆಲವರು ಪ್ರೀತಿಯಲ್ಲಿ ಬಿದ್ದು ಎದ್ದರೆ, ಇನ್ನೂ ಕೆಲವರು ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಆದರೆ ಇಲ್ಲಿಯೂ ಕೂಡ ಕೆಲವರು ಚಪಲ ಚನ್ನಿಗರಾಯರು ಇದ್ದಾರೆ. ಅವಕಾಶ ಸಿಕ್ಕರೆ ಸಾಕು ಚೆಲುವೆಯರ ಹಿಂದೆ ಓಡಾಡುತ್ತಾರೆ. ಬಿಟ್ಟು ಬಿಡದಂತೆ ಮೆಸೇಜ್ ಕೂಡ ಮಾಡುತ್ತಾರೆ. ಈ ಸಾಲಿನಲ್ಲಿ ''ರಾಜಸ್ಥಾನ್ ರಾಯಲ್ಸ್'' ತಂಡದ ಸ್ಟಾರ್ ಪ್ಲೇಯರ್ ಕೂಡ ಇದ್ದಾರೆ ಎಂಬ ಬಾಂಬ್‌ನ ನೇಹಲ್ ವಡೋಲಿಯಾ ಸಿಡಿಸಿದ್ದಾರೆ.

TMKOC s Nehal Vadoliya Divorced Rajasthan Royals Cricketer Kept Messaging Me

ಹೌದು, ನೇಹಲ್ ವಡೋಲಿಯಾ.. ''ತಾರಕ್ ಮೆಹ್ತಾ ಕಾ ಊಲ್ತಾ ಚಷ್ಮಾ'' ಧಾರಾವಾಹಿಯ ಮೂಲಕ ಮನೆ ಮಾತಾದ ಚೆಲುವೆ. ಅಭಿನಯಕ್ಕಿಂತ ತಮ್ಮ ದೇಹಸಿರಿಯನ್ನೇ ಬೆಳೆಯಲು ಬಂಡವಾಳವನ್ನಾಗಿಸಿಕೊಂಡ ಚೆಲುವೆ ಇವರು. ಇದಕ್ಕೆ ''ಗಂದಿ ಬಾತ್ 3''.. ''ಮಸ್ತ್‌ರಾಮ್''.. ''ಜೂಲಿ''.. ''ವುಡ್‌ಪೆಕ್ಕರ್'' ಮತ್ತು ''ರಸೀಲೇ ಪಡೋಸನ್'' ನಂತಹ ಬೋಲ್ಡ್ & ಹಾಟ್ ವೆಬ್ ಸೀರೀಸ್‌ ಉದಾಹರಣೆ.

ಇಂಥಾ ನೇಹಲ್ ವಡೋಲಿಯಾ, ನಿಮಗೆ ಯಾರಾದರೂ ಕ್ರಿಕೆಟರ್ ಮೆಸೇಜ್ ಮಾಡಿದ್ದಾರಾ ಎಂಬ ಪ್ರಶ್ನೆಗೆ ಒಂದು ಸೆಕೆಂಡ್ ಕೂಡ ಯೋಚನೆ ಮಾಡದೇ ಹೌದು ಎಂದಿದ್ಧಾರೆ. ಕೊಡಬಾರದ ಹಿಂಸೆಯನ್ನೆಲ್ಲಾ ನೀಡಿದ್ದಾನೆ ಎಂದಿದ್ದಾರೆ.

ಈ ಕುರಿತು ''ಸುನೋ ಇಂಡಿಯಾ'' ಪಾಡ್‌ ಕಾಸ್ಟ್‌ನಲ್ಲಿ ಮಾತನಾಡಿರುವ ನೇಹಲ್ ವಡೋಲಿಯಾ, ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಆಟಗಾರನೊಬ್ಬ ನನಗೆ ಮೆಸೇಜ್ ಕಳಿಸಿದ್ದಾನೆ ಎಂದಿದ್ದಾರೆ. ನಾನು ಈಗ ಒಂದು ಮೆಸೇಜ್ ಮಾಡಿದರೆ ಸಾಕು, ಅವನು ಥಟ್ ಅಂತ ರಿಪ್ಲೈ ಮಾಡುತ್ತಾನೆ ಎಂದಿದ್ದಾರೆ.

ನೇಹಲ್ ಆಡಿದ ಈ ಮಾತುಗಳಿಂದ ತಬ್ಬಿಬ್ಬಾದ ನಿರೂಪಕರು, ಸಾಕ್ಷಿಯನ್ನು ಕೇಳಿದಾಗ, ನಾನು ನಿಮಗೆ ಈ ಕೂಡಲೇ, ಇಲ್ಲೇ, ಅವನು ನನಗೆ ಕಳಿಸಿರುವ ಮೆಸೇಜ್ ತೋರಿಸಬಲ್ಲೆ ಎಂದು ಹೇಳಿರುವ ನೇಹಲ್ ''ಹಾಟ್'', ''ಬ್ಯೂಟಿಫುಲ್'', ''ಚೆಲುವೆ'', ಎಂದೆಲ್ಲಾ ಆತ ನನಗೆ ಮೆಸೇಜ್ ಮಾಡುತ್ತಾನೆ ಎಂದಿದ್ದಾರೆ.

tmkoc-s-nehal-vadoliya-divorced-rajasthan-royals-cricketer-kept-messaging-me

ಮುಂದುವರೆದು ನನಗೆ ನಿನ್ನ ಜೊತೆ ಮಾತನಾಡಲು ಇಷ್ಟ ಇಲ್ಲ, ಯಾಕೆ ನನಗೆ ಮೆಸೇಜ್ ಮಾಡ್ತಿದ್ದೀಯಾ..? ಎಂದು ಹೇಳಿದ ನಂತರ ಕೆಲ ದಿನ ಆ ಆಟಗಾರ ಸುಮ್ಮನಾಗುತ್ತಾನೆ ಎಂದು ಹೇಳಿರುವ ನೇಹಲ್, ನಾಯಿ ಬಾಲ ಯಾವತ್ತಿದ್ದರೂ ಡೊಂಕೇ, ಕೆಲ ದಿನ ಸುಮ್ಮನಾಗಿ ಮತ್ತೆ ಕಾಡಲು ಶುರು ಮಾಡುತ್ತಾನೆ, ಹೀಗಾಗಿ ನಾನು ಈಗ ಅವನ ನಂಬರನ್ನೇ ಬ್ಲಾಕ್ ಮಾಡಿದ್ದೇನೆ ಎಂದು ಹೇಳಿದ್ಧಾರೆ. ನನ್ನ ಹಿಂದೆ ಬಿದ್ದಿರುವ ಈ ಕ್ರಿಕೆಟರ್ ಗೆ ಡಿವೋರ್ಸ್ ಆಗಿದೆ ಎಂದು ಹೇಳಿರುವ ನೇಹಲ್, ಈ ಮೂಲಕ ಆತ ಯಾರಿರಬಹುದು ಎಂದು ನೀವೇ ಕಂಡು ಹಿಡಿಯಿರಿ ಎಂದು ಸುಳಿವು ಕೂಡ ನೀಡಿದ್ದಾರೆ.

ಸದ್ಯ ಈ ಸಂದರ್ಶನದ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸೋಶಿಯಲ್ ಮೀಡಿಯಾ ಡಿಟೆಕ್ಟಿವ್‌ಗಳು ಅಲರ್ಟ್ ಆಗಿದ್ದಾರೆ. ಆ "ವಿಚ್ಛೇದಿತ ರಾಜಸ್ಥಾನ್ ರಾಯಲ್ಸ್ ಕ್ರಿಕೆಟರ್" ಯಾರು..? ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ಧಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಸ್ತುತ ಮತ್ತು ಹಳೆಯ ಆಟಗಾರರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾರೆ. ಇಷ್ಟೇ ಅಲ್ಲ ಯಾರ್‍ಯಾರ ವೈಯಕ್ತಿಕ ಜೀವನ ಎಷ್ಟರ ಮಟ್ಟಿಗೆ ಸರಿ ಇದೆ ಅಥವಾ ಹಳ್ಳಿ ಹಿಡಿದಿದೆ ಎನ್ನುವುದನ್ನು ಕೂಡ ಹುಡುಕುತ್ತಿದ್ದಾರೆ. ನೇಹಲ್ ಎಲ್ಲಿಯೂ ಆತನ ಹೆಸರನ್ನು ನೇರವಾಗಿ ಹೇಳದಿದ್ದರೂ, ಅವರು ನೀಡಿರುವ ಹಿಂಟ್‌ಗಳು ಮಾತ್ರ ಸದ್ಯ ಮೈದಾನದೊಳಗೆ ಮತ್ತು ಹೊರಗೆ ಸಂಚಲನ ಮೂಡಿಸಿವೆ.

English summary
TMKOC’s Nehal Vadoliya exposes a divorced Rajasthan Royals cricketer, claiming he wouldn't stop messaging her even after she rejected his advances.
Read more about: cricket harrasment actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X