ಕತ್ರೀನಾ-ವಿಕ್ಕಿ ಮದುವೆಗೆ ಒಂದು ತಿಂಗಳು! ಪತಿಯನ್ನು ಬಿಟ್ಟಿರೋಕೆ ಆಗದೇ ಇಂದೋರ್‌ಗೆ ಹಾರಿದ ಕತ್ರೀನಾ?

ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‌ನಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ನಡೆದಿದ್ದು ಎಲ್ಲರಿಗೂ ತಿಳಿದಿದೆ. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ರಾಯಲ್ ವೆಡ್ಡಿಂಗ್‌ಗೆ ಕುಟುಂಬಸ್ಥರು ಹಾಗೂ ಚಿತ್ರರಂಗದ ಕೆಲ ತಾರೆಯರು ಸಾಕ್ಷಿಯಾಗಿದ್ದರು.

Recommended Video

ಕತ್ರೀನಾ-ವಿಕ್ಕಿ ಹೊಸ ಮನೆಯ ಬಾಡಿಗೆ ವಿಚಾರ ಭಾರಿ ಸುದ್ದಿಯಾಗುತ್ತಿದೆ.

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ. ಮದುವೆ ಸಡಗರದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಫೊಟೋಗಳು ವೈರಲ್ ಆಗಿದೆ. ಕತ್ರೀನಾ ಮತ್ತು ವಿಕ್ಕಿ ಕೌಶಲ್ ಜೋಡಿ ಈಗ ಎಲ್ಲೆಲ್ಲೂ ಟ್ರೆಂಡಿಂಗ್‌ನಲ್ಲಿದ್ದಾರೆ. ಸದ್ಯ ಈ ಇಬ್ಬರು ಇಂದು ವಿಶೇಷ ದಿನದ ಸಂಭ್ರಮದಲ್ಲಿದ್ದಾರೆ.

ವಿವಾಹ ಆದಾಗಿನಿಂದಲೂ ತಮ್ಮ ಖುಷಿ ವಿಚಾರಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ಈ ಜೋಡಿ ಇವತ್ತು ಮತ್ತೊಂದು ಸಂಭ್ರಮದ ದಿನವನ್ನು ಸಂತಸದಿಂದ ಆಚರಿಸಿದ್ದಾರೆ. ಕತ್ರೀನಾ ಮತ್ತು ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳು ಪೂರೈಸಿದ್ದು, ಒಂದು ತಿಂಗಳ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಖುಷಿಯ ಬಗ್ಗೆ ತಮ್ಮ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ದಿನದ ವಿಶೇಷವಾಗಿ ಈ ಇಬ್ಬರು ಏನು ಮಾಡಿದ್ದಾರೆ ಅನ್ನೋದನ್ನ ಮುಂದೆ ಓದಿ.

ಹೊಸ ಮನೆಯಲ್ಲಿ ಹೇಗಿರಲಿದೆ ಇವತ್ತಿನ ಸಂಭ್ರಮಾಚರಣೆ

ಹೊಸ ಮನೆಯಲ್ಲಿ ಹೇಗಿರಲಿದೆ ಇವತ್ತಿನ ಸಂಭ್ರಮಾಚರಣೆ

ಸದ್ಯ ಇದೀಗ ಕತ್ರೀನಾ ಮತ್ತು ವಿಕ್ಕಿ ಕೌಶಲ್ ಮದುವೆ ಬಳಿಕ ಹನಿಮೂನ್ ಮುಗಿಸಿಕೊಂಡು ತಮ್ಮ ಹೊಸ ಮನೆಯಲ್ಲಿ ಸೆಟಲ್ ಆಗಿದ್ದಾರೆ. ಇತ್ತೀಚೆಗಷ್ಟೆ ಈ ಮನೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಕೂಡ ತುಂಬ ಗ್ರ್ಯಾಂಡ್ ಆಗಿ ಆಚರಿಸಿಕೊಂಡ ಈ ಜೋಡಿ ಸಾಕಷ್ಟು ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಮದುವೆ ಆಗಿ ಒಂದು ತಿಂಗಳು ಪೂರೈಸಿರುವ ಈ ಜೋಡಿ ಈ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕತ್ರೀನಾ ಮತ್ತು ವಿಕ್ಕಿ ಬೇರೆ ಬೇರೆಯದ್ದೇ ಫೋಟೊವನ್ನು ಶೇರ್ ಮಾಡಿ ತಮ್ಮ ವಿವಾಹವಾಗಿ ಒಂದು ತಿಂಗಳು ಪೂರೈಸಿರೋದಕ್ಕೆ ಖುಷಿ ಪಟ್ಟಿದ್ದಾರೆ.

ತಬ್ಬಿಕೊಂಡಿರೋ ಫೋಟೋ ಶೇರ್ ಮಾಡಿದ ಕತ್ರೀನಾ

ತಬ್ಬಿಕೊಂಡಿರೋ ಫೋಟೋ ಶೇರ್ ಮಾಡಿದ ಕತ್ರೀನಾ

ಇನ್ನು ಒಂದು ತಿಂಗಳು ಭರ್ತಿಯಾಗಿರೋ ಈ ಖುಷಿಯನ್ನು ಕತ್ರೀನಾ ಒಂದು ಫೋಟೊ ಶೇರ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ. ಕತ್ರೀನಾ ಮತ್ತು ವಿಕ್ಕಿ ಕೌಶಲ್ ಮುದ್ದಾಗಿ ತಬ್ಬಿಕೊಂಡಿರೋ ಫೋಟೊ ಇದಾಗಿದ್ದು, ಇದಕ್ಕೆ 'ದಾಂಪತ್ಯಕ್ಕೆ ಕಾಲಿಟ್ಟು ಒಂದು ತಿಂಗಳ ಖುಷಿಯಲ್ಲಿ' ಎಂದು ಬರೆದುಕೊಂಡಿದ್ದಾರೆ. ಈ ಫೋಸ್ಟ್‌ಗೆ ವಿಕ್ಕಿ ಕೌಶಲ್ ಕಮೆಂಟ್ ಮಾಡಿದ್ದು, ತುಂಬ ಖುಷಿ ಆಗುತ್ತಿದೆ ಮೈ ಲವ್ ಎಂದು ಹೇಳಿದ್ದಾರೆ. ಹಾಗೆ ಬಾಲಿವುಡ್‌ನ ಅನೇಕ ಸ್ಟಾರ್ ಸೆಲೆಬ್ರೆಟಿಗಳು ಈ ತಾರಾ ಜೋಡಿಗೆ ವಿಷ್ ಮಾಡೊ ಮೂಲಕ ಖುಷಿ ಪಟ್ಟಿದ್ದಾರೆ. ಅಭಿಮಾನಿಗಳು ಕೂಡ ಕಮೆಂಟ್ ಮಾಡೋ ಮೂಲಕ ತಮ್ಮ ನೆಚ್ಚನ ಜೋಡಿಗೆ ಶುಭ ಹಾರೈಸಿದ್ದಾರೆ.

ಏನು ಹೇಳಿದ್ದಾರೆ ಗೊತ್ತಾ ವಿಕ್ಕಿ ಕೌಶಲ್?

ಏನು ಹೇಳಿದ್ದಾರೆ ಗೊತ್ತಾ ವಿಕ್ಕಿ ಕೌಶಲ್?

ಇನ್ನು ಇದೇ ಖುಷಿಯಲ್ಲಿ ಇರುವ ವಿಕ್ಕಿ ಕೌಶಲ್ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಶೇರ್ ಮಾಡಿಕೊಂಡಿದ್ದಾರೆ. ಕತ್ರೀನಾ ಮತ್ತು ವಿಕ್ಕಿ ಡ್ಯಾನ್ಸ್ ಮಾಡುತ್ತಿರುವ ಫೋಟೊ ಇದಾಗಿದ್ದು, 'ಎಂದೆಂದಿಗೂ ಹೀಗೇ ಸಾಗೋಣ' ಎಂದಿದ್ದಾರೆ. ಇದಕ್ಕೆ ಬಾಲಿವುಡ್ ನಟಿ ದಿಯಾ ಮಿರ್ಝಾ ಸೇರಿದಂತೆ ಹಲವರು ಕಮೆಂಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಅದೆಷ್ಟೋ ಅಭಿಮಾನಿಗಳು ಕೂಡ ಜೀವನ ಪೂರ್ತಿ ಹೀಗೆ ಖುಷಿ ಖುಷಿ ಆಗಿರಿ ಎಂದು ವಿಶ್ ಮಾಡಿದ್ದಾರೆ.

ಸ್ನೇಹಿತರೋಡನೆ ಸಂಭ್ರಮದ ದಿನ ಆಚರಿಸಿಕೊಳ್ಳಲಿರುವ ಜೋಡಿ

ಸ್ನೇಹಿತರೋಡನೆ ಸಂಭ್ರಮದ ದಿನ ಆಚರಿಸಿಕೊಳ್ಳಲಿರುವ ಜೋಡಿ

ಮದುವೆಯ ಒಂದು ತಿಂಗಳ ಆನಿವರ್ಸರಿಯನ್ನು ಆಚರಿಸಲು, ಕತ್ರಿನಾ ಕೈಫ್ ಶುಕ್ರವಾರ ತಡರಾತ್ರಿ ಮುಂಬೈನಿಂದ ಇಂದೋರ್‌ಗೆ ಹಾರಿದ್ದಾರೆ. ಕತ್ರಿನಾ ಕೈಫ್ ತಮ್ಮ ಮೊದಲ ತಿಂಗಳ ವಾರ್ಷಿಕೋತ್ಸವದಲ್ಲಿ ವಿಕ್ಕಿ ಕೌಶಲ್ ಅವರೊಂದಿಗೆ ಇರಲು ಇಂದೋರ್‌ಗೆ ತೆರಳಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಅಲ್ಲಿ ವಿಕ್ಕಿ ಪ್ರಸ್ತುತ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಹೀಗಾಗಿ ಕತ್ರೀನಾ ಕೂಡ ತೆರಳಿದ್ದು, ಇಂದೋರ್ ವಿಮಾನ ನಿಲ್ದಾಣದಿಂದ ನೇರವಾಗಿ ವಿಕ್ಕಿ ಪ್ರಸ್ತುತ ಇರುವ ದಿ ಪಾರ್ಕ್ ಹೋಟೆಲ್‌ಗೆ ಹೋಗಿದ್ದಾರೆ ಕತ್ರೀನಾ ಕೈಫ್. ಇಂದು ಸಂಜೆ ಖಾಸಗಿ ಪಾರ್ಟಿಯನ್ನು ಕೂಡ ಈ ನವ ಜೋಡಿ ಹಮ್ಮಿಕೊಂಡಿದ್ದು, ಯಾವ್ಯಾವ ತಾರೆಯರು ಆಗಮಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

More from Filmibeat

English summary
Katrina Kaif-Vicky Kaushal celebrate one month of wedding with these adorable new photos
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X