ಸಾಯುವ ಮುನ್ನಾ ಕೊನೆಯ ಹತ್ತು ಗಂಟೆ ಮತ್ತು ಸುಶಾಂತ್ ಮಾಡಿದ ಮೂರು ಕರೆಗಳು

ಬಾಲಿವುಡ್ ಖ್ಯಾತ ಯುವನಟ ಸುಶಾಂತ್ ಸಿಂಗ್ ರಜಪೂತ್ ನಿನ್ನೆ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Recommended Video

ಸುಶಾಂತ್ ಸಾವಿನ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು | Oneindia Kannada

ಸುಶಾಂತ್ ಸಿಂಗ್ ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ತನಿಖೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು ಈಗಾಗಲೇ ಕೆಲವಾರು ವಿವರಗಳು ಹೊರಬಿದ್ದಿವೆ.

ಸುಶಾಂತ್ ಸಿಂಗ್ ರಜಪೂತ್ ಕೊನೆಯದಾಗಿ ಕರೆ ಮಾಡಿದ್ದು ಯಾರಿಗೆ? ಕರೆ ಮಾಡಿದ್ದು ಏಕೆ? ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ವಿಷಯ ಮೊದಲು ಗೊತ್ತಾಗಿದ್ದು ಯಾರಿಗೆ? ಇನ್ನೂ ಹಲವು ಮಾಹಿತಿಗಳು ಈ ಲೇಖನದಲ್ಲಿವೆ.

ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಪ್ರಕಾರ, ಸುಶಾಂತ್ ಶನಿವಾರ ತಡರಾತ್ರಿ 1:47 ನಿಮಿಷಕ್ಕೆ ತಮ್ಮ ಗರ್ಲ್‌ಫ್ರೆಂಡ್ ರೆಹಾ ಚಕ್ರೊಬರ್ತಿಗೆ ಕರೆ ಮಾಡಿದ್ದಾರೆ. ಆದರೆ ಆಕೆ ಕಾಲ್ ರಿಸೀವ್ ಮಾಡಿಲ್ಲ.

ಆತ್ಮೀಯ ಗೆಳೆಯನಿಗೆ ಕರೆ ಮಾಡಿದ್ದಾರೆ

ಆತ್ಮೀಯ ಗೆಳೆಯನಿಗೆ ಕರೆ ಮಾಡಿದ್ದಾರೆ

ಕೂಡಲೇ ಸುಶಾಂತ್, ತಮ್ಮ ಆತ್ಮೀಯ ಗೆಳೆಯ ಮಹೇಶ್ ಶೆಟ್ಟಿಗೆ ಕರೆ ಮಾಡಿದ್ದಾರೆ. ಆದರೆ ಅವರೂ ಸಹ ಫೋನ್ ರಿಸೀವ್ ಮಾಡಿಲ್ಲ. ನಂತರ ಬೆಳಿಗ್ಗೆ ಎದ್ದ ಮಹೇಶ್ ಶೆಟ್ಟಿ, ಸುಶಾಂತ್‌ ಸಿಂಗ್ ಮಿಸ್‌ಕಾಲ್ ನೋಡಿ ವಾಪಸ್ ಕರೆ ಮಾಡಿದ್ದಾರೆ. ಆದರೆ ಈ ಬಾರಿ ಸುಶಾಂತ್ ಕಾಲ್ ರಿಸೀವ್ ಮಾಡಿಲ್ಲ.

9:20 ಗೆ ಪುನಃ ಕರೆ ಮಾಡಿದರು ಸುಶಾಂತ್

9:20 ಗೆ ಪುನಃ ಕರೆ ಮಾಡಿದರು ಸುಶಾಂತ್

ಹಾಗೆಂದು ಸುಶಾಂತ್ ರಾತ್ರಿಯೇ ನೇಣಿಗೆ ಶರಣಾಗಿರಲಿಲ್ಲ. ಮಹೇಶ್ ಕರೆ ಮಾಡಿದಾಗ ಸುಶಾಂತ್ ಬೇರೆ ಕೆಲಸದಲ್ಲಿ ನಿರತರಾಗಿದ್ದರು. ಸುಶಾಂತ್ ಆ ನಂತರ ಮತ್ತೆ 9:20 ಕ್ಕೆ ಮಹೇಶ್‌ ಗೆ ಕರೆ ಮಾಡಿದರು ಆದರೆ ಆಗ ಮಹೇಶ್‌ ಗೆ ಕಾಲ್ ಕನೆಕ್ಟ್‌ ಆಗಲಿಲ್ಲ.

ಬೆಳಿಗ್ಗೆ ಎದ್ದು ದಾಳಿಂಬೆ ಜ್ಯೂಸ್ ಕುಡಿದಿದ್ದರು

ಬೆಳಿಗ್ಗೆ ಎದ್ದು ದಾಳಿಂಬೆ ಜ್ಯೂಸ್ ಕುಡಿದಿದ್ದರು

ಸುಶಾಂತ್ ಸಿಂಗ್ ಭಾನುವಾರ ಬೆಳಿಗ್ಗೆ ಎದ್ದು ದಾಳಿಂಬೆ ಜ್ಯೂಸ್ ಕುಡಿದು, ತಿಂಡಿ ತಿಂದಿದ್ದರು. ನಂತರ 10: 25 ಕ್ಕೆ ಸುಶಾಂತ್‌ನ ಅಡುಗೆಯವರು ಮಧ್ಯಾಹ್ನ ಅಡಿಗೆ ಏನು ಮಾಡಬೇಕು ಎಂದು ಕೇಳಲು ಸುಶಾಂತ್‌ನ ರೂಮ್‌ ಬಾಗಿಲು ತಟ್ಟಿದ್ದಾರೆ. ಆದರೆ ಆಗ ಸುಶಾಂತ್ ಬಾಗಿಲು ತೆರೆದಿಲ್ಲ.

11 ಗಂಟೆಗೆ ಎದ್ದ ಸುಶಾಂತ್ ಗೆಳೆಯ

11 ಗಂಟೆಗೆ ಎದ್ದ ಸುಶಾಂತ್ ಗೆಳೆಯ

ನಂತರ ಸುಶಾಂತ್‌ ಜೊತೆಗೆ ವಾಸವಿದ್ದ ಅವರ ಗೆಳೆಯ 11 ಗಂಟೆಗೆ ಎದ್ದು, ಸುಶಾಂತ್ ರೂಂ ನ ಬಾಗಿಲು ಬಡಿದಿದ್ದಾರೆ, ಆದರೆ ಆಗಲೂ ಆತ ಬಾಗಿಲು ತೆರೆದಿಲ್ಲ. ಆಗ ಸುಶಾಂತ್ ಸಂಖ್ಯೆಗೆ ಕರೆ ಮಾಡಿದ್ದಾರೆ ಫೋನ್ ರಿಸೀವ್ ಮಾಡಿಲ್ಲ ಆಗ ಸುಶಾಂತ್ ಗೆಳೆಯನಿಗೆ ಅನುಮಾನ ಬಂದಿದೆ.

ಸುಶಾಂತ್‌ನ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು

ಸುಶಾಂತ್‌ನ ಅಕ್ಕನಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು

ಮುಂಬೈನಲ್ಲಿಯೇ ವಾಸವಿರುವ ಸುಶಾಂತ್‌ನ ಅಕ್ಕನಿಗೆ ಸುಶಾಂತ್ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ. ಸುಶಾಂತ್ ಅಕ್ಕ ಕೂಡಲೇ ಹರ್ಯಾಣಾದಲ್ಲಿ ಪ್ರಮುಖ ಸರ್ಕಾರಿ ಅಧಿಕಾರಿ ಆಗಿರುವ ತಮ್ಮ ಪತಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ಮುಂಬೈ ಪೊಲೀಸ್‌ನ ಪ್ರಮುಖ ಅಧಿಕಾರಿಗೆ ಕರೆ ಮಾಡಿ ವಿಷಯವನ್ನು ಹೇಳಿದ್ದಾರೆ.

12:45 ಕ್ಕೆ ರೂಂ ಬಾಗಿಲು ಒಡೆಯಲಾಯಿತು

12:45 ಕ್ಕೆ ರೂಂ ಬಾಗಿಲು ಒಡೆಯಲಾಯಿತು

ಇಷ್ಟೆಲ್ಲಾ ನಡೆಯುವಷ್ಟರಲ್ಲಿ ಸುಶಾಂತ್‌ನ ಗೆಳೆಯ ನಕಲಿ ಕೀ ಮಾಡುವವರನ್ನು ಮನೆಗೆ ಕರೆಸಿದ್ದಾರೆ. ಅಷ್ಟರಲ್ಲಿ ಸುಶಾಂತ್ ಅಕ್ಕ ಸಹ ಸುಶಾಂತ್ ಮನೆಗೆ ಬಂದಿದ್ದಾರೆ. ರೂಂ ನ ಬಾಗಿಲು ತೆರೆದಾಗ ಸುಶಾಂತ್ ದೇಹ ಫ್ಯಾನ್‌ಗೆ ನೇತಾಡುತ್ತಿದೆ. ಈ ಘಟನೆ ನಡೆಯುವಷ್ಟರಲ್ಲಿ ಸಮಯ ಭಾನುವಾರ ಮಧ್ಯಾಹ್ನ 12:45.

ಮುಂಬೈ ಪೊಲೀಸರು ಬಂದರು

ಮುಂಬೈ ಪೊಲೀಸರು ಬಂದರು

ಆ ವೇಳೆಗೆ ಮುಂಬೈ ಪೊಲೀಸರು ಸಹ ಅಲ್ಲಿಗೆ ಆಗಮಿಸಿದ್ದಾರೆ. ಸುಶಾಂತ್ ದೇಹವನ್ನು ಕೆಳಗಿಳಿಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಸುಶಾಂತ್ ಸತ್ತಿರುವುದಾಗಿ ಅಧಿಕೃತ ಘೋಷಣೆ ಮಾಡಲಾಗಿದೆ. ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

More from Filmibeat

English summary
Sushanth Singh Rajput made three calls before he dies. two calls to his friend Mahesh Shetty and one to his girlfriend Rhea Chakraborty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X