For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕ ಕಾಲುಗಳಿಂದ ಎಷ್ಟು ಜನಕ್ಕೆ ಉಪಯೋಗ ಇದೆ ಗೊತ್ತಾ?

  By ಸೋನು ಗೌಡ
  |

  ಬಾಲಿವುಡ್-ಹಾಲಿವುಡ್ ನಲ್ಲಿ ಭಾರಿ ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕ ಚೋಪ್ರಾ ಅವರು, ಇದೀಗ ತಮ್ಮ ಅದ್ಭುತ ಪ್ರತಿಭೆ, ಸೌಂದರ್ಯ ಮತ್ತು ನಟನೆಯಿಂದ ಎರಡೂ ಕಡೆಯಲ್ಲೂ ಅತ್ಯಂತ ಬಿಜಿ ನಟಿ ಎನಿಸಿಕೊಂಡಿದ್ದಾರೆ.

  ಸದ್ಯಕ್ಕೆ ಬಾಲಿವುಡ್ ಗಿಂತ ಹೆಚ್ಚಾಗಿ ಹಾಲಿವುಡ್ ನಲ್ಲೇ ಸಾಕಷ್ಟು ಫೇಮಸ್ಸ್ ಆಗಿರುವ ನಟಿ ಪಿಗ್ಗಿ ಅವರು ಯೂತ್ ಐಕಾನ್ ಆಗಿದ್ದಾರೆ. ಪಿಗ್ಗಿ ಅಭಿನಯದ 'ಕ್ವಾಂಟಿಕೋ' ಧಾರಾವಾಹಿ ವರ್ಲ್ಡ್ ಫೇಮಸ್ ಆಗಿದ್ದು ಸುಳ್ಳಲ್ಲ. ಇನ್ನು ಅವರ ಅಭಿನಯದ ಮೊಟ್ಟ ಮೊದಲ ಹಾಲಿವುಡ್ ಸಿನಿಮಾ 'ಬೇವಾಚ್' ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ.[ಬರ್ತ್ ಡೇ ಸ್ಪೆಷಲ್: ಪ್ರಿಯಾಂಕ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿ]

  ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿ ಪ್ರಿಯಾಂಕ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ, ತಮ್ಮ ಸೌಂದರ್ಯದ ಬಗ್ಗೆ ಮಾತನಾಡಿದ್ದಾರೆ. ಓವರ್ ಟು ಪ್ರಿಯಾಂಕ ಚೋಪ್ರಾ......

  'W' ಮ್ಯಾಗಜೀನ್ ನಲ್ಲಿ ಪಿಗ್ಗಿ ಸಂದರ್ಶನ

  'W' ಮ್ಯಾಗಜೀನ್ ನಲ್ಲಿ ಪಿಗ್ಗಿ ಸಂದರ್ಶನ

  'ನಾನು ಮಿಸ್ ವರ್ಲ್ಡ್ ಪದವಿ ಪಡೆಯುತ್ತೇನೆ ಅನ್ನೋ ನಂಬಿಕೆ ಇರಲಿಲ್ಲ. ಅಮೆರಿಕದಲ್ಲಿ ಶಾಲೆಯಲ್ಲಿ ಓದುತ್ತಿದ್ದಾಗ, ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟ ಮಾಡಿದ್ದೆ', ಎಂದು ಪ್ರಿಯಾಂಕ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.[ಲಾಸ್ ಏಂಜಲೀಸ್ ಗೆ ಶಿಫ್ಟ್, ವಿಚಾರವನ್ನು ತಳ್ಳಿ ಹಾಕಿದ ಪ್ರಿಯಾಂಕ]

  ಗಂಡುಬೀರಿ ಸ್ವಭಾವದ ಪಿಗ್ಗಿ

  ಗಂಡುಬೀರಿ ಸ್ವಭಾವದ ಪಿಗ್ಗಿ

  'ನಾನು ಹದಿಹರೆಯದವಳಾಗಿದ್ದಾಗ ಒಂಥರಾ ಗಂಡುಬೀರಿ ತರ ಇದ್ದೆ. ದೇಹದ ಮೇಲೆಲ್ಲಾ ತುಂಬಾ ಕಲೆಗಳಿದ್ದವು. ನನ್ನ ತೊಡೆ, ಕಾಲುಗಳ ಬಗ್ಗೆ ನನಗೆ ತುಂಬಾ ಮುಜುಗರ ಆಗ್ತಾ ಇತ್ತು. ಯಾಕೆಂದರೆ ಆವಾಗ ನನ್ನ ಕಾಲುಗಳು ಜಗತ್ತಿನ ಅತ್ಯಂತ ಸುಂದರ ಕಾಲುಗಳು ಆಗಿರಲ್ಲ' -ಪ್ರಿಯಾಂಕ ಚೋಪ್ರಾ[ಚಿನ್ನದ ಮೇಲಿನ ವ್ಯಾಮೋಹಕ್ಕೆ ಪ್ರಿಯಾಂಕ ಹೀಗಾ ಮಾಡೋದು.?]

  ದೇಹ ಸೌಂದರ್ಯಕ್ಕೆ ಒತ್ತು ಕೊಟ್ಟ ಚೋಪ್ರಾ

  ದೇಹ ಸೌಂದರ್ಯಕ್ಕೆ ಒತ್ತು ಕೊಟ್ಟ ಚೋಪ್ರಾ

  'ಕಾಲ ಕ್ರಮೇಣ ನನಗೆ ದೇಹ ಸೌಂದರ್ಯದ ಮಹತ್ವ ಏನೂಂತ ತಿಳಿಯತೊಡಗಿತು. ಆಗಲೇ ನಾನು ಎಚ್ಚೆತ್ತುಕೊಂಡು ದೇಹದ ಆರೈಕೆ ಮಾಡಲು ತೊಡಗಿದೆ'. -ಪ್ರಿಯಾಂಕ ಚೋಪ್ರಾ.['ಇವರನ್ನು' ಪ್ರಿಯಾಂಕ ಅನ್ಕೊಂಡ್ರಾ, ಖಂಡಿತ ಅಲ್ವೇ ಅಲ್ಲ.!]

  ಪಿಗ್ಗಿ ಕಾಲುಗಳಿಗೆ ಭಾರಿ ಬೇಡಿಕೆ

  ಪಿಗ್ಗಿ ಕಾಲುಗಳಿಗೆ ಭಾರಿ ಬೇಡಿಕೆ

  'ಅಂದು ನಾನು ನನ್ನ ದೇಹಾರೋಗ್ಯಕ್ಕೆ ಪ್ರಾಮುಖ್ಯತೆ ಕೊಟ್ಟ ಪರಿಣಾಮ, ಇಂದು ನನ್ನ ಸುಂದರ ಕಾಲುಗಳು, 12 ರಿಂದ 15 ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರುತ್ತಿವೆ. ಈಗ ನನಗೆ ಇದು ಸಾಧ್ಯವಾಗಿದೆ ಅಂದ್ರೆ, ನನ್ನಂತಹ ಅದೆಷ್ಟೋ ಹೆಣ್ಣುಮಕ್ಕಳಿಗೆ ಕೂಡ ಖಂಡಿತ ಸಾಧ್ಯವಾಗುತ್ತದೆ'. ಹೀಗೆ ಪಿಗ್ಗಿ ಬಹಳ ಹೆಮ್ಮೆಯಿಂದ ತಮ್ಮ ಸೌಂದರ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

  'ಕ್ವಾಂಟಿಕೋ'ದಲ್ಲಿ ಬಿಜಿ

  'ಕ್ವಾಂಟಿಕೋ'ದಲ್ಲಿ ಬಿಜಿ

  ಸದ್ಯಕ್ಕೆ ಪ್ರಿಯಾಂಕ ಚೋಪ್ರಾ ಅವರು 'ಕ್ವಾಂಟಿಕೋ' ಧಾರಾವಾಹಿಯ ಎರಡನೇ ಭಾಗದ ಶೂಟಿಂಗ್ ಗಾಗಿ ಅಮೆರಿಕದಲ್ಲಿ ಬಿಜಿಯಾಗಿದ್ದಾರೆ.

  'ಬ್ರಾ' ಬಗ್ಗೆ ಚೋಪ್ರಾ ಕಾಮೆಂಟ್

  'ಬ್ರಾ' ಬಗ್ಗೆ ಚೋಪ್ರಾ ಕಾಮೆಂಟ್

  ಈಗಾಗಲೇ 'ಕ್ವಾಂಟಿಕೋ' ಮತ್ತು 'ಬೇವಾಚ್'ನಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕ ಅವರು, ಒಳ ಉಡುಪು ಬ್ರಾ ಬಗ್ಗೆ ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ನನಗೆ 'ಬ್ರಾ' ತೋರಿಸಲು ಸ್ವಲ್ಪ ಮುಜುಗರ ಆಗುತ್ತೆ, ಅದು ಒಳ ಉಡುಪಾದ್ದರಿಂದ ಒಳಗೆ ಇದ್ದರೆ ಸರಿ' ಎಂದಿದ್ದಾರೆ. ಖಂಡಿತ 'ಬ್ರಾ'ವನ್ನು ಪಿಗ್ಗಿ ಶರ್ಟ್ ಅಂತ ಪರಿಗಣಿಸೋದಿಲ್ವಂತೆ.

  English summary
  Bollywood-Hollywood Actress Priyanka Chopra is making herself heard all across the US and is creating waves as the days pass through her style statements, comments and TV shows. Priyanka Chopra opened up in a recent interview about her transformation and said that during her teenage days,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X