Just In
Don't Miss!
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- News
ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್
- Automobiles
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ ಅಕ್ಷಯ್ ಕುಮಾರ್ 'ಟಾಯ್ಲೆಟ್'
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸ್ ನೆಸ್ ಮಾಡ್ತಿದೆ. ಮೊದಲ ಮೂರು ದಿನದಲ್ಲಿ 50 ಕೋಟಿ ಗಳಿಸಿದ್ದ ಚಿತ್ರ ಈಗ ನೂರು ಕೋಟಿ ಕ್ಲಬ್ ಗೆ ಸೇರಿದೆ.
'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರ ಬಿಡುಗಡೆಯಾಗಿ 8 ದಿನಕ್ಕೆ ನೂರು ಕೋಟಿ ಗಳಿಸಿದ್ದು, ಅಕ್ಷಯ್ ಕುಮಾರ್ ವೃತ್ತಿ ಜೀವನದ ಮತ್ತೊಂದು ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ. ಇದಕ್ಕು ಮುಂಚೆ ಅಕ್ಷಯ್ ಅಭಿನಯದ ಏಳು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದೆ.

'ರೌಡಿ ರಾಥೋರ್', 'ಏರ್ ಲಿಫ್ಟ್', 'ರುಸ್ತುಂ', 'ಜಾಲಿ ಎಲ್.ಎಲ್.ಬಿ', 'ಹೌಸ್ ಫುಲ್-2', 'ಹಾಲಿಡೇ', 'ಹೌಸ್ ಫುಲ್-3' ಚಿತ್ರಗಳು ಶತಕೋಟಿಯ ಕ್ಲಬ್ ನಲ್ಲಿ ಸ್ಥಾನ ಪಡೆದುಕೊಂಡಿತ್ತು. ಈಗ 8ನೇ ಚಿತ್ರವಾಗಿ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸೇರಿಕೊಂಡಿದೆ.
ಮೂರೇ ದಿನಕ್ಕೆ 'ಟಾಯ್ಲೆಟ್'ನಲ್ಲಿ ಇಷ್ಟೊಂದು ಹಣ ಸಿಕ್ಕಿದೆ.!
ಸಲ್ಮಾನ್ ಖಾನ್ ಅವರ 'ಟ್ಯೂಬ್ ಲೈಟ್' ಮತ್ತು ಶಾರುಖ್ ಖಾನ್ ಅಭಿನಯದ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದ್ದು ಅಕ್ಷಯ್ ಕುಮಾರ್ ಚಿತ್ರ ಅಬ್ಬರದ ಪ್ರದರ್ಶನ ಕಾಣುತ್ತಿದೆ.
ವಿಮರ್ಶೆ: 'ಟಾಯ್ಲೆಟ್'ನಲ್ಲಿ ಕಂಡ ದೇಶದ ಗಂಭೀರ ಸಮಸ್ಯೆ
'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರ ದೇಶದ ಗಂಭೀರ ಸಮಸ್ಯೆ 'ಶೌಚಾಲಯ ವ್ಯವಸ್ಥೆ' ಬಗ್ಗೆ ಇದ್ದು, ನೈಜ ಘಟನೆಗಳನ್ನು ಆಧಾರಿಸಿ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ಜೋಡಿಯಾಗಿ ಭೂಮಿ ಪೆಡ್ನೆಕರ್ ಮತ್ತು ಅನುಪಮ್ ಖೇರ್ ಅಭಿನಯಿಸಿದ್ದಾರೆ. ಚಿತ್ರವನ್ನು ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ.