»   » ರಿಲೀಸ್ ಗೂ ಮೊದಲೇ ಅಕ್ಷಯ್ ಕುಮಾರ್ ಸಿನಿಮಾ ಲೀಕ್.!

ರಿಲೀಸ್ ಗೂ ಮೊದಲೇ ಅಕ್ಷಯ್ ಕುಮಾರ್ ಸಿನಿಮಾ ಲೀಕ್.!

Posted By:
Subscribe to Filmibeat Kannada

ನಟ ಅಕ್ಷಯ್ ಕುಮಾರ್ ಅಭಿನಯದ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರ ಬಿಡುಗಡೆಯಾಗುವ ಮುನ್ನವೇ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ. ಆಗಸ್ಟ್ 11 ರಂದು ಈ ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುಂಚೆಯೇ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಆತಂಕ ತಂದಿದೆ.

'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸೋರಿಕೆಯಾಗಿರುವುದರ ಬಗ್ಗೆ ಮೊದಲು ಕೊರಿಯೋಗ್ರಫರ್ ರೆಮೋ ಡಿಸೋಜಾ ಅವರಿಗೆ ಮಾಹಿತಿ ಸಿಕ್ಕಿತ್ತಂತೆ. ಅದನ್ನ ಪರೀಕ್ಷಿಸಿದಾಗ ಸೋರಿಕೆಯಾಗಿರುವುದರ ಪೆನ್ ಡ್ರೈವ್ ಸಿಕ್ಕಿದೆ. ಇದರಿಂದ ಎಚ್ಚೆತ್ತುಕೊಂಡ ರೆಮೋ ಡಿಸೋಜಾ ಕೂಡಲೆ ಈ ವಿಷ್ಯವನ್ನ ಚಿತ್ರತಂಡಕ್ಕೆ ತಿಳಿಸಿದ್ದಾರೆ.

Toilet Ek Prem Katha leaked

ಈ ವಿಷ್ಯವಾಗಿ ಮೊದಲು ನಟ ಅಕ್ಷಯ್ ಕುಮಾರ್ ಅವರನ್ನ ಸಂಪರ್ಕ ಮಾಡಲು ರೆಮೋ ಡಿಸೋಜಾ ಪ್ರಯತ್ನ ಪಟ್ಟರಂತೆ. ಆದ್ರೆ, ಅಕ್ಷಯ್ ಕುಮಾರ್ ಲಂಡನ್ ನಲ್ಲಿರುವ ಕಾರಣ ಸಂಪರ್ಕಕ್ಕೆ ಸಿಗಲಿಲ್ಲವಂತೆ. ನಂತರ ಚಿತ್ರದ ನಿರ್ಮಾಪಕ ಪ್ರೇರಣಾ ಅರೋರ, ನಿರ್ದೇಶಕ ಶ್ರೀ ನಾರಾಯಣ್ ಸಿಂಗ್ ಅವರಿಗೆ ವಿಷಯ ತಿಳಿಸಿದಾಗ ಅವರು ಬಂದು ಪೆನ್ ಡ್ರೈವ್ ತೆಗೆದುಕೊಂಡು ಹೋದರು ಎಂದರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರೆಮೋ ಡಿಸೋಜಾ ತಿಳಿಸಿದ್ದಾರೆ.

Toilet Ek Prem Katha leaked

ಈ ವಿಷ್ಯ ತಿಳಿದ ಅಕ್ಷಯ್ ಕುಮಾರ್ ಟ್ವಿಟ್ಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. ''ದಯವಿಟ್ಟು ಪೈರಸಿ ಮಾಡಬೇಡಿ. ನಮ್ಮ ಚಿತ್ರಕ್ಕೆ ಸಹಕರಿಸಿ. ಲೀಕ್ ಆಗಿರುವುದರ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ'' ಎಂದಿದ್ದಾರೆ. ಇನ್ನು ಈ ಸಂಬಂಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

English summary
Akshay Kumar and Bhumi Pednekar's 'Toilet Ek Prem Katha' has been leaked, and choreographer Remo D'Souza has brought it to the filmmakers' notice

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada