ಮೂರೇ ದಿನಕ್ಕೆ 'ಟಾಯ್ಲೆಟ್'ನಲ್ಲಿ ಇಷ್ಟೊಂದು ಹಣ ಸಿಕ್ಕಿದೆ.!
ನಟ ಅಕ್ಷಯ್ ಕುಮಾರ್ ನಟನೆಯ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾ ಕಳೆದ ವಾರ ರಿಲೀಸ್ ಆಗಿತ್ತು. ಸದ್ಯ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ.
'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾ ಸದ್ಯ 50 ಕೋಟಿ ಗಳಿಸಿದೆ. ಮೊದಲ ದಿನ 13.1 ಕೊಟಿ, ಎರಡನೇ ದಿನ 17.1 ಕೊಟಿ ಹಾಗೂ ಮೂರನೇ ದಿನ 20 ಕೋಟಿ ಗಳಿಸುವ ಮೂಲಕ ಸಿನಿಮಾ 50 ಕೋಟಿಯ ಗಡಿ ದಾಟಿದೆ. ಜೊತೆಗೆ ನಾಳೆ (ಆಗಸ್ಟ್ 15)ರಂದು ಸ್ವಾತಂತ್ರ್ಯೋತ್ಸವದ ದಿನ ಸಿನಿಮಾಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಗುವ ಸಾಧ್ಯತೆ ಇದೆ.

ಅಂದಹಾಗೆ, 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರ ದೇಶದ ಗಂಭೀರ ಸಮಸ್ಯೆ 'ಶೌಚಾಲಯ ವ್ಯವಸ್ಥೆ' ಬಗ್ಗೆ ಇದ್ದು, ನೈಜ ಘಟನೆಗಳನ್ನು ಆಧಾರಿಸಿ ಸಿನಿಮಾ ಮಾಡಲಾಗಿದೆ. ಶ್ರೀ ನಾರಾಯಣ್ ಸಿಂಗ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಕ್ಷಯ್ ಕುಮಾರ್ ಇಲ್ಲಿ ಕೇಶವ ಎನ್ನುವ ಹುಡುಗನ ಪಾತ್ರವನ್ನು ಮಾಡಿದ್ದಾರೆ.
More from Filmibeat
English summary
Akshay Kumar starrer 'Toilet - Ek Prem Katha' movie collected 50 crore in 3 days


Click it and Unblock the Notifications











