»   » ಇದೇ ವಾರ ತೆರೆಗೆ ಬರಲಿದೆ ಅಕ್ಷಯ್ ಕುಮಾರ್ ನಟನೆಯ 'ಟಾಯ್ಲೆಟ್' ಚಿತ್ರ

ಇದೇ ವಾರ ತೆರೆಗೆ ಬರಲಿದೆ ಅಕ್ಷಯ್ ಕುಮಾರ್ ನಟನೆಯ 'ಟಾಯ್ಲೆಟ್' ಚಿತ್ರ

Posted By:
Subscribe to Filmibeat Kannada

ಅಕ್ಷಯ್ ಕುಮಾರ್ ಅಭಿನಯದ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾ ನಾಳೆ (ಆಗಸ್ಟ್ 11)ಕ್ಕೆ ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾ ಟೈಟಲ್, ಟ್ರೇಲರ್, ಕಥೆ ಹೀಗೆ ಅನೇಕ ಅಂಶಗಳ ಮೂಲಕ ದೊಡ್ಡ ಕುತೂಹಲವನ್ನು ಹುಟ್ಟಿಸಿದೆ.

ಅಕ್ಷಯ್ 'ಟಾಯ್ಲೆಟ್' ಚಿತ್ರದ ಮೊದಲ ಹಾಡು ಹೇಗಿದೆ ನೋಡಿ..

ಚಿತ್ರದ ಕಥೆ ದೇಶದ ಗಂಭೀರ ಸಮಸ್ಯೆ 'ಶೌಚಾಲಯ ವ್ಯವಸ್ಥೆ' ಬಗ್ಗೆ ಇದ್ದು, ನೈಜ ಘಟನೆಗಳನ್ನು ಆಧಾರಿಸಿ ಸಿನಿಮಾ ಮಾಡಲಾಗಿದೆಯಂತೆ. ಅಕ್ಷಯ್ ಕುಮಾರ್ ಇಲ್ಲಿ ಕೇಶವ ಎನ್ನುವ ಹುಡುಗನ ಪಾತ್ರವನ್ನು ಮಾಡಿದ್ದಾರೆ.

'Toilet - Ek Prem Katha' Movie Releasing on August 11th.

ಇಂದಿಗೂ ಭಾರತದ ಎಷ್ಟೊ ಹಳ್ಳಿಗಳಲ್ಲಿ ಸರಿಯಾಗಿ ಶೌಚಾಲಯ ಇಲ್ಲ. ಅಲ್ಲದೆ ಮಹಿಳೆಯರು ಬಯಲಿನಲ್ಲಿಯೇ ಮಲವಿಸರ್ಜನೆ ಮಾಡುವ ಸ್ಥಿತಿ ಇವತ್ತಿಗೂ ಇದೆ. ಇಂತಹ ಗಂಭೀರ ವಿಷಯಗಳನ್ನು ಸಿನಿಮಾದಲ್ಲಿ ಹೇಳಿದ್ದಾರೆ. ಶ್ರೀ ನಾರಾಯಣ್ ಸಿಂಗ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅನುಪಮ್ ಖೇರ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅಕ್ಷಯ್ ಕುಮಾರ್ 'ಟಾಯ್ಲೆಟ್' ಚಿತ್ರದ ಟ್ರೇಲರ್ ಬಿಡುಗಡೆ

'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾ ಇದೇ ಶುಕ್ರವಾರ 70ಕ್ಕೂ ಹೆಚ್ಚು ದೇಶದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಸಿನಿಮಾದ ಟಿಕೆಟ್ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ.

English summary
Akshay Kumar starrer 'Toilet - Ek Prem Katha' Movie Releasing on August 11th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada