2022ರಲ್ಲಿ ಹಿಂದಿ ಪ್ರೇಕ್ಷಕರು ಹೆಚ್ಚು ವೀಕ್ಷಿಸಿದ 10 ಚಿತ್ರಗಳು; ಕೆಜಿಎಫ್‌ಗೂ ಬೇರೆ ಚಿತ್ರಗಳಿಗೂ ಅಜಗಜಾಂತರ ವ್ಯತ್ಯಾಸ!
2022ರಲ್ಲಿ ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳು ಅಬ್ಬರಿಸಿರುವುದು ತಿಳಿದಿರುವ ವಿಷಯವೇ. ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭಾರತದ ಬರೋಬ್ಬರಿ ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು ಈ ಪೈಕಿ ಹಿಂದಿಯ 8 ಚಿತ್ರಗಳು ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಉಳಿದ ಚಿತ್ರಗಳೆಲ್ಲಾ ದಕ್ಷಿಣ ಭಾರತ ಚಿತ್ರರಂಗಗಳ ಚಿತ್ರಗಳಾಗಿವೆ.
ಅದರಲ್ಲಿಯೂ ವಿಶೇಷವೇನೆಂದರೆ ಇಷ್ಟು ವರ್ಷಗಳ ಕಾಲ ಹಿಂದಿ ಪ್ರಾಂತ್ಯದಲ್ಲಿ ಹೆಚ್ಚೇನೂ ಸದ್ದು ಮಾಡದೇ ಇದ್ದ ದಕ್ಷಿಣ ಭಾರತ ಚಿತ್ರರಂಗದ ಚಿತ್ರಗಳು ಪ್ಯಾನ್ ಇಂಡಿಯಾ ಟ್ರೆಂಡ್‌ನ ಅಬ್ಬರ ಹೆಚ್ಚಾದ ಕಾರಣ ಈ ವರ್ಷ ಹಿಂದಿ ಬಾಕ್ಸ್ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಗಳಿಕೆ ಮಾಡಿ ಲಾಭ ಗಳಿಸಿವೆ. ವಿಶೇಷವೆಂದರೆ ಹೈಪ್ ಇಲ್ಲದ ಚಿತ್ರಗಳಾದ ಕಾರ್ತಿಕೇಯ 2, ಕಾಂತಾರ ರೀತಿಯ ಚಿತ್ರಗಳು ಹಿಂದಿಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿವೆ.
ಇನ್ನು ಈ ವರ್ಷ ಹಿಂದಿ ಬೆಲ್ಟ್‌ನಲ್ಲಿ ಅತಿಹೆಚ್ಚು ಮಂದಿಯಿಂದ ವೀಕ್ಷಿಸಲ್ಪಟ್ಟ ಟಾಪ್ 10 ಚಿತ್ರಗಳ ಪಟ್ಟಿ ಇದೀಗ ಬಿಡುಗಡೆಗೊಂಡಿದ್ದು, ಹಿಂದಿಯ ಚಿತ್ರಗಳನ್ನೆಲ್ಲಾ ಹಿಂದಿಕ್ಕಿರುವ ಸ್ಯಾಂಡಲ್‌ವುಡ್‌ನ ಕೆಜಿಎಫ್ ಚಾಪ್ಟರ್ 2 ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಹಾಗಾದರೆ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಿ ಬೆಲ್ಟ್‌ನಲ್ಲಿ ಎಷ್ಟು ಸಿನಿ ರಸಿಕರು ವೀಕ್ಷಿಸಿದ್ದಾರೆ ಹಾಗೂ ಹಿಂದಿ ಬೆಲ್ಟ್‌ನಲ್ಲಿ ಹೆಚ್ಚು ಜನರಿಂದ ವೀಕ್ಷಿಸಲ್ಟಟ್ಟ ಚಿತ್ರಗಳ ಸಂಪೂರ್ಣ ಪಟ್ಟಿ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಎಷ್ಟು ವೀಕ್ಷಕರು?
ಈ ವರ್ಷ ಹಿಂದಿ ಬೆಲ್ಟ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಬರೋಬ್ಬರಿ 2.69 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಮೂಲಕ ಈ ವರ್ಷ ಹಿಂದಿ ಪ್ರಾಂತ್ಯದಲ್ಲಿ ಅತಿಹೆಚ್ಚು ವೀಕ್ಷಕರಿಂದ ವೀಕ್ಷಿಸಲ್ಪಟ್ಟ ಚಿತ್ರ ಎಂಬ ದಾಖಲೆಯನ್ನು ಈ ಚಿತ್ರ ಬರೆದಿದೆ. ಇನ್ನು ಎರಡು ಕೋಟಿಗೂ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿರುವ ಕೆಜಿಎಫ್ ಚಿತ್ರಕ್ಕೂ ಪಟ್ಟಿಯಲ್ಲಿರುವ ಉಳಿದ ಚಿತ್ರಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.

ಟಾಪ್ 10 ಪಟ್ಟಿ
ಇನ್ನು ಹಿಂದಿ ಬೆಲ್ಟ್‌ನಲ್ಲಿ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಚಿತ್ರಗಳ ಟಾಪ್ 10 ಪಟ್ಟಿ ಹೀಗಿದೆ..
1. ಕೆಜಿಎಫ್ ಚಾಪ್ಟರ್ 2 - 2.69 ಕೋಟಿ
2. ಬ್ರಹ್ಮಾಸ್ತ್ರ - 1.5 ಕೋಟಿ
3. ಆರ್ ಆರ್ ಆರ್ - 1.42 ಕೋಟಿ
4. ದ ಕಾಶ್ಮೀರ್ ಫೈಲ್ಸ್ - 1.42 ಕೋಟಿ
5.ಭೂಲ್ ಬುಲಯ್ಯ 2 - 99 ಲಕ್ಷ
6. ಗಂಗೂಬಾತಿ ಕಾಥಿಯಾವಾಡಿ - 88 ಲಕ್ಷ
7. ಡಾಕ್ಟರ್ ಸ್ಟ್ರೇಂಜ್ ಇನ್ ದ ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್ ( ಇಂಗ್ಲಿಷ್ ) - 43 ಲಕ್ಷ
8 ವಿಕ್ರಮ್ ವೇದ - 42 ಲಕ್ಷ
9. ಜುಗ್ ಜುಗ್ ಜೀಯೊ - 29 ಲಕ್ಷ

ಬಾಯ್‌ಕಾಟ್ ಬಿಸಿ ತಟ್ಟಿದೆ
ಇಷ್ಟು ವರ್ಷಗಳ ಕಾಲ ಕೋಟಿ ಕೋಟಿ ಸಿನಿ ರಸಿಕರನ್ನು ಚಿತ್ರಮಂದಿರಗಳಿಗೆ ಸುಲಭವಾಗಿ ಕರೆತರುತ್ತಿದ್ದ ಹಿಂದಿ ಚಿತ್ರಗಳು ಈ ವರ್ಷ ಗೆಲ್ಲುವಲ್ಲಿ ವಿಫಲವಾಗಿವೆ. ಈ ಮಟ್ಟಿಗಿನ ಇಳಿಕೆಗೆ ಬಾಯ್‌ಕಾಟ್ ಅಭಿಯಾನ ಸಹ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಈ ಬಾಯ್‌ಕಾಟ್ ಟ್ರೆಂಡ್‌ನ ಪ್ರಭಾವ ಎಷ್ಟರ ಮಟ್ಟಿಗೆ ಇತ್ತೆಂದರೆ ಸ್ಟಾರ್ ನಟರಾದ ಆಮೀರ್ ಖಾನ್ ಹಾಗೂ ಅಕ್ಷಯ್ ಕುಮಾರ್ ಚಿತ್ರಗಳೇ ಮಕಾಡೆ ಮಲಗಿದವು.


Click it and Unblock the Notifications











