Year Ender 2024 ; ಈ ವರ್ಷ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ಮೂರು ಸುರಸುಂದರಿಯರು ಇವರೇ..!

ಚಿತ್ರಕ್ಕೆ ಕೇವಲ ನಾಯಕ ಮಾತ್ರ ಮುಖ್ಯ ಅಲ್ಲ ಖಳನಾಯಕ ಸೇರಿ ನಿರ್ದೇಶಕ-ನಿರ್ಮಾಪಕ-ತಂತ್ರಜ್ಞರು ಸೇರಿ ನಾಯಕಿ ಕೂಡ ಮುಖ್ಯ. ಆದರೆ ಬಹುತೇಕ ಸಂದರ್ಭದಲ್ಲಿ ಚಿತ್ರದ ಗೆಲುವೆಲ್ಲ ನಾಯನನೊಬ್ಬನದ್ದೇ ಎಂಬಂತೆ ಉತ್ಸವ ಹೊರಡುತ್ತೆ. ಇದರಿಂದ ಈ ಮೆರವಣಿಗೆ ಹೊರಡಿಸಲು ವರ್ಷಗಟ್ಟಲೆ ಮಣ್ಣ ಹೊತ್ತ ಅನೇಕ ಮನಸುಗಳು ನೊಂದುಕೊಳ್ಳುತ್ತವೆ. ಆದರೂ ಅದನ್ನು ತೋರಿಸಿಕೊಳ್ಳದೇ ತಮ್ಮ ಪಾಡಿಗೆ ಕೆಲಸ ಮಾಡುತ್ತಾ ಇಲ್ಲಿ ಅನೇಕರು ಹೋಗುತ್ತಾರೆ. ಅಂದುಕೊಂಡ ಕ್ರೆಡಿಟ್ ಸಿಗದೇ ಇದ್ದರೂ ಗೆಲುವಲ್ಲಿ ಪಾಲುದಾರರಾಗುತ್ತಾರೆ. ಹೀಗೆ ಬಾಲಿವುಡ್‌ನಲ್ಲಿ ಈ ವರ್ಷ ಗೆದ್ದು ಬೀಗಿದ ಮೂರು ನಾಯಕಿಯರ ಪಟ್ಟಿ ಇಲ್ಲಿದೆ.

ದೀಪಿಕಾ ಪಡುಕೋಣೆ

ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ ಈ ವರ್ಷ ಮೂರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆ ಪೈಕಿ ಹೃತಿಕ್ ರೋಷನ್ ಜೊತೆ ಅಭಿನಯಿಸಿದ್ದ ಫೈಟರ್ ಕೂಡ ಒಂದು. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಅಂದುಕೊಂಡ ಗೆಲುವು ಸಿಗಲಿಲ್ಲವಾದರೂ ಚಿತ್ರ ಸೋಲನ್ನೂ ಕಾಣಲಿಲ್ಲ. ಭಾರತದ ಮಾರುಕಟ್ಟೆಯಲ್ಲಿ ₹244 ಕೋಟಿಯನ್ನು ಗಳಿಸಿದ ಚಿತ್ರ ಹೊರ ದೇಶದಲ್ಲಿ ₹99.76 ಕೋಟಿಯನ್ನು ಗಳಿಸಿತ್ತು.

Top 3 Female Celebs with 3 Box Office Hits in 2024 Deepika Padukone Leads

ಫೈಟರ್ ಹೊರತು ಪಡಿಸಿದರೆ ದೀಪಿಕಾ ಈ ಕಲ್ಕಿ 2898 AD ಚಿತ್ರದಲ್ಲಿ ಕಾಣಿಸಿಕೊಂಡರು. ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಂಡರು. ಅಪಾರವಾದ ನಿರೀಕ್ಷೆಯನ್ನು ಮೂಡಿಸಿದ್ದ ಕಲ್ಕಿ 2898 AD ಭಾರತದಲ್ಲಿಯೇ ₹ 755.3 ಕೋಟಿಯನ್ನು ಗಳಿಸಿತ್ತು. ಇನ್ನೂ ಹೊರ ದೇಶದಲ್ಲಿ ಹರಿದು ಬಂದ ಮೊತ್ತ ₹600 ಕೋಟಿ ಪ್ಲಸ್. ಒಂದು ಲೆಕ್ಕಾಚಾರದ ಪ್ರಕಾರ ಚಿತ್ರದ ಒಟ್ಟಾರೆ ಗಳಿಕೆ ₹1,200 ಕೋಟಿ. ವಿಶೇಷ ಅಂದರೆ ಕಲ್ಕಿ 2898AD ಚಿತ್ರವನ್ನು ತೆಲುಗಿನಲ್ಲಿ ನೋಡುವುದಕ್ಕಿಂತ ಹೆಚ್ಚು ಜನ ಹಿಂದಿಯಲ್ಲಿ ನೋಡಿದ್ದಾರೆ. ಇದಕ್ಕೆ ಹಿಂದಿ ಮಾರುಕಟ್ಟೆಯಲ್ಲಿ ಹರಿದು ಬಂದ ₹227 ಕೋಟಿ ಸಾಕ್ಷಿ.

ಫೈಟರ್ ಮತ್ತು ಕಲ್ಕಿ 2898 AD ಹೊರತು ಪಡಿಸಿದರೆ ದೀಪಿಕಾ ಪಡುಕೋಣೆ ಸಿಂಗಂ ಅಗೇನ್ ಚಿತ್ರದಲ್ಲಿ ಕೂಡ ಕಾಣಿಸಿಕೊಂಡರು. ಲೇಡಿ ಸಿಂಗಂ ಆಗಿ ಅಬ್ಬರಿಸಿದರು. ತೆರೆಗೆ ಬಂದು 32 ದಿನವಾದರೂ ಇನ್ನೂ ಚಿತ್ರಮಂದಿರದಲ್ಲಿ ಇರುವ ಸಿಂಗಂ ಅಗೇನ್ ಭಾರತದಲ್ಲಿಯೇ ಇಲ್ಲಿಯವರೆಗೆ ₹246.75 ಕೋಟಿಯನ್ನು ಗಳಿಸಿದೆ. ಹೊರದೇಶದ ಗಳಿಕೆಯನ್ನು ಇಲ್ಲಿ ಸೇರಿಸಿದರೆ ಚಿತ್ರದ ಗಳಿಕೆ ₹367 ಕೋಟಿಯನ್ನು ದಾಟುತ್ತೆ.

ತೃಪ್ತಿ ದಿಮ್ರಿ

ಇನ್ನೂ ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ತೃಪ್ತಿ ದಿಮ್ರಿಗೆ ಕೂಡ ಈ ವರ್ಷ ಸಿಕ್ಕಿದ್ದು ಹ್ಯಾಟ್ರಿಕ್ ಗೆಲುವು. ಬ್ಯಾಡ್ ನ್ಯೂಸ್ ಚಿತ್ರದ ಮೂಲಕ ಈ ವರ್ಷದ ಖಾತೆಯನ್ನು ತೆರೆದ ತೃಪ್ತಿ ದಿಮ್ರಿ, ವಿಕ್ಕಿ ಕೌಶಲ್ ಜೊತೆ ಸೇರಿ ಭಾರತದ ಬಾಕ್ಸಾಫೀಸ್‌ನಲ್ಲಿ ₹78.9 ಕೋಟಿಯನ್ನು ದೋಚಿದರು. ವಿದೇಶದಲ್ಲಿ ಈ ಚಿತ್ರದ ಗಳಿಕೆ ₹36.84 ಕೋಟಿ. ಈ ಮೂಲಕ ₹80ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ ₹115.74 ಕೋಟಿ ಗಳಿಸುವಲ್ಲಿ ಯಶಸ್ವಿಯಾಯಿತು.

ಬ್ಯಾಡ್ ನ್ಯೂಸ್ ಚಿತ್ರದ ನಂತರ ತೃಪ್ತಿ ದಿಮ್ರಿ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಚಿತ್ರದಲ್ಲಿ ಕಾಣಿಸಿಕೊಂಡರು. ರಾಜ್ ಕುಮಾರ್ ರಾವ್ ಈ ಚಿತ್ರದ ನಾಯಕ. ಆದರೆ ಈ ಚಿತ್ರ ಅಂದುಕೊಂಡ ಗೆಲುವನ್ನು ಕಾಣಲಿಲ್ಲ. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಭಾರತದಲ್ಲಿ ಕೇವಲ ₹47.1 ಕೋಟಿಯನ್ನು ಗಳಿಸಿದ ಈ ಚಿತ್ರ ಹೊರದೇಶದಲ್ಲಿ ₹8.41ಕೋಟಿಯನ್ನು ಕೊಳ್ಳೆ ಹೊಡೆಯಿತು. ₹55.51 ಕೋಟಿಯನ್ನು ಗಳಿಸಿ ಚಿತ್ರಮಂದಿರದಿಂದ ಎತ್ತಂಗಡಿ ಆಯಿತು.

ಆದರೆ ಇವೆರಡು ಚಿತ್ರಗಳ ನಂತರ ಬಂದ ಭೂಲ್ ಭುಲಯ್ಯ 3 ತೃಪ್ತಿ ದಿಮ್ರಿ ಸ್ಟಾರ್ ವ್ಯಾಲ್ಯೂನ ಇನ್ನು ಹೆಚ್ಚಿಸಿತು. ಸಿಂಗಂ ಅಗೇನ್ ಚಿತ್ರದ ಎದುರು ಬಂದರು ಕೂಡ ಚಿತ್ರ ಬಾಕ್ಸಾಫೀಸ್‌ನಲ್ಲಿ ಗೆಲುವಿನ ನಗೆಯನ್ನು ಬೀರಿತು. ಭಾರತದ ಮಾರುಕಟ್ಟೆಯಲ್ಲಿ ಇಲ್ಲಿಯವರೆಗೆ ₹296 ಕೋಟಿಯನ್ನು ಗಳಿಸಿದ ಈ ಚಿತ್ರ ಸಪ್ತಸಾಗರದಾಚೆ ಇಲ್ಲಿವರೆಗೆ ₹75 ಕೋಟಿ ಗಳಿಸಿದೆ. ಚಿತ್ರದ ಒಟ್ಟಾರೆ ಗಳಿಕೆ ₹371ಕೋಟಿ ಗಡಿಯನ್ನು ತಲುಪಿದೆ.

top-3-female-celebs-with-3-box-office-hits-in-2024-deepika-padukone-leads

ಕೃತಿ ಸನೂನ್

ಹೀರೋಂಪತಿ ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಕೃತಿ ಸನೂನ್ ಅವರಿಗೆ ಕೂಡ ಈ ವರ್ಷ ತುಂಬಾ ಲಕ್ಕಿ. ಶಾಹಿದ್ ಕಪೂರ್ ಜೊತೆ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ಮೂಲಕ ಎಲ್ಲರ ಗಮನ ಸೆಳೆದರು. ಭಾರತದಲ್ಲಿ ₹96.29 ಕೋಟಿಯನ್ನು ಗಳಿಸಿದ್ದ ಚಿತ್ರ ವಿದೇಶದಲ್ಲಿ ₹37.35ಕೋಟಿ ಗಳಿಸಿತು. ಈ ಮೂಲಕ ₹133.64 ಕೋಟಿಯನ್ನು ಈ ಚಿತ್ರ ದೋಚಿತ್ತು.

ಇನ್ನೂ 'ಪುರುಷ ಪ್ರಧಾನ'' ಚಿತ್ರರಂಗದಲ್ಲಿ ''ಮಹಿಳಾ ಪ್ರಧಾನ'' ಸಿನಿಮಾ ಬರಲ್ಲ, ಅಪ್ಪಿ ತಪ್ಪಿ ಬಂದರೂ ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲ್ಲ ಅನ್ನುವ ಮಾತು ಹಾಗೂ ನಂಬಿಕೆ ಎರಡು ಬಣ್ಣದ ಲೋಕದಲ್ಲಿದೆ. ಆದರೆ ಈ ಮಾತು ಹಾಗೂ ನಂಬಿಕೆಯನ್ನು ಕರೀನಾ ಕಪೂರ್ ಖಾನ್, ಟಬು ಮತ್ತು ಕೃತಿ ಸನೊನ್ ಅಭಿನಯಿಸಿದ್ದ ''ಕ್ರೂ'' ಸುಳ್ಳು ಮಾಡಿತು. ಭಾರತದಲ್ಲಿ ₹107.05 ಕೋಟಿ ಗಳಿಸಿದ ಈ ಚಿತ್ರ ಓವರ್ ಸೀಸ್‌ನಲ್ಲಿ ₹50.03 ಕೋಟಿ ಗಳಿಸಿತು. ಒಟ್ಟಾರೆ ₹157.08 ಕೋಟಿ ಗಳಿಸುವ ಮೂಲಕ ಹೊಸ ದಾಖಲೆ ಬರೆಯಿತು.

ಇವೆರಡು ಚಿತ್ರಗಳನ್ನು ಹೊರತು ಪಡಿಸಿದರೆ ಕೃತಿ ದೋ ಪತ್ತಿ ಎಂಬ ಚಿತ್ರದಲ್ಲಿ ಕೂಡ ಆಕ್ಟ್ ಮಾಡಿದ್ದರು. ಆದರೆ ಈ ಚಿತ್ರ ಚಿತ್ರಮಂದಿರದಲ್ಲಿ ಅಲ್ಲ ಬದಲಿಗೆ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಜನಮನ್ನಣೆ ಗಳಿಸಿತು. ನೆಟ್‌ಪ್ಲಿಕ್ಸ್‌ನಲ್ಲಿ ಮೊದಲ ವಾರ 5 ಮಿಲಿಯನ್ ವೀಕ್ಷಣೆ ಕಂಡ ಈ ಚಿತ್ರ ಎರಡನೇ ವಾರ 7.2 ಮಿಲಿಯನ್ ವೀಕ್ಷಣೆ ಕಂಡಿತು. ಈ ಮೂಲಕ ದಾಖಲೆಯನ್ನು ಬರೆಯಿತು. ಈ ಚಿತ್ರಕ್ಕೆ ಖುದ್ದು ಕೃತಿ ಸನೂನ್ ಅವರೇ ನಿರ್ಮಾಪಕಿ ಅನ್ನುವುದೇ ವಿಶೇಷ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X