ರಾತ್ರೋರಾತ್ರಿ 'ಸೂಪರ್ ಸ್ಟಾರ್'ಗಳಾದ ಈ 5 ಜನರ ಬಗ್ಗೆ ನೀವು ತಿಳಿಯಬೇಕು

By Bharath Kumar

ಕೆಲವರು ವರ್ಷಗಳ ಕಾಲ ಕಷ್ಟಪಟ್ಟರು ಯಶಸ್ಸು ಸಿಗಲ್ಲ. ಯಶಸ್ಸು ಬೇಡ ಕನಿಷ್ಟ ಹೆಸರು ಕೂಡ ಮಾಡೋಕೆ ಆಗಲ್ಲ. ಅದರಲ್ಲೂ ಸಿನಿಮಾ ಜಗತ್ತಿನಲ್ಲಿ ಅದು ಅದೃಷ್ಟವೇ ಸರಿ. ಆದ್ರೆ, ಇತ್ತೀಚೀನ ದಿನಗಳಲ್ಲಿ ಅದು ಸಾಧ್ಯವಾಗುತ್ತಿದೆ.

ಫೇಮಸ್ ಆಗೋಕೆ ವರ್ಷ ಕಾಯಬೇಕಿಲ್ಲ, ಕೆಲವೇ ನಿಮಿಷಗಳು ಸಾಕು ಎಂದು ತೋರಿಸುತ್ತಿದ್ದಾರೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸೂಪರ್ ಸ್ಟಾರ್ ಗಳಾಗಿರ್ತಾರೆ. ಕಳೆದ ಕೆಲ ದಿನಗಳ ಹಿಂದೆ ಮಲಯಾಳಂನ 'ಜಿಮ್ಕಿ ಕಮಾಲ್' ಹಾಡು ಮಾಡಿದ್ದ ಸದ್ದಿಗೆ ಇಡೀ ಸೋಶಿಯಲ್ ಮೀಡಿಯಾ ನಡುಗಿ ಹೋಗಿತ್ತು.

ಈ ಹಾಡಿನ ಬಳಿಕ ಅಷ್ಟೇ ಸಂಚಲನ ಸೃಷ್ಟಿಸಿದ್ದು ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಕೇವಲ ಕಣ್ಸೆನ್ನೆಯ ಮೂಲಕ ದೇಶವ್ಯಾಪಿ ಮೋಡಿ ಮಾಡಿದ್ದಾಳೆ. ರಾತ್ರೋರಾತ್ರಿ ಸನ್ನಿ ಲಿಯೋನ್ ಅಂತಹ ಜಾಗತಿಕ ಮಟ್ಟದ ನಟಿಯನ್ನ ಹಿಂದಿಕ್ಕಿದ್ದಾರೆ. ಹೀಗೆ, ಆನ್ ಲೈನ್ ನಲ್ಲಿ ಕೆಲವೇ ಗಂಟೆಗಳಲ್ಲಿ ಫೇಮಸ್ ಆದ ಕೆಲವರ ಪಟ್ಟಿ ಮಾಡಲಾಗಿದೆ. ಯಾರೆಂದು ತಿಳಿಯಲು ಮುಂದೆ ಓದಿ......

ಡಿಂಕ್ ಚಕ್ ಪೂಜಾ

ಡಿಂಕ್ ಚಕ್ ಪೂಜಾ

ಯೂಟ್ಯೂಬ್ ನಲ್ಲಿ ಡಿಂಕ್ ಚಕ್ ಪೂಜಾ ಎಂದು ಟೈಪ್ ಮಾಡಿ. ಈಕೆ ಯಾರು, ಈಕೆಯ ಪ್ರತಿಭೆ ಏನು ಎಂಬುದು ನಿಮಗೆ ಸ್ವತಃ ಕಣ್ಣಾರೆ ನೋಡಬಹುದು. ವಿಚಿತ್ರ ಹಾಡುಗಳನ್ನ ಹಾಡಿ ಯೂಟ್ಯೂಬ್ ನಲ್ಲಿ ಅಪ್ ಲೌಡ್ ಮಾಡುತ್ತಿದ್ದ, ಡಿಂಕ್ ಚಕ್ ಪೂಜಾ, ಧಿಡೀರ್ ಎಂದು ಸ್ಟಾರ್ ಆಗಿಬಿಟ್ಟಳು. ಬಾಲಿವುಡ್ ಸೆಲೆಬ್ರಿಟಿಗಳನ್ನ ಹಿಂದಿಕ್ಕಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಳು.

ಶ್ರದ್ಧಾ ಶರ್ಮಾ

ಶ್ರದ್ಧಾ ಶರ್ಮಾ

ಡಿಂಕ್ ಚಕ್ ಪೂಜಾಗೆ ವಿರುದ್ಧವಾದ ಪ್ರತಿಭೆ ಶ್ರದ್ಧಾ ಶರ್ಮಾ. ಮೂಲತಃ ಗಾಯಕಿಯಾಗಿರುವ ಶ್ರದ್ಧಾ, ಸಿನಿಮಾ ಹಾಡುಗಳನ್ನ ತಮ್ಮದೇ ವರ್ಷನ್ ನಲ್ಲಿ ಹಾಡಿ ಗಮನ ಸೆಳೆದಿದ್ದಾರೆ. ಯೂಟ್ಯೂಬ್ ನಲ್ಲಿ ಶ್ರದ್ಧಾ ಶರ್ಮಾ ಅವರ ಹಾಡುಗಳು ದೊಡ್ಡ ಮಟ್ಟದ ಯಶಸ್ಸು ಕಂಡಿವೆ. ಶ್ರದ್ಧಾ ಕೂಡ ರಾತ್ರೋರಾತ್ರಿ ಸ್ಟಾರ್ ಆದ ಗಾಯಕಿ.

ಭುವನ್ ಬಮ್

ಭುವನ್ ಬಮ್

ವಿಡಿಯೋಗಳ ಮೂಲಕ ಎಲ್ಲರ ಚಿತ್ರ ತನ್ನತ್ತ ಸೆಳೆದ ವ್ಯಕ್ತಿ ಭುವನ್ ಬಮ್. ಓರ್ವ ಅದ್ಭುತ ನಟನಾಗಿರುವ ಭುವನ್, ವಿವಿಧ ಬಗೆಯ ವಿಡಿಯೋಗಳನ್ನ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿ ಸದ್ದು ಮಾಡಿದ್ದಾನೆ. ವಿಚಿತ್ರ ನಟನೆಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಎಲ್ಲ ರೀತಿಯ, ಎಲ್ಲರ ನಟರ ರೀತಿಯ ಮಿಮಿಕ್ರಿ ಮಾಡಿ ಯೂಟ್ಯೂಬ್ ಸ್ಟಾರ್ ಆಗಿದ್ದರು.

ತಹರ್ ಶಾ

ತಹರ್ ಶಾ

ಉದ್ದನೇಯ ಕೂದಲು, ವೈಭವದ ವಸ್ತ್ರ, ಇಂಗ್ಲೀಷ್ ಹಾಡು, ಅತಿ ಕೆಟ್ಟ ದ್ವನಿ.....ಇದು ತಹಾರ್ ಶಾ ಬಗ್ಗೆ ಹೇಳಬೇಕಿರುವ ಮುಖ್ಯಾಂಶಗಳು. ತನ್ನನ್ನ ತಾನು ಏಂಜೆಲ್ ಎಂದು ಹೇಳಿಕೊಳ್ಳುವ ತಹಾರ್ ಶಾ, ವಿಚಿತ್ರ ಮನೋಭಾವದಿಂದ ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ನೀಲಿ ಕಂಗಳ ಸುಂದರ

ನೀಲಿ ಕಂಗಳ ಸುಂದರ

ಪಾಕಿಸ್ತಾನ ಮೂಲಕ ಅರ್ಶದ್ ಖಾನ್ ಅವರ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಟೀ ಮಾರುವ ಈ ವ್ಯಕ್ತಿಯ ನೀಲು ಕಣ್ಣುಗಳು ಎಲ್ಲರ ಟಾಕ್ ಆಗಿತ್ತು. ಈ ಯುವಕನ ಕಣ್ಣಿಗೆ ಅದೇಷ್ಟೋ ಹುಡುಗಿಯರು ಮರಳಾಗಿ, ಸಾಮಾಜಿಕ ಜಾಲತಾಣದಲ್ಲಿ ಹುಚ್ಚರಂತೆ ವರ್ತಿಸಿದ್ದರು.

More from Filmibeat

English summary
Like Priya Prakash Varrier, here's a look at internet sensations who grabbed the limelight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X