twitter
    For Quick Alerts
    ALLOW NOTIFICATIONS  
    For Daily Alerts

    ಆತ್ಮಹತ್ಯೆನಾ ಅಥವಾ ಕೊಲೆನಾ? ಅನುಮಾನದಲ್ಲೇ ಅಂತ್ಯವಾಯ್ತು ತಾರೆಯರ ಸಾವು

    |

    ಬಾಲಿವುಡ್ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ವಿಚಾರ ಕಳೆದ ಎರಡು ತಿಂಗಳಿಂದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೆನಿಸಿದರೂ ಇದು ಕೊಲೆ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ.

    ಕೇವಲ ಕುಟುಂಬ ಮಾತ್ರವಲ್ಲ ಇನ್ನು ಅನೇಕರು ಸುಶಾಂತ್ ಸಾವಿನ ಹಿಂದೆ ಬೇರೆ ಏನೋ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕು ಮುಂಚೆ ಬಾಲಿವುಡ್ ನಟಿ ಶ್ರೀದೇವಿ ಸಾವನ್ನಪ್ಪಿದ ಸಂದರ್ಭದಲ್ಲೂ ಇಂತಹ ಚರ್ಚೆಗಳು ಸಹಜವಾಗಿತ್ತು.

    ನಿವೇದಿತಾ ಜೈನ್: ಕಾಡುವ ಈಕೆಯ 'ಆಕಸ್ಮಿಕ ಸಾವು' ನೀವಂದುಕೊಂಡಂತೆ ನಡೆದಿರಲಿಲ್ಲ...!ನಿವೇದಿತಾ ಜೈನ್: ಕಾಡುವ ಈಕೆಯ 'ಆಕಸ್ಮಿಕ ಸಾವು' ನೀವಂದುಕೊಂಡಂತೆ ನಡೆದಿರಲಿಲ್ಲ...!

    ದುಬೈ ಪೊಲೀಸರು ಶ್ರೀದೇವಿ ಅವರದ್ದು ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡರೂ ಸಹ, ಅದು ಕೊಲೆ ಎಂದು ಅನೇಕರು ವಾದ ಮಾಡಿದರು. ಹೀಗೆ, ಅನುಮಾನಸ್ಪಾದವಾಗಿ ಮೃತಪಟ್ಟ ತಾರೆಯರ ಸಾವು ಆತ್ಮಹತ್ಯೆನೋ ಅಥವಾ ಕೊಲೆನೋ ಎಂಬ ಗೊಂದಲದಲ್ಲೇ ಅಂತ್ಯವಾಗಿರುವ ಕೆಲವು ಘಟನೆಗಳನ್ನು ಇಲ್ಲಿ ಸ್ಮರಿಸೋಣ. ಮುಂದೆ ಓದಿ...

    ಬಾತ್‌ಟಾಬ್‌ನಲ್ಲಿ ಶ್ರೀದೇವಿ ಸಾವು

    ಬಾತ್‌ಟಾಬ್‌ನಲ್ಲಿ ಶ್ರೀದೇವಿ ಸಾವು

    ಸಂಬಂಧಿಕರೊಬ್ಬರ ಮದುವೆಗಾಗಿ ದುಬೈಗೆ ಹೋಗಿದ್ದ ಶ್ರೀದೇವಿ ಹೋಟೆಲ್‌ ರೂಂನಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದರು. ಬಾತ್‌ಟಾಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ, ಇದು ಸಹಜವ ಸಾವು ಎಂದು ದುಬೈ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಆದರೆ, ಇದು ಸಹಜ ಸಾವಲ್ಲ, ಇದು ಕೊಲೆ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದರು. ಪೂರ್ವ ನಿಯೋಜಿತವಾಗಿ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು. ಆದರೆ, ಶ್ರೀದೇವಿ ಅವರದ್ದು ಸಹಜ ಸಾವು ಎಂದು ಕೇಸ್ ಕ್ಲೋಸ್ ಆಗಿದೆ. ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐಗೆ ನೀಡಿದ ನಂತರ ಶ್ರೀದೇವಿ ಸಾವನ್ನು ಸಿಬಿಐಗೆ ವಹಿಸಿ ಎಂಬ ಒತ್ತಾಯವೂ ಕೇಳಿ ಬರುತ್ತಿದೆ.

    ನಿವೇದಿತಾ ಜೈನ್ ಸಾವು

    ನಿವೇದಿತಾ ಜೈನ್ ಸಾವು

    ಕನ್ನಡ ನಟಿ ನಿವೇದಿತಾ ಜೈನ್ ಅವರ ಸಾವು ಸಹ ಅನುಮಾನ ಮೂಡಿಸಿತ್ತು. 19ರ ಹರೆಯದ ನಟಿ ಇಂಡಸ್ಟ್ರಿಯಲ್ಲಿ ಶಾಶ್ವತವಾಗಿ ನೆಲೆಸುವ ಸುಳಿವು ನೀಡಿದ್ದರು. ಆದರೆ, (17 ಮೇ 1998) ಅದೊಂದು ದಿನ ರಾತ್ರಿ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟರು. ಕ್ಯಾಟ್‌ವಾಕ್ ಅಭ್ಯಾಸ ಮಾಡುವ ವೇಳೆ ಕಾಲು ಜಾರಿ ಮಹಡಿಯಿಂದ ಕೆಳಗೆ ಬಿದ್ದಳು ಎಂದು ಆಕೆಯ ಕುಟುಂಬದವರು ಹೇಳಿಕೆ ನೀಡಿದ್ದರು. ಕುಟುಂಬದವರ ಹೇಳಿಕೆಗಳಿಂದ ಅನುಮಾನವೂ ವ್ಯಕ್ತವಾಗಿತ್ತು. ಆಕಸ್ಮಿಕ ಸಾವು ಎಂದು ಎನಿಸಿದ್ದರೂ, ಸಾವಿನ ಬಗೆಗಿನ ಅನುಮಾನ ಮಾತ್ರ ಹೋಗಲೇ ಇಲ್ಲ.

    ಸುಶಾಂತ್ ಪ್ರಕರಣದ ತನಿಖೆ ಮಧ್ಯೆ ನಟಿ ಶ್ರೀದೇವಿ ಸಾವಿನ ಬಗ್ಗೆ CBI ತನಿಖೆಗೆ ನೆಟ್ಟಿಗರ ಒತ್ತಾಯಸುಶಾಂತ್ ಪ್ರಕರಣದ ತನಿಖೆ ಮಧ್ಯೆ ನಟಿ ಶ್ರೀದೇವಿ ಸಾವಿನ ಬಗ್ಗೆ CBI ತನಿಖೆಗೆ ನೆಟ್ಟಿಗರ ಒತ್ತಾಯ

    'ಸಿಲ್ಕ್ ಸ್ಮಿತಾ ಸಾವು ಆತ್ಮಹತ್ಯೆಯಲ್ಲ'

    'ಸಿಲ್ಕ್ ಸ್ಮಿತಾ ಸಾವು ಆತ್ಮಹತ್ಯೆಯಲ್ಲ'

    80-90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸಿದ್ದ ಸಿಲ್ಕ್ ಸ್ಮಿತಾ ಸಾವು ಕೂಡ ಅನುಮಾನದಿಂದಲೇ ಅಂತ್ಯವಾಗಿದೆ. 1996ರ ಸೆಪ್ಟೆಂಬರ್ 23ರಲ್ಲಿ ಚೆನ್ನೈನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡರೂ, ಇದು ಕೊಲೆ ಎಂದು ಹಲವು ಪ್ರತಿಪಾದಿಸಿದರು. ಈಗಲೂ ಸಿಲ್ಕ್ ಸ್ಮಿತಾ ಸಾವು ಅನುಮಾನದಲ್ಲೇ ಉಳಿದಿದೆ.

    ಬಾಲಿವುಡ್ ನಟಿ ದಿವ್ಯಾ ಭಾರತಿ

    ಬಾಲಿವುಡ್ ನಟಿ ದಿವ್ಯಾ ಭಾರತಿ

    ಹಿಂದಿ ಚಿತ್ರರಂಗದಲ್ಲಿ ಬಹಳ ಬೇಗ ಖ್ಯಾತಿ ಗಳಿಸಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ ನಟಿಯರ ಪೈಕಿ ದಿವ್ಯಾ ಭಾರತಿ ಸಹ ಒಬ್ಬರು. 1993ರಲ್ಲಿ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಇದು ಸಹಜ ಸಾವು, ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದಳು ಎಂದು ಕೇಸ್ ದಾಖಲಾಗಿದೆ. ಆದರೆ, ಇದು ಸಹಜ ಸಾವಲ್ಲ, ಪೂರ್ವ ನಿಯೋಜಿತ ಕೊಲೆ ಎಂದು ಅನೇಕರು ದೂರಿದರು. ಅಂತಿಮವಾಗಿ 1998ರಲ್ಲಿ ಇದು ಆಕಸ್ಮಿಕ ಸಾವು ಎಂದು ಮುಂಬೈ ಪೊಲೀಸರು ಪ್ರಕರಣಕ್ಕೆ ಅಂತ್ಯವಾಡಿದರು.

    'ಸಿಲ್ಕ್ ಸ್ಮಿತಾ ಸತ್ತಿದ್ದು ಆತ್ಮಹತ್ಯೆಯಿಂದಲ್ಲ'

    ಜಿಯಾ ಖಾನ್ ಕೇಸ್

    ಜಿಯಾ ಖಾನ್ ಕೇಸ್

    25 ವರ್ಷದ ಜಿಯಾ ಖಾನ್ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಈ ಸಾವಿನ ವಿರುದ್ಧ ಅನೇಕ ಪ್ರಶ್ನೆಗಳು ಎದ್ದಿದ್ದವು. ಇದು ಪೂರ್ವನಿಯೋಜಿತ ಕೊಲೆ ಎಂದು ಕುಟುಂಬಸ್ಥರು ದೂರಿದರು. ಜಿಯಾ ಖಾನ್ ಡೆತ್ ನೋಟ್ ಆಧರಿಸಿ ಬಾಯ್ ಫ್ರೆಂಡ್ ಸೂರಜ್ ಪಾಂಚಲಿಯನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣವನ್ನು ಸಹ ಸಿಬಿಐಗೆ ನೀಡಬೇಕು ಎಂದು ಜಿಯಾ ಖಾನ್ ತಾಯಿ ಒತ್ತಾಯಿಸಿದ್ದರು.

    English summary
    There are many film actors who shocked the entire nations with their deaths. here is the top Five Mysterious Deaths of indian Cinema.
    Wednesday, August 12, 2020, 15:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X