For Quick Alerts
ALLOW NOTIFICATIONS  
For Daily Alerts

ಬೆಳ್ಳಿತೆರೆ ಶೇಕ್ ಮಾಡುತ್ತಿರುವ ಫಾರಿನ್ ಶೃಂಗಾರ ತಾರೆಗಳು

By ರವಿಕಿಶೋರ್
|

ಜಾಗತೀಕರಣದ ಈ ಕಾಲಘಟ್ಟದಲ್ಲಿ ಯಾರು ಯಾವ ದೇಶಕ್ಕೆ ಬೇಕಾದರೂ ಹಾರಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದು ಬಲು ಸುಲಭ ಸಾಧ್ಯವಾಗಿದೆ. ಸಿನಿಮಾ ಕ್ಷೇತ್ರಕ್ಕೂ ಈ ಮಾತು ಒಪ್ಪುತ್ತದೆ. ಭಾರತೀಯ ತಾರೆಗಳು ಹಾಲಿವುಡ್ ಕಡೆಗೆ ವಲಸೆ ಹೋಗುತ್ತಿದ್ದರೆ ವಿದೇಶಿ ತಾರೆಗಳು ಇಲ್ಲಿಗೆ ಆಮದಾಗುತ್ತಿದ್ದಾರೆ.

ಸದ್ಯಕ್ಕೆ ಬಾಲಿವುಡ್ ನಲ್ಲಿ ಚಲಾವಣೆಯಲ್ಲಿರುವ ಕತ್ರಿನಾ ಕೈಫ್, ಜಾಕ್ವೆಲಿನ್ ಫರ್ನಾಂಡೀಸ್ ನಂತಹ ತಾರೆಗಳ ಪ್ರತಿಭೆಗೆ, ಅಂದಚೆಂದಕ್ಕೆ ಇಲ್ಲಿ ರತ್ನಗಂಬಳಿ ಹಾಸಿ ಅವಕಾಶ ನೀಡಲಾಗುತ್ತಿದೆ. ಆದರೆ ಆಮದಾದ ಎಲ್ಲ ತಾರೆಗಳಿಗೆ ಈ ಅದೃಷ್ಟಭಾಗ್ಯವಿಲ್ಲ. ಕೆಲವರಷ್ಟೇ ಲಕ್ಕಿ ತಾರೆಗಳು.

ಅಂತಹ ತಾರೆಗಳಲ್ಲಿ ತುಂಬಾ ಅದೃಷ್ಟವಂತೆ ಎಂದರೆ ಕತ್ರಿನಾ ಕೈಫ್. ದಂತದಗೊಂಬೆಯನ್ನೇ ಎರಕ ಹೊಯ್ದಂತಿದ್ದ ಕತ್ರಿನಾ ಆರಂಭದಲ್ಲಿ ಡಾನ್ಸ್, ರೊಮ್ಯಾನ್ಸ್, ಆಕ್ಟಿಂಗ್ ನಲ್ಲಿ ಬಹಳ ವೀಕ್ ಆಗಿದ್ದರು ಎಂಬ ವಿಮರ್ಶೆಗಳಿಗೂ ಗುರಿಯಾದವರು. ಆ ಬಳಿಕ ತಮ್ಮ ಪ್ರತಿಭೆಯನ್ನು ನಿರೂಪಿಸಿಕೊಂಡು ಬಾಲಿವುಡ್ ನಲ್ಲಿ ನಂಬರ್ 1 ತಾರೆ ಎನ್ನಿಸಿಕೊಂಡರು.

ಶ್ರೀಲಂಕಾ ಅಪೂರ್ವ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಸಹ ಈಗೀಗ ನೆಲೆಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಬಹಳಷ್ಟು ಆಮದು ಬೆಡಗಿಯರನ್ನು ಐಟಂ ಆಟಕ್ಕಷ್ಟೇ ಸೀಮಿತವಾಗುತ್ತಿದ್ದಾರೆ. ಹಾಗೆ ಬಂದು ಹೀಗೆ ಸೊಂಟ ಬಳುಕಿಸಿ ಮಾಯಾಲೋಕದ ಅಪ್ಸರೆಯರಂತೆ ಮಾಯವಾದವರೇ ಹೆಚ್ಚು.

ನಂಬರ್ ಒನ್ ಸ್ಥಾನದಲ್ಲಿರುವ ಕತ್ರಿನಾ ಕೈಫ್

ನಂಬರ್ ಒನ್ ಸ್ಥಾನದಲ್ಲಿರುವ ಕತ್ರಿನಾ ಕೈಫ್

ಕತ್ರಿನಾ ಕೈಫ್ ಭಾರತೀಯ ಸಂತತಿಗೆ ಸೇರಿದ ಬ್ರಿಟೀಷ್ ಬೆಡಗಿ. ಸದ್ಯಕ್ಕೆ ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್. ರಣಬೀರ್ ಕಪೂರ್ ಜೊತೆಗೆ ಸಹಜೀವನ ನಡೆಸುತ್ತಿದ್ದು ಶೀಘ್ರದಲ್ಲೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ.

ಜಾಕ್ವೆಲಿನ್ ಲುಕ್ಕನ್ನೇ ಬದಲಾಯಿಸಿದ ಕಿಕ್

ಜಾಕ್ವೆಲಿನ್ ಲುಕ್ಕನ್ನೇ ಬದಲಾಯಿಸಿದ ಕಿಕ್

2006ರಲ್ಲಿ ಮಿಸ್ ಶ್ರೀಲಂಕಾ ಯೂನಿವರ್ಸ್ ಸೌಂದರ್ಯ ಕಿರೀಟವನ್ನು ಮುಡಿಗೇರಿಸಿಕೊಂಡ ಜಾಕ್ವೆಲಿನ್ ಅವಕಾಶಕ್ಕಾಗಿ ಬಾಲಿವುಡ್ ಬಾಗಿಲು ತಟ್ಟಿದರು. 2009ರಲ್ಲಿ ಸುಭಾಷ್ ಘಾಯ್ ಅವರು 'ಅಲಾದೀನ್' ಚಿತ್ರದ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದರು. ಸಲ್ಮಾನ್ ಜೊತೆಗಿನ 'ಕಿಕ್' ಚಿತ್ರ ಅವರ ಲಕ್ಕನೇ ಬದಲಾಯಿಸಿತು.

ಬಾಲಿವುಡ್ ರಾಕಿಂಗ್ ನಟಿ ನರ್ಗೀಸ್ ಫಕ್ರಿ

ಬಾಲಿವುಡ್ ರಾಕಿಂಗ್ ನಟಿ ನರ್ಗೀಸ್ ಫಕ್ರಿ

ನರ್ಗೀಸ್ ಫಕ್ರಿ ಪಾಕಿಸ್ತಾನ ಸಂತತಿಗೆ ಸೇರಿದ ಅಮೆರಿಕನ್ ನಟಿ. ರಣಬೀರ್ ಕಪೂರ್ ಜೊತೆ 'ರಾಕ್ ಸ್ಟಾರ್' ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ. ಸದ್ಯಕ್ಕೆ ಬಾಲಿವುಡ್ ನ ವಿವಿಧ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ತನ್ನ ಅಂದಚೆಂದ ಮೂಲಕ ಪ್ರೇಕ್ಷಕರ ಬಾಯಿಗೆ ಬೀಗ ಹಾಕುತ್ತಿರುವ ತಾರೆ.

ಬಾಲಿವುಡ್ ನಲ್ಲಿ ಗಾಳಿಪಟ ಹಾರಿಸಿದ ಚೆಲುವೆ

ಬಾಲಿವುಡ್ ನಲ್ಲಿ ಗಾಳಿಪಟ ಹಾರಿಸಿದ ಚೆಲುವೆ

ಹೃತಿಕ್ ರೋಷನ್ ಜೊತೆಗಿನ ಕೈಟ್ಸ್ ಚಿತ್ರದ ಮೂಲಕ ಮೆಕ್ಸಿಕನ್ ಚೆಲುವೆ ಬಾರ್ಬರಾ ಮೋರಿ ಗಾಳಿಪಟದಂತೆ ಹಾರಾಡಿದ್ದರು. ಈ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಸಖತ್ ಆಗಿ ವರ್ಕ್ ಔಟ್ ಆಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್ ಪಡಸಾಲೆಯಲ್ಲಿ ಉದ್ದಂಡ ಮಲಗಿತು.

ಬಾಬೂಜಿ ಜರ ಧೀರೇ ಚಲೋ

ಬಾಬೂಜಿ ಜರ ಧೀರೇ ಚಲೋ

ಜೆಕೋಸ್ಲೋವಾಕಿಯಾ ಮೂಲದವರು ಯಾನಾ ಗುಪ್ತ. ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಬೂಜಿ ಜರ ಧೀರೇ ಚಲೋ ಎಂಬ ಐಟಂ ಹಾಡಿನ ಮೂಲಕ ಪಡ್ಡೆಗ ಹೃದಯದಲ್ಲಿ ರಂಗವಲ್ಲಿ ಹಾಕಿದ ಬೆಡಗಿ.

'ರತಿಮನ್ಮಥ' ಚಿತ್ರಗಳ ತಾರೆ ಸನ್ನಿ ಲಿಯೋನ್

'ರತಿಮನ್ಮಥ' ಚಿತ್ರಗಳ ತಾರೆ ಸನ್ನಿ ಲಿಯೋನ್

ಭಾರತ ಸಂತತಿಗೆ ಸೇರಿದ ಕೆನಡಿಯನ್ ಮೂಲದ 'ರತಿಮನ್ಮಥ' ಚಿತ್ರಗಳ ತಾರೆ ಸನ್ನಿ ಲಿಯೋನ್. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನರಂಜನಾ ಮಾಧ್ಯಮಕ್ಕೆ ಅಡಿಯಿಟ್ಟವರು. ಜಿಸ್ಮ್ 2 ಚಿತ್ರದ ಮೂಲಕ ಬೆಳ್ಳಿಪರದೆಗೆ ಪ್ರವೇಶಿಸಿ ಸದ್ಯಕ್ಕೆ ಬಾಲಿವುಡ್ ನ ಬಿಜಿ ತಾರೆಗಳಲ್ಲಿ ಒಬ್ಬರು.

ಬ್ರಿಟಿಷ್ ಮೂಲದ ಅಮಿ ಜಾಕ್ಸನ್

ಬ್ರಿಟಿಷ್ ಮೂಲದ ಅಮಿ ಜಾಕ್ಸನ್

ಬ್ರಿಟಿಷ್ ಮೂಲದ ಅಮಿ ಜಾಕ್ಸನ್ ಬಣ್ಣ ಹಚ್ಚಿದ್ದೇ 'ಮದ್ರಾಸಿ ಪಟ್ಟಣಂ' ಎಂಬ ತಮಿಳು ಚಿತ್ರದ ಮೂಲಕ. ಬಾಲಿವುಡ್ ನ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದರೂ ಶಂಕರ್ ನಿರ್ದೇಶನದ 'ಐ' ಚಿತ್ರ ಅವರ ವೃತ್ತಿಜೀವನದಲ್ಲಿ ಮರೆಯದ ಮಾಣಿಕ್ಯವಿದ್ದಂತೆ.

ಐಟಂ ಗರ್ಲ್ ಆಗಿ ಗುರುತಿಸಿಕೊಂಡ ಬ್ರೂನಾ

ಐಟಂ ಗರ್ಲ್ ಆಗಿ ಗುರುತಿಸಿಕೊಂಡ ಬ್ರೂನಾ

ಭಾರತೀಯ ಬೆಳ್ಳಿಪರದೆಯನ್ನು ಹೀಟೆಬ್ಬಿಸುತ್ತಿರುವ ಆಮದು ತಾರೆಗಳಲ್ಲಿ ಬ್ರೂನಾ ಅಬ್ದುಲ್ಲಾ ಸಹ ಒಬ್ಬರು. ಬ್ರೆಜಿಲ್ ಮೂಲದ ಈ ಬೆಡಗಿ ಐಟಂ ಗರ್ಲ್ ಆಗಿ ಗುರುತಿಸಿಕೊಂಡಿದ್ದಾರೆ.

English summary
Bollywood is well known across the world for its charm,glamor and Stardom, which attracts many of the foreign actress to Indian Cinem Industry. Some of them are making her foot via the item songs such as the best Helen from Burma, Jacqueline Fernandez from Sri Lanka in Housefull, Scarlett Wilson from Britain in Shanghai and the latest Claudia Ciesla from Germany in khiladi 786. These foreign actress are somehow well accepted by the Indian friends and followers, hopefully it will not let forget the beautiful Indian beauties.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more