ಹೋಟೆಲ್‌ನಲ್ಲಿ ಹೈಟೆಕ್ ದಂಧೆ, ಪೊಲೀಸರ ಮಿಂಚಿನ ಕಾರ್ಯಾಚರಣೆ ; ಖ್ಯಾತ ನಟಿಯನ್ನು ರಕ್ಷಿಸಿದ ಖಾಕಿ ಪಡೆ, ಕಿಂಗ್‌ಪಿನ್ ಬಂಧನ

ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಈ ಕಡೆ ಬರುತ್ತಾರೆ. ಕೆಲವರು ಗೆಲ್ಲುತ್ತಾರೆ. ಕೆಲವರು ಸೋಲುತ್ತಾರೆ. ಆದರೆ ಈ ಸೋಲು ಗೆಲುವಿನ ಆಚೆ ಹೊರಗಡೆಯಿಂದ ಜಗಮಗಿಸುವ ಈ ಲೋಕದಲ್ಲಿ ಬದುಕು ರೂಪಿಸಿಕೊಳ್ಳುವುದು ತುಂಬಾನೇ ಕಷ್ಟ.

ಸಾಧನೆಯ ಶಿಖರಕ್ಕೇರಲೇಬೇಕೆಂಬ ಶಪಥ ಮಾಡಿ ಹಗಲಿರುಳು ಪ್ರಯತ್ನ ಮಾಡಿದರೂ ಕೂಡ ಕೆಲ ಒಮ್ಮೆ ಈ ಪ್ರಯಾಣದಲ್ಲಿ ಅಗ್ನಿ ಪರೀಕ್ಷೆಗಳು ಎದುರಾಗುತ್ತಾವೆ. ಅದಲ್ಲಿಯೂ ಹೆಣ್ಣು ಮಕ್ಕಳಿಗೆ ಚಿತ್ರರಂಗದ ಪ್ರಯಾಣ ಕಲ್ಲು ಮುಳ್ಳಿನ ಹಾದಿ. ಯಾಕೆಂದರೆ ಕಣ್ಸೆಳೆಯುವ ಈ ಬೆಳಕಿನ ಹಿಂದೆ ಹಲವರ ಕನಸನ್ನು ಹೊಸಕಿ ಹಾಕುವ ಕತ್ತಲೆಯ ಜಗತ್ತು ಕೂಡ ಇದೆ. ಚಿತ್ರರಂಗದ ಭಾಷೆಯಲ್ಲಿ ಈ ಜಗತ್ತನ್ನು ಕಾಸ್ಟಿಂಗ್ ಕೌಚ್ ಎಂದು ಕರೆಯುತ್ತಾರೆ.

Top Marathi Actress Rescued as Mumbai Police Smash Luxury Hotel Prostitution Racket

ಅಮಾಯಕ ಮುಗ್ದ ಹೆಣ್ಣು ಮಕ್ಕಳನ್ನು ಇಲ್ಲಿ ತಮ್ಮ ಖೆಡ್ಡಾಗೆ ಬೀಳಿಸಿಕೊಳ್ಳಲು ಹಲವರು ಪ್ರಯತ್ನ ಮಾಡುತ್ತಾರೆ. ಅವಕಾಶದ ಜೊತೆ ಹೆಚ್ಚಿನ ಹಣ ಕೂಡ ಸಂಪಾದಿಸಬಹುದು ಎಂದು ಬ್ರೈನ್ ವಾಶ್ ಮಾಡಿ ಕೆಲ ಒಮ್ಮೆ ವೇಶ್ಯಾವಾಟಿಕೆ ಅಂತಹ ಕತ್ತಲ ಕೂಪಕ್ಕೆ ತಳ್ಳುತ್ತಾರೆ. ಇದಕ್ಕೆ ಮುಂಬೈನಲ್ಲಿ ಪೊಲೀಸರು ಭೇದಿಸಿದ ಹೈಪ್ರೊಫೈಲ್ ವೈಶ್ಯಾವಾಟಿಕೆ ಜಾಲ ಸದ್ಯದ ಸಾಕ್ಷಿ.

ಹೌದು, ಮುಂಬೈನ್ ಗಿರ್ಗಾಂವ್ ಪ್ರದೇಶದಲ್ಲಿ ಹೈಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಗಿರ್ಗಾಂವ್‌ನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಹೈಟೆಕ್ ದಂಧೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಮುಂಬೈ ತನಿಖಾ ಪೊಲೀಸರ ವಿಶೇಷ ಪಡೆ ದಾಳಿಯನ್ನು ಮಾಡಿದ್ದು ಈ ದಾಳಿಯಲ್ಲಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇಬ್ಬರು ಖ್ಯಾತ ನಟಿಯರನ್ನು ರಕ್ಷಿಸಲಾಗಿದೆ.

ಹೀಗೆ ರಕ್ಷಿಸಲಾದ ಇಬ್ಬರಲ್ಲಿ ಒಬ್ಬರು ಮರಾಠಿ ಚಿತ್ರರಂಗದ ಖ್ಯಾತ ಮತ್ತು ಬಹುಬೇಡಿಕೆಯ ನಟಿ ಎನ್ನುವುದು ದುರಂತ. ಮತ್ತೊಬ್ಬರು ಹಿಂದಿ ಮತ್ತು ಬೆಂಗಾಲಿ ಭಾಷೆಯಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತಾ ಹೆಸರು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌ನ ಕರಾಳ ಮುಖ ಬಯಲು

ಇನ್ನು ಈ ದಾಳಿಯ ಸಮಯದಲ್ಲಿ ಚಿತ್ರರಂಗದಲ್ಲಿ ಹಲವಾರು ಸೆಲೆಬ್ರಿಟಿಗಳ ಜೊತೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದವನನ್ನು ಬಂಧಿಸಲಾಗಿದೆ. ಈ ವ್ಯಕ್ತಿಯೇ ಈ ದಂಧೆಯ ಹಿಂದಿನ ಕಿಂಗ್‌ಪಿನ್. ಚಿತ್ರದ ಚಿತ್ರೀಕರಣದ ಸ್ಥಳದಲ್ಲಿ.. ಸ್ಟುಡಿಯೋಗಳಲ್ಲಿ.. ಕೆಲಸದ ನೆಪದಲ್ಲಿ ನಟಿಯರಿಗೆ ಹತ್ತಿರವಾಗುತ್ತಿದ್ದ ಈತ ತನ್ನ ಸಂಪರ್ಕಗಳ ದುರ್ಬಳಕೆ ಮಾಡಿಕೊಂಡು ಮುಗ್ದ ನಟಿಯರನ್ನು ಕಾನೂನು ಬಾಹಿರ ಚಟುವಟಿಕೆಗಳ ಕಡೆಗೆ ಪ್ರಚೋದಿಸುತ್ತಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಚಿತ್ರರಂಗದ ಹೆಸರಾಂತ ಸೆಲೆಬ್ರಿಟಿಗಳೊಂದಿಗೆ ಸಂಪರ್ಕ ಕಲ್ಪಿಸಿಕೊಡುವ ಹಾಗೂ ಹೊಸ ಪ್ರಾಜೆಕ್ಟ್‌ಗಳಲ್ಲಿ ದೊಡ್ಡ ಪಾತ್ರಗಳನ್ನು ಕೊಡಿಸುವ ಸುಳ್ಳು ಭರವಸೆಗಳನ್ನು ನೀಡಿ ನಟಿಯರನ್ನು ಈ ವ್ಯಕ್ತಿ ವಂಚಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದು ಈ ಮೇಕಪ್ ಆರ್ಟಿಸ್ಟ್ ಕೇವಲ ಕಲಾವಿದರಿಗೆ ಮಾತ್ರವಲ್ಲದೆ ಉದ್ಯಮದ ಪ್ರಮುಖ ಹೂಡಿಕೆದಾರರು ಮತ್ತು ನಿರ್ಮಾಪಕರಿಗೂ ಕೂಡ ಹತ್ತಿರವಾಗಿದ್ದ ಎಂದು ಹೇಳಿದ್ದಾರೆ.

ಸದ್ಯ ಆರೋಪಿಯ ಬಳಿ ಇದ್ದ ಮೊಬೈಲ್ ಕರೆಗಳ ಪಟ್ಟಿ, ಬ್ಯಾಂಕ್ ಬ್ಯಾಲೆನ್ಸ್ ಸ್ಟೇಟ್‌ಮೆಂಟ್‌ಗಳು ಮತ್ತು ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಇನ್ನೂ ಹಲವು ದೊಡ್ಡ ಹೆಸರುಗಳು ಹೊರಬರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕುವಂತಿಲ್ಲ. ಬಂಧಿತ ಮೇಕಪ್ ಆರ್ಟಿಸ್ಟ್ ವಿರುದ್ಧ ಮುಂಬೈ ಪೊಲೀಸರು ಅನೈತಿಕ ಸಂಚಾರ ತಡೆ ಕಾಯ್ದೆ (ITPA) ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಒಟ್ನಲ್ಲಿ ಹೆಣ್ಣುಮಕ್ಕಳ ಅಸಹಾಯಕತೆ ಮತ್ತು ದೂರದಿಂದ ಕಾಣಿಸುವ ಚಿತ್ರರಂಗದ ಹೊಳಪನ್ನೇ ಬಂಡವಾಳ ಮಾಡಿಕೊಳ್ಳುವ ಇಂತಹ ಕಿರಾತಕರಿಗೆ ನ್ಯಾಯಾಂಗ ವ್ಯವಸ್ಥೆಯು ಕಠಿಣ ಮತ್ತು ಮಾದರಿ ಶಿಕ್ಷೆಯನ್ನು ವಿಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಗ್ಲಾಮರ್ ಲೋಕದ ಹಿಂದೆ ಇಂತಹ ದಂಧೆಗಳು ಹೇಗೆ ಬೇರು ಬಿಟ್ಟಿವೆ ಎನ್ನುವುದಕ್ಕೂ ಈ ಘಟನೆ ತಾಜಾ ಉದಾಹರಣೆಯಂತಿದೆ.

English summary
In a swift operation, Mumbai Police busted an alleged hotel prostitution ring, rescuing a popular Marathi lead actress. The prime suspect has been arrested.
Read more about: prostitution racket actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X