ಬಿಪಾಶಾ ಬಸು ಬಳಿ 'ಫ್ಲರ್ಟ್' ಮಾಡಿ ಉಗಿಸಿಕೊಂಡಿದ್ದ ಹಿರಿಯ ನಿರ್ಮಾಪಕ!
ಬಾಲಿವುಡ್‌ನ ಮಾದಕ ನಟಿ ಬಿಪಾಶಾ ಬಸು ಸಖತ್ ನೇರ ಮತ್ತು ದಿಟ್ಟ ಮಹಿಳೆ. ಚಿತ್ರರಂಗಕ್ಕೆ ಬಂದಾಗಿಂದಲೂ ಬಹುತೇಕ ಹಾಟ್ ಆಂಡ್ ಬೋಲ್ಡ್ ಪಾತ್ರಗಳಲ್ಲೇ ನಟಿಸುತ್ತಾ ಬಂದಿರುವ ಬಿಪಾಶಾ ಗೆ ಈಗಲೂ ಅವಕಾಶಕ್ಕೇನೂ ಕಡಿಮೆ ಇಲ್ಲ.
Recommended Video
ವಿಶ್ವದಾದ್ಯಂತ ನಡೆದ ಮೀಟೂ ಚಳವಳಿ ಬಾಲಿವುಡ್‌ನಲ್ಲೂ ಸಂಚಲನ ಸೃಷ್ಟಿಸಿತು. ಹಲವು ಖ್ಯಾತನಾಮರ ನಿಜಬಣ್ಣ ಬಯಲಾಯಿತು. ಆಗೆಲ್ಲಾ ಬಹುತೇಕ ಮೌನವಾಗಿಯೇ ಇದ್ದ ಬಿಪಾಶಾ ಇದೀಗ ತಮ್ಮೊಂದಿಗೆ ನಡೆದಿದ್ದ ಸಣ್ಣ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಬಿಪಾಶಾ ಬಸು ಅವರ ಬಳಿ ಖ್ಯಾತ ನಿರ್ಮಾಪಕರೊಬ್ಬರು ಫ್ಲರ್ಟ್ ಮಾಡಲು ಯತ್ನಿಸಿದ್ದರಂತೆ. ಆಗಿನ್ನು ಹೊಸದಾಗಿ ಚಿತ್ರರಂಗಕ್ಕೆ ಬಂದಿದ್ದ ಬಿಪಾಶಾ ಅದನ್ನು ಚೆನ್ನಾಗಿಯೇ ನಿಭಾಯಿಸಿ ನಿರ್ಮಾಪಕರಿಗೆ ತಕ್ಕ ಪಾಠ ಕಲಿಸಿದ್ದರಂತೆ.

'ನಿನ್ನ ನಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ'
ನಿರ್ಮಾಪಕರೊಬ್ಬರನ್ನು ಭೇಟಿ ಆಗಿದ್ದ ಬಿಪಾಶಾ ಬಸು, ಸಿನಿಮಾವೊಂದಕ್ಕೆ ಸಹಿ ಮಾಡಿ ಹಣ ಪಡೆದು ಬಂದರಂತೆ. ಮನೆಗೆ ತಲುಪುತ್ತಲೇ ಮೊಬೈಲ್‌ಗೆ ಸಂದೇಶ ಕಳುಹಿಸಿದ ಆ ನಿರ್ಮಾಪಕ, 'ನಿನ್ನ ನಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದಿದ್ದರಂತೆ.

ಪದೇ ಪದೇ ನಿರ್ಮಾಪಕನಿಂದ ಸಂದೇಶ
ಸಂದೇಶ ನೋಡಿ ಗಾಬರಿಯಾದ ಬಿಪಾಶಾ ತಮ್ಮ ಆಪ್ತಕಾರ್ಯದರ್ಶಿ ಬಳಿ ಈ ವಿಷಯ ಚರ್ಚಿಸಿ ಸುಮ್ಮನಾಗಿದ್ದರಂತೆ. ಕೆಲವು ದಿನಗಳ ನಂತರ ಅದೇ ನಿರ್ಮಾಪಕ ಮತ್ತೆ ಅದೇ ರೀತಿ ಮೆಸೇಜ್ ಮಾಡಿದರಂತೆ. ಈಗ ಬಿಪಾಶಾ ಇನ್ನಷ್ಟು ಗಾಬರಿಯಾದರಂತೆ.

ಬೈದು ಸಂದೇಶ ಕಳುಹಿಸಿದ ಬಿಪಾಶಾ
ಬಿಪಾಶಾ ತಮ್ಮ ಗೆಳೆಯರೊಬ್ಬರಿಗೆ ನಿರ್ಮಾಪಕ ಮಾಡಿದ್ದರ ಬಗ್ಗೆ ಬೈದು ಸಂದೇಶ ಕಳುಹಿಸುತ್ತಿದ್ದರಂತೆ. ಅದೇ ಸಂದೇಶ ತಪ್ಪಿ ಆ ನಿರ್ಮಾಪಕರಿಗೂ ಕಳುಹಿಸಿಬಿಟ್ಟರಂತೆ. ಆ ನಂತರ ಆ ನಿರ್ಮಾಪಕ ಬಿಪಾಶಾಗೆ ಸಂದೇಶ ಕಳುಹಿಸುವುದನ್ನು ಬಿಟ್ಟುಬಿಟ್ಟರಂತೆ.

ಬಿಪಾಶಾ ಬಳಿ ಹಣ ಹಿಂಪಡೆಯಲಿಲ್ಲ ನಿರ್ಮಾಪಕ
ನಿರ್ಮಾಪಕರಿಂದ ಹಣವನ್ನು ತಮ್ಮ ಆತ್ಮಕಾರ್ಯದರ್ಶಿ ಬಳಿ ಕೊಟ್ಟು ಹಿಂದಿರಿಗಿಸಲು ಹೇಳಿ ಕಳುಹಿಸಿದ್ದರಂತೆ ಬಿಪಾಶಾ. ಆದರೆ ಆ ನಿರ್ಮಾಪಕ ಹಣವನ್ನು ಪಡೆದುಕೊಳ್ಳದೆ ವಾಪಸ್ ಕಳುಹಿಸಿದರಂತೆ. ನಂತರ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಮುಖಾ-ಮುಖಿ ಆದಾಗ ಆ ನಿರ್ಮಾಪಕ ತೆಪ್ಪಗೆ ದೂರ ಸರಿದು ನಿಂತುಬಿಟ್ಟರಂತೆ.


Click it and Unblock the Notifications











