ಮುಂಬೈನಲ್ಲಿ ಮತ್ತೆ ಯಶ್ ಕಟೌಟ್; 100 ಅಡಿ 'KGF' ಕಟೌಟ್‌ಗಿಂತ ಇದು ಯಾಕೆ ಸ್ಪೆಷಲ್?

ರಾಕಿಭಾಯ್ ಆಗಿ ಬರೀ ಸ್ಯಾಂಡಲ್‌ವುಡ್ ಅಥವಾ ಪ್ಯಾನ್ ಇಂಡಿಯಾ ಅಲ್ಲ. ವಿಶ್ವಾದಾದ್ಯಂತ ಕ್ರೇಜ್ ಸೃಷ್ಟಿಸಿಕೊಂಡವರು ಯಶ್. ಸದ್ಯ 'ಟಾಕ್ಸಿಕ್' ಚಿತ್ರದ ಮೂಲಕ 'ಕೆಜಿಎಫ್' ದಾಖಲೆಯನ್ನು ಮುರಿಯುವ ಲೆಕ್ಕಾಚಾರದಲ್ಲಿದ್ದಾರೆ. ಈ ಬಾರಿ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಯಶ್ ಲೈಫ್ ಅನ್ನು 'ಕೆಜಿಎಫ್‌'ಗೂ ಮುನ್ನ ನಂತರ ಎಂದು ವಿಭಾಗಿಸಿ ಹೇಳುವಷ್ಟು ಆ ಸಿನಿಮಾ ಬದಲಾವಣೆ ತಂದಿದೆ. ತಮಿಳುನಾಡು, ಕೇರಳ ಹಾಗೂ ವಿದೇಶಗಳಲ್ಲಿ ಕೂಡ ಯಶ್ ಅಭಿಮಾನಿ ಸಂಘಗಳು ಹುಟ್ಟಿಕೊಂಡಿದೆ. ಅಷ್ಟರಮಟ್ಟಿಗೆ 'ಕೆಜಿಎಫ್‌' ಸಿನಿಮಾ ಜಾದೂ ಮಾಡಿದೆ. ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಯಶ್ ಸಾಕಷ್ಟು ಅನುಮಾನ ಎದುರಿಸಿದ್ದಾರೆ. ಅದನ್ನೆಲ್ಲಾ ಮೀರಿ ಹೀರೊ ಆಗಿ ಗೆದ್ದಿದ್ದರು.

Toxic Actor Yash Gets huge cutout in Mumbai for New Ad announcement

ಒಮ್ಮೆ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಜಾಗ ಇಲ್ಲದೇ ಮೆಜೆಸ್ಟಿಕ್‌ ಬಸ್‌ ಸ್ಟ್ಯಾಂಡ್‌ನಲ್ಲಿ ಇಡೀ ರಾತ್ರಿ ಕಳೆದಿದ್ದರು. ಅಂದು ಮೈಸೂರಿನ ಬಸ್ ಹತ್ತಿ ವಾಪಸ್ ಮನೆಗೆ ಹೋಗುವುದೋ ಇಲ್ಲ ಪಕ್ಕದ ಗಾಂಧಿನಗರದಲ್ಲಿ ಏನಾದರೂ ಸಾಧಿಸುವುದೋ ಎಂದು ಯೋಚಿಸಿದ್ದರಂತೆ. ಒಂದಲ್ಲ ಒಂದು ದಿನ ಚಿತ್ರಮಂದಿರದ ಮುಂದೆ ತನ್ನ ಕಟೌಟ್ ನಿಲ್ಲಿಸಬೇಕು ಎಂದು ಕನಸು ಕಟ್ಟಿದ್ದರು. ಅದರಂತೆ ಹೀರೊ ಆಗಿ ಗೆದ್ದಮೇಲೆ ಚಿತ್ರಮಂದಿರಗಳ ಮುಂದೆ ಯಶ್ ಕಟೌಟ್‌ಗಳು ಎದ್ದು ನಿಲ್ಲುವಂತಾಯಿತು.

'ಕೆಜಿಎಫ್' ಚಿತ್ರದ ಬ್ಲಾಕ್‌ಬಸ್ಟರ್ ಹಿಟ್ ಆಗಿ ಸೀಕ್ವೆಲ್ ವೇಳೆಗೆ ಹೊರ ರಾಜ್ಯದ ಚಿತ್ರಮಂದಿರದ ಮುಂದೆ ಯಶ್ ಕಟೌಟ್‌ಗಳು ಹಾಕಲಾಯಿತು. 'ಕೆಜಿಎಫ್'-2 ರಿಲೀಸ್ ವೇಳೆ ಹೊಂಬಾಳೆ ಸಂಸ್ಥೆಯೇ ಮುಂಬೈನ ದೊಡ್ಡ ಚಿತ್ರಮಂದಿರದ ಮುಂದೆ 100 ಅಡಿ ಕಟೌಟ್ ಹಾಕಿಸಿತ್ತು. ಆದರೆ ಇದೀಗ ದಿಢೀರನೆ ಮುಂಬೈನಲ್ಲಿ ಮತ್ತೆ ಯಶ್ ಕಟೌಟ್ ಹಾಕಲಾಗಿದೆ.

ಅರೇ ಈಗ ಯಶ್ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಸದ್ಯಕ್ಕೆ ಆಗುವುದು ಇಲ್ಲ. 'ಕೆಜಿಎಫ್' ಸಿನಿಮಾ ಕೂಡ ರೀ-ರಿಲೀಸ್ ಆಗ್ತಿಲ್ಲ, ಹುಟ್ಟುಹಬ್ಬ ಆಚರಣೆ ಕೂಡ ಇಲ್ಲ. ಮತ್ಯಾಕೆ ಕಟೌಟ್, ಅದು ಕೂಡ ಮುಂಬೈನಲ್ಲಿ ಎಂದು ಕೆಲವರು ಹುಬ್ಬೇರಿಸಿದ್ದಾರೆ. ಯಶ್ ಜಾಹೀರಾತುವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಪ್ರಚಾರಕ್ಕಾಗಿ ಹೀಗೆ ಅಂದಾಜು 50 ಅಡಿ ಎತ್ತರದ ಕಟೌಟ್ ಮುಂಬೈನಲ್ಲಿ ನಿಲ್ಲಿಸಲಾಗಿದೆ.

Toxic Actor Yash Gets huge cutout in Mumbai for New Ad announcement

ಬಿಳಿ ಟೀಶರ್ಟ್, ಕಪ್ಪು ಪ್ಯಾಂಟ್ ಹಾಗೂ ಕೆಂಪು ಬಣ್ಣದ ಜಾಕೆಟ್‌ ಧರಿಸಿರುವ ಯಶ್ ಪೋಸ್ಟರ್ ಅನ್ನು ದೊಡ್ಡ ಕಟೌಟ್ ಮಾಡಿಸಿ ಹಾಕಲಾಗಿದೆ. ಜಾಹೀರಾತು ಘೋಷಣೆಗಾಗಿ ಹಾಕಿರುವ ಕಟೌಟ್ ಎನ್ನಲಾಗ್ತಿದೆ. ಅದಕ್ಕೆ ಸಂಬಂಧಿಸಿದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಕಾಲರ್ ಎಗರಿಸುತ್ತಿದ್ದಾರೆ.

ಸದ್ಯ ಯಶ್ ಮುಂಬೈನಲ್ಲೇ ವಾಸ್ತವ್ಯ ಹೂಡಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಕೆಲ ಸನ್ನಿವೇಶಗಳನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿದೆ. ರಾವಣನ ವೇಷದಲ್ಲಿ ಅಬ್ಬರಿಸುತ್ತಿದ್ದಾರೆ. ಮತ್ತೊಂದು ಕಡೆ 'ಟಾಕ್ಸಿಕ್' ಚಿತ್ರೀಕರಣ ಸಣ್ಣ ಸಣ್ಣ ಶೆಡ್ಯೂಲ್‌ಗಳಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲೇ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿತ್ತು. ಮುಂದಿನ ವರ್ಷ ದೀಪಾವಳಿಗೆ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ.

'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ನಿರ್ಮಾಪಕರಾಗಿ ಯಶ್ ಕೈ ಜೋಡಿಸಿದ್ದಾರೆ. ತಮ್ಮದೇ ಮಾನ್‌ಸ್ಟರ್ ಮೈಂಡ್ಸ್ ಬ್ಯಾನರ್ ಅಡಿಯಲ್ಲಿ ಹಣ ಹೂಡಿದ್ದಾರೆ. 'ಟಾಕ್ಸಿಕ್' ಚಿತ್ರಕ್ಕೆ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ಸೆರೆಹಿಡಿಯಲಾಗುತ್ತಿದೆ.

More from Filmibeat

English summary
Rocking stare Yash's cutout unveiled in Mumbai;
Read more about: yash toxic kgf
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X