ಮೊದಲ ಮಗುವಿನ ನಿರೀಕ್ಷೆಯಲ್ಲಿ 'ಟಾಕ್ಸಿಕ್' ಸಿನಿಮಾ ನಟಿ

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಾವು ಗರ್ಭಿಣಿ ಎನ್ನುವ ವಿಚಾರವನ್ನು 'ಟಾಕ್ಸಿಕ್' ಚಿತ್ರದ ನಟಿ ಹಂಚಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ನಟ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ ಪ್ರೀತಿಸಿ ಮದುವೆ ಆಗಿದ್ದರು. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆದಿತ್ತು. "ನಮ್ಮ ಜೀವನದ ಶ್ರೇಷ್ಠ ಉಡುಗೊರೆ, ಆದಷ್ಟು ಬೇಗ ಬರ್ತಿದೆ" ಎಂದು ಇಬ್ಬರು ಕೈಯಲ್ಲಿ ಮಗುವಿನ ಸಾಕ್ಸ್ ಹಿಡಿದಿರುವ ಫೋಟೊ ಹಂಚಿಕೊಂಡಿದ್ದಾರೆ.

Toxic actress Kiara Advani announced her pregnancy with her husband

10 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದ ಕಿಯಾರಾ ಅಡ್ವಾಣಿ ತೆಲುಗು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಕೊನೆಯದಾಗಿ 'ಗೇಮ್ ಚೇಂಜರ್' ಚಿತ್ರದಲ್ಲಿ ರಾಮ್‌ಚರಣ್ ಜೋಡಿಯಾಗಿ ನಟಿಸಿದ್ದರು. ಸದ್ಯ ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಂಬೈ ಹಾಗೂ ಬೆಂಗಳೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಅವರು ಭಾಗಿ ಆಗಿದ್ದರು.

ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ಚಿತ್ರದಲ್ಲಿ ಕೂಡ ಕಿಯಾರಾ ಬಣ್ಣ ಹಚ್ಚಿದ್ದಾರೆ. ಇದೇ ವರ್ಷ ಆ ಸಿನಿಮಾ ಕೂಡ ತೆರೆಗೆ ಬರಲಿದೆ. ಉದ್ಯಮಿಯ ಜಗದೀಪ್‌ ಅದ್ವಾನಿ ಪುತ್ರಿ ಕಿಯಾರಾ ಮುಂಬೈನಲ್ಲೇ ಹುಟ್ಟಿ ಬೆಳೆದವರು. ಆಕೆಯ ಮೊದಲ ಹೆಸರು ಆಲಿಯಾ ಅದ್ವಾನಿ. ಬಳಿಕ ಅದನ್ನು ಬದಲಿಸಿಕೊಂಡಿದ್ದರು.

2014ರಲ್ಲಿ ಬಂದಿದ್ದ 'ಫಗ್ಲಿ' ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದರು. ಆಂಥಾಲಜಿ ಸಿನಿಮಾ 'ಲಸ್ಟ್ ಸ್ಟೋರಿಸ್' ಬ್ರೇಕ್ ಕೊಟ್ಟಿತ್ತು. ಸಾಕಷ್ಟು ಬೋಲ್ಡ್ ಫೋಟೊಶೂಟ್‌ಗಳಲ್ಲಿ ಕೂಡ ಮಿಂಚಿ ಗಮನ ಸೆಳೆದರು. 4 ವರ್ಷಗಳ ಹಿಂದೆ 'ಶೇರ್‌ಷಾ' ಚಿತ್ರದ ಚಿತ್ರೀಕರಣದ ವೇಳೆ ಸಿದ್ದಾರ್ಥ್, ಕಿಯಾರಾ ಭೇಟಿ ಆಗಿತ್ತು.

ಒಂದಷ್ಟು ದಿನ ಕದ್ದು ಮುಚ್ಚಿ ಓಡಾಡಿದ ಜೋಡಿ ಬಳಿಕ ಮದುವೆ ಆಗಲು ನಿರ್ಧರಿಸಿದರು. ಮೊದಲಿಗೆ ಸ್ನೇಹಿತರಾಗಿ ಇದ್ದರು. ಆದರೆ ಬಳಿದು ಇದು ಸ್ನೇಹಕ್ಕಿಂತ ಹೆಚ್ಚು ಎಂದು ಅರಿವಾಗಿತ್ತು. ಮದುವೆ ಆಗುವವರೆಗೂ ಈ ವಿಚಾರವನ್ನು ಗುಟ್ಟಾಗಿಯೇ ಇಟ್ಟುಕೊಳ್ಳಲು ಪ್ರಯತ್ನಿಸಿದ್ದರು. ಇನ್ನು ಕಿಯಾರಾ ತಮ್ಮ ಪ್ರೆಗ್ನೆನ್ಸಿ ವಿಚಾರ ಹಂಚಿಕೊಳ್ಳುತ್ತಿದ್ದಂತೆ ಆಪ್ತರು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಸಮಂತಾ ಹಾಗೂ ರಕುಲ್ ಪ್ರೀತ್ ಸಿಂಗ್ 'ಓ ಮೈ ಗಾಡ್, ಕಂಗ್ರಾಟ್ಸ್' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ಜನ ಅವರು ಹಂಚಿಕೊಂಡಿರುವ ಫೋಟೊ ಬಹಳ ಕ್ಯೂಟ್ ಆಗಿ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೇ ವರ್ಷ ಕಿಯಾರಾ ಹಾಗೂ ಸಿದ್ದಾರ್ಥ್ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ.

ಸದ್ಯ ಗರ್ಭಿಣಿ ಆಗಿರುವ ಕಿಯಾರಾ ಸಿನಿಮಾಗಳಲ್ಲಿ ನಟಿಸುತ್ತಾರಾ? ಬ್ರೇಕ್ ಪಡೆಯುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಕೆಲ ನಟಿಯರು ಗರ್ಭಿಣಿ ಆಗಿದ್ದರೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದಾರೆ. ನಟಿ ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. 'ಕಲ್ಕಿ 2898 AD' ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿದ್ದರು.

'ಎಂ. ಎಸ್ ಧೋನಿ', 'ಭರತ್ ಅನೆ ನೇನು', 'ಕಬೀರ್ ಸಿಂಗ್', 'ಶೇರ್‌ಷಾ', 'ಭೂಲ್ ಬೂಲಯ್ಯ-2' ಸೇರಿ ಕೆಲ ಹಿಟ್ ಸಿನಿಮಾಗಳಲ್ಲಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

More from Filmibeat

English summary
Kiara Advani, Sidharth Malhotra ​ announce pregnancy, to welcome first child in 2025
Read more about: kiara advani bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X