ಹಲ್ಲು ಉಜ್ಜೋಕೆ 'ಚಿನ್ನ'ದ ಟೂತ್ ಬ್ರಷ್ ಬಳಸುತ್ತಾರೆ ಈ ಸ್ಟಾರ್ ಹೀರೋಯಿನ್...!
ಚಿತ್ರರಂಗದಲ್ಲಿ ಇರುವವರಿಗೆ ಸಾಮಾನ್ಯವಾಗಿ ಮೂರು ಮತ್ತೊಂದು ಶೋಕಿಗಳಿರುತ್ತವೆ. ಕೆಲವರಿಗೆ ಡ್ರೈವಿಂಗ್ ಹುಚ್ಚು ತಲೆಗೇರಿದರೆ, ಇನ್ನೂ ಕೆಲವರಿಗೆ ದುಬಾರಿ ಬಟ್ಟೆಗಳನ್ನು ಹಾಕಿಕೊಂಡು ಓಡಾಡುವ ಹುಚ್ಚಿರುತ್ತೆ. ಮತ್ತೂ ಕೆಲವರಿಗೆ ದುಬಾರಿ ಬೆಲೆಯ ಪರಿಕರಗಳನ್ನು ಉಪಯೋಗಿಸಿ ಆ ನಂತರ ಎಸೆಯುವ ಹುಚ್ಚಿರುತ್ತದೆ. ಹೀಗೆ ನಾನಾ ಬಗೆಯ ಹುಚ್ಚು ಉರುಫ್ ಶೋಕಿಗೆ ಒಳಗಾಗಿರುವ ಸಿನಿಮಾ ತಾರೆಯರು ದಾರಿಗೊಬ್ಬರಾದರೂ ಸಿಗುತ್ತಲೇ ಇರುತ್ತಾರೆ. ಇದಕ್ಕೆ ಕಿಯಾರಾ ಅಡ್ವಾಣಿ ಸದ್ಯದ ಉದಾಹರಣೆ.
ಹೌದು.. ಸರಿಯಾಗಿ ಒಂದು ದಶಕದ ಹಿಂದೆ ಪುಗ್ಲಿ ಚಿತ್ರದ ಮೂಲಕ, ಚಿತ್ರರಂಗಕ್ಕೆ ಬಂದ ಕಿಯಾರಾ, ಎಂ.ಎಸ್. ಧೋನಿ ಚಿತ್ರದ ನಂತರ ಹಿಂದೆ ತಿರುಗಿ ನೋಡಲೇ ಇಲ್ಲ. ಒಂದಾದ ಮೇಲೊಂದರಂತೆ ಚಿತ್ರಗಳನ್ನ ಮಾಡ್ತಾನೇ ಬಂದರು. ಬಾಲಿವುಡ್‌ನಲ್ಲಿ ಭದ್ರವಾಗಿ ನೆಲೆಯೂರಿದರು.

ಇವತ್ತು, ಕಿಯಾರಾ ಅಡ್ವಾಣಿ ಬಾಲಿವುಡ್ ನ ಬಹುಬೇಡಿಕೆಯ ನಟಿ. ಕೇವಲ ಬಾಲಿವುಡ್ ನಲ್ಲಿ ಅಷ್ಟೇ ಅಲ್ಲ, ಸೌತ್ ಫಿಲ್ಮ್ ಇಂಡಸ್ಟ್ರೀಯಲ್ಲಿಯೂ ಕಿಯಾರಾಗೆ ಚಿನ್ನದಂತಹ ಬೇಡಿಕೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಆ ಕಾಲದಲ್ಲಿಯೇ, ಮಹೇಶ್ ಬಾಬು ಜೊತೆ ತೆರೆ ಹಂಚಿಕೊಂಡ ಕಿಯಾರಾ, ರಾಮ್ ಚರಣ್ ತೇಜಾ ಅಭಿನಯದ ಗೇಮ್ ಚೆಂಜರ್ ಚಿತ್ರಕ್ಕೂ ನಾಯಕಿ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರಕ್ಕೂ ನಾಯಕಿ.
ಇಂಥ ಕಿಯಾರಾ ಹಲ್ಲು ಉಜ್ಜೋಕೆ ಚಿನ್ನದ ಟೂತ್ ಬ್ರಷ್ ಬಳಸುತ್ತಾರೆ ಅನ್ನುವುದೇ ಈ ಕ್ಷಣದ ಬ್ರೇಕಿಂಗ್ ಸಮಾಚಾರ. ಖುದ್ದು ಕಿಯಾರಾ ಈ ವಿಚಾರವನ್ನು ಹಂಚಿಕೊಂಡಿದ್ಧಾರೆ. ಟ್ರೋಲಿಗರಿಗೆ ಬಾಯಿಗೆ ಎಲೆ ಅಡಿಕೆಯಾಗಿದ್ದಾರೆ. ಹೌದು, ಅಸಲಿಗೆ ಕಿಯಾರಾ ತಮ್ಮ ವಾಶ್ ರೂಂನ ಕನ್ನಡಿ ಎದುರು ನಿಂತು ಫೋಟೊವೊಂದನ್ನು ಕ್ಲಿಕಿಸಿಕೊಂಡಿದ್ದಾರೆ. ಆದರೆ ಇದೇ ಸಮಯದಲ್ಲಿ ಕೈಯಲ್ಲಿ ಗೋಲ್ಡನ್ ಟೂತ್ ಬ್ರಷ್ ಹಿಡಿದುಕೊಂಡಿದ್ದಾರೆ. ಜೊತೆಯಲ್ಲಿ ನೀವು ಸಿಂಧಿ ಎಂದು ಹೇಳದೇ ನೀವು ಸಿಂಧಿ ಎಂದು ಹೇಗೆ ಹೇಳುತ್ತೀರಾ ಎಂಬ ಸಾಲನ್ನು ಬರೆದುಕೊಂಡಿದ್ದಾರೆ. ಯಾಕೆಂದರೆ ಕಿಯಾರಾ ಮೂಲತಃ ಸಿಂಧಿ ಹುಡುಗಿ.

ಇನ್ನೂ ಸಿಂಧಿ ಸಮುದಾಯಕ್ಕೆ ಮತ್ತು ಚಿನ್ನಕ್ಕೆ ತೀರಾ ಆತ್ಮೀಯ ಭಾಂದವ್ಯ ಇದೆ. ಈ ಕಾರಣಕ್ಕೆ ಕೆಲವರು ಕಿಯಾರಾ ಅವರ ಈ ಗೋಲ್ಡ್ ಟೂತ್ ಬ್ರಷ್ ಮತ್ತು ಕಿಯಾರಾ ಬರೆದ ಸಾಲುಗಳನ್ನು ತಮಾಷೆಯಾಗಿ ಸ್ವೀಕರಿಸಿದ್ದಾರೆ. ಆದರೆ ಬಹುತೇಕರು ಕಿಯಾರಾ ಅವರ ಈ ನಡೆಯಿಂದ ಅಸಮಾಧಾನಗೊಂಡಿದ್ಧಾರೆ. ಕಾಲೆಳೆಯಲು ಶುರುಮಾಡಿದ್ದಾರೆ. ಕೆಲವರು ಈ ತಿರುಪೆ ಶೋಕಿಗೆ ಕಡಿಮೆ ಇಲ್ಲ ಎಂದರೆ, ಇನ್ನೂ ಕೆಲವರು ಬಿಲ್ಡಪ್ ರಾಣಿಯೆಂದು ಕರೆದಿದ್ದಾರೆ.
ಇನ್ನೂ ನಾನು ಮೂರು ತಿಂಗಳಿಗೊಮ್ಮೆ ನನ್ನ ಬ್ರಷ್ ಬದಲಿಸುತ್ತೇನೆ ಆದರೆ ಕಿಯಾರಾ ತಮ್ಮ ಜೀವಮಾನದುದ್ದಕ್ಕೂ ಇದೇ ಬ್ರಷ್ ಬಳಸಬಹುದು ಎಂದು ವ್ಯಕ್ತಿಯೊಬ್ಬರು ವ್ಯಂಗ್ಯ ಮಾಡಿದ್ದಾರೆ. ಈ ಬ್ರಷ್‌ನಿಂದ ಹಲ್ಲು ಉಜ್ಜಿದರೆ ಬಾಯಿಂದ ದುರ್ನಾತ ಬರುವುದಿಲ್ಲವಾ ಎಂಬ ಪ್ರಶ್ನೆಯನ್ನು ಮತ್ತೊಬ್ಬರು ಕಿಯಾರಾಗೆ ಕೇಳಿದ್ಧಾರೆ. ಮತ್ತೊಬ್ಬರು ನಿಜವಾಗಿಯೂ ಇದು ಚಿನ್ನದ ಬ್ರಷಾ ಅಥವಾ ಹತ್ತು ರೂಪಾಯಿಯ ಬ್ರಷ್‌ಗೆ ಚಿನ್ನದ ಬಣ್ಣ ಹಚ್ಚಿ ಶೋ ಆಫ್ ಮಾಡುತ್ತಿದ್ದೀರಾ ಎಂದರೆ, ಇಂತಹವರೆಲ್ಲ ತಮ್ಮ ಚಿತ್ರದ ಬಿಡುಗಡೆಯ ಸಮಯದಲ್ಲಿ ತಮ್ಮ ಬಾಲ್ಯದ ಕುರಿತು ಪುಖಾಂನುಪುಂಖವಾಗಿ ಸುಳ್ಳು ಹೇಳುತ್ತಾರೆ. ಕಡು ಬಡತನದಿಂದ ಬಂದಿರುವುದಾಗಿ ಹೇಳಿ ದಾರಿ ತಪ್ಪಿಸುತ್ತಾರೆ ಎಂದಿದ್ಧಾರೆ. ದುಬೈನಲ್ಲಿನ ಹೊಟೇಲ್‌ವೊಂದರಲ್ಲಿ ಕೊಡುವ ಟೂತ್ ಬ್ರಷ್ ಕದ್ದು ಇಲ್ಲಿ ಬಿಲ್ಡಪ್ ಕೊಡುತ್ತಿದ್ದಾರೆ ಎಂದೆಲ್ಲ ಕಾಲೆಳೆದಿದ್ದಾರೆ.
ಅಂದ್ಹಾಗೆ ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಕಿಯಾರಾಚಿತ್ರರಂಗಕ್ಕೆ ಬರುವ ಮೊದಲು, ಪ್ರಿಸ್ಕೂಲ್ ನಲ್ಲಿ ನರ್ಸರಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದೆ ಎಂದು ಹೇಳಿದ್ದರು. ಮಕ್ಕಳಿಗೆ ನರ್ಸರಿ ರೈಮ್ಸ್ ಹೇಳಿಕೊಡುವುದಲ್ಲದೆ ಮಕ್ಕಳ ಡೈಪರ್ ಗಳನ್ನೂ ಬದಲಾಯಿಸುವ ಕೆಲಸವನ್ನ ಮಾಡಿದ್ದೇ ಎಂದು ಹೇಳಿಕೊಂಡಿದ್ದರು.


Click it and Unblock the Notifications











