ಇರಾನ್‌- ಇಸ್ರೇಲ್‌ ಯುದ್ಧದಿಂದ 'ಧುರಂಧರ್- 2' ಚಿತ್ರಕ್ಕೆ ಸಮಸ್ಯೆ ಇಲ್ವಾ? 'ಟಾಕ್ಸಿಕ್‌'ಗೆ ಮಾತ್ರನಾ?

ಮಾರ್ಚ್ 19ಕ್ಕೆ ನಡೆಯಬೇಕಿದ್ದ ಭಾರೀ ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಬ್ರೇಕ್ ಬಿದ್ದಿದೆ. 'ಟಾಕ್ಸಿಕ್' ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಮುಂದೂಡಿ ಎಲ್ಲರಿಗೂ ಶಾಕ್ ಕೊಟ್ಟಿತ್ತು. ಇದು ಸಹಜವಾಗಿಯೇ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಆದರೆ ಹೇಳಿದ ದಿನವೇ ಬಾಲಿವುಡ್ ಸಿನಿಮಾ 'ಧುರಂಧರ್-2' ತೆರೆಗಪ್ಪಳಿಸಲಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಇರಾನ್‌- ಇಸ್ರೇಲ್‌ ಯುದ್ಧದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ಮುಂದೂಡುತ್ತಿರುವುದಾಗಿ 'ಟಾಕ್ಸಿಕ್' ಚಿತ್ರತಂಡ ತಿಳಿಸಿದೆ. ದೂರದಲ್ಲಿ ನಡೆಯುತ್ತಿರುವ ಯುದ್ಧಕ್ಕೂ ಕನ್ನಡದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಎತ್ತಣದಿಂದೆತ್ತಣ ಸಂಬಂಧ ಎಂದು ಕೆಲವರು ಕೇಳುತ್ತಿದ್ದಾರೆ. ಬಾಕ್ಸಾಫೀಸ್‌ ಕ್ಲ್ಯಾಶ್‌ಗೆ ಹೆದರಿ ಸಿನಿಮಾ ರಿಲೀಸ್ ಮುಂದೂಡಿದ್ದಾರೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಆದರೆ ಬ್ಯುಸಿನೆಸ್ ವಿಚಾರದಲ್ಲಿ ಯಶ್ ಚಿತ್ರಕ್ಕೆ ಹಿನ್ನಡೆ ಆಗುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ ಇಂತಾದೊಂದು ನಿರ್ಧಾರಕ್ಕೆ ಬರಲಾಗಿದೆ.

Toxic Postponed Over Iran Israel conflict Concerns Dhurandhar 2 Faces Gulf Release Problems

ಇಸ್ರೇಲ್-ಅಮೆರಿಕ ಮತ್ತು ಇರಾನ್ ದೇಶಗಳ ನಡುವಿನ ಯುದ್ಧದಿಂದ ಅರಬ್ ರಾಷ್ಟ್ರಗಳಲ್ಲಿ ಸಂಕಷ್ಟ ಎದುರಾಗಿದೆ. ಸುತ್ತಾಮುತ್ತ ಇರುವ ದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಅಲ್ಲಿನ ಜನ ಈಗ ಸಿನಿಮಾ ನೋಡುವ ವಾತಾವರಣ ಇಲ್ಲ. ಹಾಗಾಗಿ ಇಂತಹ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಬೇಡ ಎಂದು ಚಿತ್ರತಂಡ ಹಿಂದೆ ಸರಿದಿದೆ. ಅದೇ ದಿನ 'ಧುರಂಧರ್- 2' ಸಿನಿಮಾ ಬಿಡುಗಡೆ ಆಗ್ತಿದೆ. ಆ ಚಿತ್ರದ ಬ್ಯುಸಿನೆಸ್‌ಗೆ ಸಮಸ್ಯೆ ಆಗುವುದಿಲ್ಲವೇ? ಯುದ್ಧದಿಂದ ಬರೀ 'ಟಾಕ್ಸಿಕ್' ಚಿತ್ರಕ್ಕೆ ನಷ್ಟವಾಗುತ್ತಾ ಎಂದು ಕೆಲವರು ಕೇಳುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ದುಬೈ, ಅಬುದಾಭಿ, ಶಾರ್ಜಾ, ಅಲ್ ಐನ್ ಸುತ್ತಾಮುತ್ತ ಯಾವುದೇ ಸಿನಿಮಾ ಬಿಡುಗಡೆಗೆ ಸೂಕ್ತ ವಾತಾವರಣ ಇಲ್ಲ. ಯುದ್ಧದ ಸಂಘರ್ಷದ ಆತಂಕ ಮನೆ ಮಾಡಿದೆ. ಸಾವು ನೋವು ಸಂಭವಿಸಿದೆ. ಯುದ್ಧ ಸಂಪೂರ್ಣವಾಗಿ ನಿಂತಿಲ್ಲ. ಯಾವಾಗ ನಿಲ್ಲುತ್ತದೆ ಎನ್ನುವುದು ಗೊತ್ತಿಲ್ಲ. ಹಾಗಾಗಿ ಅಲ್ಲಿ ಸಿನಿಮಾ ಬಿಡುಗಡೆಗೆ ಎಲ್ಲರೂ ಹೆದರುವಂತಾಗಿದೆ.

ಯಶ್ ನಟನೆಯ 'KGF' ಸರಣಿ ಸಿನಿಮಾ ಅರಬ್ ದೇಶಗಳಲ್ಲಿ ಸದ್ದು ಮಾಡಿತ್ತು. ಪಾಕಿಸ್ತಾನದ ಜನ ಕೂಡ ಸಿನಿಮಾ ನೋಡಿ ರಾಕಿ ಭಾಯ್ ಆರ್ಭಟ ಮೆಚ್ಚಿಕೊಂಡಿದ್ದರು. ಹಾಗಾಗಿ 'ಟಾಕ್ಸಿಕ್' ಚಿತ್ರಕ್ಕೆ ಅಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ. ಅದನ್ನು ಕಳೆದುಕೊಳ್ಳಲು ಚಿತ್ರತಂಡ ಸಿದ್ಧವಿಲ್ಲ. ಆದರೆ 'ಧುರಂಧರ್'-2 ಚಿತ್ರಕ್ಕೆ ಆ ಸಮಸ್ಯೆ ಇಲ್ಲ.

ಪಾಕಿಸ್ತಾನ ಸೇರಿ ಹಲವು ದೇಶಗಳಲ್ಲಿ 'ಧುರಂಧರ್' ಚಿತ್ರವನ್ನು ಬ್ಯಾನ್ ಮಾಡಲಾಗಿತ್ತು. ಹಾಗಾಗಿ ಸೀಕ್ವೆಲ್ ಚಿತ್ರ ಬಿಡುಗಡೆಗೂ ಅಲ್ಲಿ ಅವಕಾಶ ಸಿಗುವುದಿಲ್ಲ. ಹಾಗಾಗಿ 'ಧುರಂಧರ್'-2 ಚಿತ್ರಕ್ಕೆ ಯುದ್ಧದ ಎಫೆಕ್ಟ್ ಆಗುವುದಿಲ್ಲ ಎನ್ನುವ ಚರ್ಚೆ ನಡೀತಿದೆ. ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ 6 ಗಲ್ಫ್ ರಾಷ್ಟ್ರಗಳಲ್ಲಿ 'ಧುರಂಧರ್' ಸಿನಿಮಾವನ್ನು ನಿಷೇಧಿಸಲಾಗಿತ್ತು. ಚಿತ್ರದಲ್ಲಿ ಪಾಕಿಸ್ತಾನ ವಿರೋಧಿ ಅಂಶಗಳಿವೆ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿತ್ತು.

ಭಾರತ-ಪಾಕ್ ಬೇಹುಗಾರಿಕೆ ಕಥೆ 'ಧುರಂಧರ್' ಸರಣಿ ಚಿತ್ರಗಳಲ್ಲಿದೆ. ಪಾಕಿಸ್ತಾನದಲ್ಲಿ ಸಿನಿಮಾ ಬಿಡುಗಡೆ ಆಗದೇ ಇದ್ದರೂ ಓಟಿಟಿಗೆ ಬಂದಮೇಲೆ ಅಲ್ಲಿನ ಜನ ಮುಗಿಬಿದ್ದು ನೋಡಿದ್ದರು. ಪೈರಸಿ ಸಿಡಿಗಳು ಸಖತ್ ಸದ್ದು ಮಾಡಿದ್ದವು.

'ಟಾಕ್ಸಿಕ್' ಸಿನಿಮಾ 3 ತಿಂಗಳು ತಡವಾಗಿ ಅಂದರೆ ಜೂನ್ 4ರಂದು ತೆರೆಗೆ ಬರಲಿದೆ. ಅಂದಹಾಗೆ 'ಟಾಕ್ಸಿಕ್' ಬದಲು ಮಾರ್ಚ್ 19ಕ್ಕೆ 'ಲವ್ ಮಾಕ್ಟೇಲ್'-3 ಸಿನಿಮಾ ತೆರೆಗಪ್ಪಳಿಸಲಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಿರ್ಮಿಸಿ ನಟಿಸಿರುವ ಚಿತ್ರ ಮುಂದಿನ ತಿಂಗಳು ತೆರೆಗೆ ಬರಬೇಕಿತ್ತು. ಆದರೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರುವುದು ತಡವಾಗುತ್ತಿದ್ದಂತೆ 'ಲವ್ ಮಾಕ್ಟೇಲ್'-3 ಚಿತ್ರವನ್ನು ಬೇಗ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಕೆವಿಎನ್ ಸಂಸ್ಥೆಯೇ ಈ ಸಿನಿಮಾ ವಿತರಣೆ ಮಾಡುತ್ತಿರುವುದು ವಿಶೇಷ.

More from Filmibeat

Read more about: toxic yash ranveer singh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X