ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ನಿಧನ, 53ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಉದ್ಯಮಿ

ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲವೂ ವಿಧಿ ಲಖಿತ. ಇದಕ್ಕೆ ಸಂಜಯ್ ಕಪೂರ್ ಅಕಾಲಿಕ ನಿಧನ ಮತ್ತೊಂದು ಸಾಕ್ಷಿ.

ಹೌದು, ಸಂಜಯ್ ಕಪೂರ್.. ಬಾಲಿವುಡ್‌ನ ಖ್ಯಾತ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ.
2003ರಲ್ಲಿ ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಿ 13 ವರ್ಷ ಪ್ರಯಾಸದಾಯಕವಾಗಿ ಸಂಸಾರ ನಡೆಸಿದ ಸಂಜಯ್ ಕಪೂರ್ ಆ ನಂತರ 2016ರಲ್ಲಿ ವಿಚ್ಚೇದನ ಪಡೆದಿದ್ದರು. ಮತ್ತೊಂದು ಮದುವೆಯಾಗಿ ದೂರದ ಇಂಗ್ಲೆಂಡ್‌ನಲ್ಲಿ ವಾಸ ಮಾಡುತ್ತಿದ್ದರು.

Tragedy Strikes Karisma Kapoor s Ex-Husband Sunjay Kapur Dead at 53

ಇನ್ನು ನಿನ್ನೆ { ಜೂನ್ 12 } ಏರ್ ಇಂಡಿಯಾ ವಿಮಾನ AI 171 ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ನಾಗರಿಕರು, ಓರ್ವ ಕೆನಡಾ ಪ್ರಜೆ ಮತ್ತು ಏಳು ಪೋರ್ಚುಗೀಸ್ ನಾಗರಿಕರು ಹಾಗೂ ವಿಮಾನದ ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರಿದ್ದು ಒಬ್ಬ ವ್ಯಕ್ತಿಯನ್ನು ಹೊರತು ಪಡಿಸಿದರೆ ಎಲ್ಲರೂ ಸಜೀವ ದಹನರಾದರು. ಈ ದುರಂತಕ್ಕೆ ಇಡೀ ವಿಶ್ವ ಮಮ್ಮಲ ಮರುಗಿತ್ತು. ಆ ಪೈಕಿ ಸಂಜಯ್ ಕುಮಾರ್ ಕೂಡ ಒಬ್ಬರಾಗಿದ್ದರು.

ಅಹಮಾದಾಬಾದ್​​ನ ವಿಮಾನ ಅಪಘಾತದ ಸುದ್ದಿ ತುಂಬಾನೇ ಆಘಾತಕಾರಿಯಾದದ್ದು.ಈ ದುರಂತದಿಂದ ತೊಂದರೆಗೆ ಒಳಗಾದ ಎಲ್ಲಾ ಕುಟುಂಬದವರಿಗೆ ನನ್ನ ಸಂತಾಪ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದವರಿಗೆ ಶಕ್ತಿ ಸಿಗಲಿ ಎಂದು ಸಂಜಯ್ ಕಪೂರ್ ಟ್ವೀಟ್ ಮಾಡಿದ್ದರು.

ಹೀಗೆ ಟ್ವೀಟ್ ಮಾಡಿದ ಕೆಲ ಸಮಯದ ನಂತರ ಪೊಲೋ ಗೇಮ್ ಆಡುವ ವೇಳೆ ಸಂಜಯ್ ಕಪೂರ್ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಕೂಡ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಹೆಸರು ಮಾಡಿದ್ದ ಸಂಜಯ್ ಕಪೂರ್ ಸೋನಾ ಕಾಮ್​ಸ್ಟಾರ್ ಕಂಪನಿ​​ಗೆ ಅಧ್ಯಕ್ಷರಾಗಿದ್ದರು. ಭಾರತೀಯ ಕೈಗಾರಿಕಾ ಒಕ್ಕೂಟದ { ಸಿಐಐ } ಸಹ ಅಧ್ಯಕ್ಷ ಕೂಡ ಆಗಿದ್ದ ಸಂಜಯ್ ಕಪೂರ್ ಭಾರತೀಯ ಆಟೋಮೋಟಿವ್ ಘಟಕ ತಯಾರಕರ ಸಂಘದ (ACMA) ಅಧ್ಯಕ್ಷರು ಕೂಡ ಆಗಿದ್ದರು.

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಅವರ ಪ್ರೀತಿಯ ಸಂಕೇತವಾಗಿ ಇಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ, ಮಗಳಿಗೆ ಸಮೈರಾ ಮತ್ತು ಮಗನಿಗೆ ಕಿಯಾನ್ ಎಂದು ಇಬ್ಬರು ಹೆಸರಿಟ್ಟಿದ್ದರು. ಇನ್ನು ಎರಡನೇ ಪತ್ನಿ ಪ್ರಿಯಾ ಅವರಿಂದ ಒಂದು ಮಗುವನ್ನು ಸಂಜಯ್ ಕಪೂರ್ ಹೊಂದಿದ್ದರು.

ಇನ್ನು ಸಂಜಯ್ ಕಪೂರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ನಿನ್ನೆ { ಜೂನ್ 12 } ತಡರಾತ್ರಿ ಕರಿಷ್ಮಾ ಕಪೂರ್ ಅವರ ಮನೆಗೆ ಕರೀನಾ ಕಪೂರ್, ಸೈಫ್ ಅಲಿ ಖಾನ್, ಮಲೈಕಾ ಅರೋರಾ, ಅಮೃತಾ ಅರೋರಾ ಭೇಟಿ ನೀಡಿದ್ದಾರೆ. ಕರಿಷ್ಮಾ ಕಪೂರ್ ಅವರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ.

More from Filmibeat

English summary
Karisma Kapoor's ex-husband Sunjay Kapur dies at 53 from a heart attack. Learn about the sudden passing of the industrialist.
Read more about: death karishma kapoor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X