ಬಾಲಿವುಡ್‌ನ ಕುಬೇರ ಮೂಲೆಯಲ್ಲಿ ಮನೆ ಖರೀದಿಸಿದ ತೃಪ್ತಿ ದಿಮ್ರಿ..!

ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಚಿತ್ರವೊಂದು ಬ್ಲಾಕ್ ಬಸ್ಟರ್ ಆದರೆ ಸಾಕು ಹಣದ ಮಳೆ ಬೀಳುತ್ತೆ, ಹೇಗೋ ಇದ್ದ ಬದುಕು ಇನ್ನ್ಹೇಗೋ ಬದಲಾಗುತ್ತೆ ಎಂಬುದಕ್ಕೆ ತೃಪ್ತಿ ದಿಮ್ರಿ ಅತ್ಯುತ್ತಮ ಉದಾಹರಣೆ.

ಹೌದು, ಅನಿಮಲ್ ಚಿತ್ರದ ಮೂಲಕ, ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ತೃಪ್ತಿ ದಿಮ್ರಿಗೆ ಮುಂಬೈನ ಕುಬೇರ ಮೂಲೆಯಲ್ಲಿ ಹೊಚ್ಚ ಹೊಸ ಐಶಾರಾಮಿ ಬಂಗಲೇಯನ್ನ ಖರೀದಿಸಿದ್ದಾರೆ. ಅದು.. ಒಂದಲ್ಲ.. ಎರಡಲ್ಲ.. ಬರೋಬ್ಬರಿ ಹದಿನಾಲ್ಕು ಕೋಟಿ ಹಣ ನೀಡಿ ಅನ್ನುವುದು ಈ ಕ್ಷಣದ ವಿಶೇಷ.

tripti-dimri-famed-for-her-role-in-animal-secures-a-mumbai-bandra-bungalow-at-14-crore

2,226 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಬಂಗಲೆ 2,194 ಚದರ ಅಡಿಗಳಲ್ಲಿ ನಿರ್ಮಾಣಗೊಂಡಿದೆ. ಜೂನ್ 3ರಂದು ಈ ಮನೆಯ ರಿಜಿಸ್ಟ್ರೇಶನ್ ಪ್ರಕ್ರಿಯೆ ನಡೆದಿದ್ದು, ತೃಪ್ತಿ ದಿಮ್ರಿ ಈ ಮನೆ ಖರೀದಿ ವೇಳೆ 70 ಲಕ್ಷ ರೂಪಾಯಿ ಮೊತ್ತವನ್ನು ಸ್ಟಾಂಪ್ ಡ್ಯೂಟಿಗೆ ನೀಡಿದ್ದಾರೆ. ಇನ್ನು ರಿಜಿಸ್ಚ್ರೇಶನ್ ಶುಲ್ಕವಾಗಿ 30,000 ರೂಪಾಯಿ ನೀಡಿದ್ದಾರೆ ಎಂದು ಬಾಲಿವುಡ್‌ ಅಚ್ಚರಿಯಿಂದ ಮಾತನಾಡಿಕೊಳ್ಳುತ್ತಿದೆ.

ಇನ್ನೂ ತೃಪ್ತಿ ದಿಮ್ರಿಯ ಈ ಐಶಾರಾಮಿ ಮನೆ ಮುಂಬೈನ ಬಾಂದ್ರಾ ಪಶ್ಚಿಮ ಪ್ರದೇಶದ ಕಾರ್ಟರ್ ರೋಡ್ ನಲ್ಲಿದೆ. ಬಾಲಿವುಡ್‌ನವರ ಪಾಲಿಗೆ ಇದು ಕುಬೇರ ಮೂಲೆ. ಇದಕ್ಕೆ ಕೈಗನ್ನಡಿ ಎಂಬಂತೆ ಈ ಏರಿಯಾದಲ್ಲಿ ಹಲವಾರು ಉದ್ಯಮಿಗಳ ಮತ್ತು ಸೆಲೆಬ್ರೆಟಿಗಳ ಮನೆಗಳಿವೆ.

tripti-dimri-famed-for-her-role-in-animal-secures-a-mumbai-bandra-bungalow-at-14-crore

ಕಳೆದ ವರ್ಷ ಬಾಲಿವುಡ್ ನಟಿ ಆಲಿಯಾ ಭಟ್ ಇದೇ ವೆಸ್ಟ್ ಬಾಂದ್ರಾದಲ್ಲಿ 37.80 ಕೋಟಿ ರೂಪಾಯಿಗೆ ಹೊಸ ಮನೆ ಖರೀದಿಸಿದ್ದರು. ಇತ್ತೀಚೆಗೆ ಕಾಜೋಲ್ ದೇವಗನ್ 16 ಕೋಟಿ ರೂಪಾಯಿ ನೀಡಿ ಮನೆ ಖರೀದಿಸಿದ್ದರು. ಜಾಹ್ನವಿ ಕಪೂರ್ಇ ಕೂಡ ಇದೇ ವೆಸ್ಟ್ ಬಾಂದ್ರಾದಲ್ಲಿ65 ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದರು. ಈ ದುಬಾರಿ ಮನೆಗಳ ಸಾಲಿನಲ್ಲಿ ಇದೀಗ ತೃಪ್ತಿ ದಿಮ್ರಿ ಮನೆ ಕೂಡ ಸೇರಿಕೊಂಡಿದೆ.

ಅಂದ್ಹಾಗೇ ಇದೆಲ್ಲವೂ ತೃಪ್ತಿ ಬದುಕಿನಲ್ಲಿ ಏಕಾಏಕಿಯಾಗಿಲ್ಲ. ಈ ಹಣ-ಕೀರ್ತಿ-ಅಂತಸ್ತಿನ ಹಿಂದೆ ವರ್ಷಾನು ವರ್ಷಗಳ ಶ್ರಮ ಇದೆ. ಹೌದು ನಿಮಗೆ ಗೊತ್ತಿರಲಿ..2017ರಿಂದ ತೃಪ್ತಿ ದಿಮ್ರಿ ಇಂತಹದ್ದೊಂದು ದಿನಕ್ಕೆ ಕಾಯುತ್ತಿದ್ದರು. ಕನಸೆಂಬ ಕುದುರೆಯ ಬೆನ್ನೇರಿ ಬಾಲಿವುಡ್‌ನಲ್ಲಿ ಅವಕಾಶಗಳನ್ನ ಹುಡುಕುತ್ತಿದ್ದರು. ಇದಕ್ಕೆ ಪೂರಕವಾಗಿ ಮೊದಲ ಚಿತ್ರದಲ್ಲಿಯೇ ಶ್ರೀದೇವಿ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಕೂಡ ತೃಪ್ತಿಗೆ ಸಿಕ್ಕಿತ್ತು. ಆದರೆ ಜನ ಗುರುತಿಸಲಿಲ್ಲ.

tripti-dimri-famed-for-her-role-in-animal-secures-a-mumbai-bandra-bungalow-at-14-crore

ಆ ನಂತರ ಪೋಸ್ಟರ್ ಬಾಯ್ಸ್ ಚಿತ್ರದಲ್ಲಿ ತೃಪ್ತಿ ನಾಯಕಿಯ ಪಾತ್ರವನ್ನ ನಿರ್ವಹಿಸಿದರಾದರೂ ಜನ ಮನ್ನಣೆ ಸಿಗಲಿಲ್ಲ. ಇಮ್ತಿಯಾಜ್ ಅಲಿ ನಿರ್ಮಾಣದ ಲೈಲಾ ಮಜ್ನು ಚಿತ್ರಕ್ಕೆ ನಾಯಕಿಯಾದರೂ ಕೂಡ ಯಾರೊಬ್ಬರು ತೃಪ್ತಿಯ ಕಡೆ ನೋಡಲಿಲ್ಲ. ಹಾಗಂಥ ತೃಪ್ತಿ ಕುಗ್ಗಲಿಲ್ಲ. ಮರಳಿ ಮನೆ ಕಡೆ ಮುಖ ಮಾಡಲಿಲ್ಲ. ಇವತ್ತಲ್ಲ, ನಾಳೆ ಪರಿಶ್ರಮಕ್ಕೆ ಫಲ ಸಿಗುತ್ತೆ ಎಂದು ಅವಕಾಶಗಳ ಬೇಟೆಯಾಡುತ್ತಾನೇ ಬಂದರು. ಕೊನೆಗೂ ಪಟ್ಟಕಷ್ಟಕ್ಕೆ ಈಗ ಪ್ರತಿಫಲ ಸಿಕ್ಕಿದೆ.

ಇಂಥಾ ತೃಪ್ತಿ ದಿಮ್ರಿ ಸದ್ಯಕ್ಕೆ ಭೂಲ್ ಭುಲಯ್ಯ 03 ಕಿಯಾರಾ ಅಡ್ವಾಣಿಗೆ ಸೆಡ್ಡು ಹೊಡೆದು ನಾಯಕಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಕೈಯಲ್ಲಿ ಕರಣ್ ಜೋಹರ್ ನಿರ್ಮಾಣದಲ್ಲಿ ಬರಲಿರುವ ಧಡಕ್-02 ಕೂಡ ಇದೆ. ಇನ್ನೂ ಪುಷ್ಪಾ 2ದಲ್ಲಿ ಕೂಡ ತೃಪ್ತಿ ದಿಮ್ರಿ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಅನ್ನುವ ಸುದ್ದಿಯೂ ಇದೆ.

ಇವಷ್ಟೇ ಅಲ್ಲ ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ ಮತ್ತು ವಿಕ್ಕಿ ಕುಶಾಲ್ ಅಭಿನಯದ ಬ್ಯಾಡ್ ನ್ಯೂಸ್‌ ಚಿತ್ರಗಳಲ್ಲಿ ಕೂಡ ತೃಪ್ತಿ ದಿಮ್ರಿಯೇ ನಾಯಕಿ. ಹೀಗೆ ಸದ್ಯ ಕೈ ತುಂಬಾ ಅವಕಾಶಗಳನ್ನ ಹೊಂದಿರುವ ತೃಪ್ತಿ ಸದ್ಯಕ್ಕೆ 14 ಕೋಟಿ ಮನೆ ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನವರ ಹುಬ್ಬೇರಿಸಿದ್ದಾರೆ.

More from Filmibeat

English summary
Animal Fame Tripti Dimri makes headlines as she steps into Mumbai's elite circle with a luxurious bungalow acquisition valued at Rs 14 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X