ತೃಪ್ತಿ ದಿಮ್ರಿ ಅದೃಷ್ಟ 'ಆನಿಮಲ್ 'ನಲ್ಲಿತ್ತು ; ಹೊಡೆಯಿತು ಬಂಪರ್ ಲಾಟರಿ..!

ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ತೃಪ್ತಿ ದಿಮ್ರಿ ಅತ್ಯುತ್ತಮ ಉದಾಹರಣೆ.
ಹೌದು, ಆನಿಮಲ್ ಚಿತ್ರದ ಮೂಲಕ, ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಬೇಡಿಕೆ ಸೃಷ್ಟಿಸಿಕೊಂಡ ತೃಪ್ತಿ ದಿಮ್ರಿಗೆ ಇದೀಗ ಲಾಟರಿ ಹೊಡೆದಿದೆ. ಬಾಲಿವುಡ್ ನಲ್ಲಿ ತೃಪ್ತಿಗೆ ಅವಕಾಶ ಹೆಬ್ಬಾಗಿಲು ತೆರೆದಿದೆ.

ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭುಲಯ್ಯ ಭಾಗ 03ರಲ್ಲಿ ತೃಪ್ತಿ ಬಣ್ಣ ಹಚ್ಚುತ್ತಿದ್ದಾರೆ. ಅದು ಸೈಡ್ ರೋಲ್ ಪಾತ್ರಕ್ಕೆ ಅಲ್ಲ ಬದಲಿಗೆ ನಾಯಕಿಯ ಪಾತ್ರಕ್ಕೆ. ಇನ್ನೂ ವಿಶೇಷ ಅಂದರೆ ಭೂಲ್ ಭುಲಯ್ಯ ಭಾಗ 02ರಲ್ಲಿ ಕಿಯಾರ ಅಡ್ವಾನಿ ಹೀರೋಯಿನ್ ಪಾತ್ರ ನಿರ್ವಹಿಸಿದ್ದರು. ಅವರನ್ನ ಈಗ ಬಣ್ಣದ ಬದುಕಿನಲ್ಲಿ ಈಗಷ್ಟೇ ಕಣ್ಣು ಬಿಡ್ತಿರುವ ತೃಪ್ತಿ ದಿಮ್ರಿ ರಿಪ್ಲೇಸ್ ಮಾಡಿದ್ದಾರೆ. ತೃಪ್ತಿಯ ಖುಷಿ ಹೆಚ್ಚಾಗಲು ಇದಕ್ಕಿಂತ ಕಾರಣ ಬೇಕಾ..?

Triptii Dimri replaces Kiara Advani in Kartik Aaryans horror comedy

2017ರಿಂದ ಬ್ರೇಕ್ ಗಾಗಿ ಕಾಯುತ್ತಿದ್ದ ತೃಪ್ತಿ..!

ಇಂಥಹದ್ದೊಂದು ದಿನಕ್ಕಾಗಿ ತೃಪ್ತಿ ದಿಮ್ರಿ 2017ರಿಂದ ಕಾಯ್ತಿದ್ದರು. ಆದರೆ ಯೋಗ ಕೂಡಿ ಬಂದಿರಲಿಲ್ಲ. ಮೊದಲ ಚಿತ್ರದಲ್ಲಿಯೇ ಶ್ರೀದೇವಿ ಜೊತೆ ಕಾಣಿಸಿಕೊಂಡರು ಜನ ಗುರುತಿಸಲಿಲ್ಲ. ಆ ನಂತರ ಪೋಸ್ಟರ್ ಬಾಯ್ಸ್ ಚಿತ್ರದಲ್ಲಿ ತೃಪ್ತಿ ನಾಯಕಿಯ ಪಾತ್ರವನ್ನ ನಿರ್ವಹಿಸಿದರಾದರೂ ಜನ ಮನ್ನಣೆ ಸಿಗಲಿಲ್ಲ.

ಇಮ್ತಿಯಾಜ್ ಅಲಿ ನಿರ್ಮಾಣದ ಲೈಲಾ ಮಜ್ನು ಚಿತ್ರಕ್ಕೆ ನಾಯಕಿಯಾದರೂ ಕೂಡ ಯಾರೊಬ್ಬರು ತೃಪ್ತಿಯ ಕಡೆ ನೋಡಲಿಲ್ಲ. ಹಾಗಂಥ ತೃಪ್ತಿ ಕುಗ್ಗಲಿಲ್ಲ. ಮರಳಿ ಮನೆ ಕಡೆ ಮುಖ ಮಾಡಲಿಲ್ಲ. ಇವತ್ತಲ್ಲ, ನಾಳೆ ಪರಿಶ್ರಮಕ್ಕೆ ಫಲ ಸಿಗುತ್ತೆ ಎಂದು ಅವಕಾಶಗಳ ಬೇಟೆಯಾಡುತ್ತಾನೇ ಬಂದರು. ಕೊನೆಗೂ ಪಟ್ಟಕಷ್ಟಕ್ಕೆ ಈಗ ಪ್ರತಿಫಲ ಸಿಕ್ಕಿದೆ.

Triptii Dimri replaces Kiara Advani in Kartik Aaryans horror comedy

ಭೂಲ್ ಭುಲಯ್ಯ 03ರಲ್ಲಿ ಇದ್ದಾರೆ ವಿದ್ಯಾ ಬಾಲನ್..!

ಕೊಟ್ಟ ಪಾತ್ರಗಳನ್ನ ಶ್ರದ್ಧೆಯಿಂದ ನಿರ್ವಹಿಸಿ ಸೈ ಅನಿಸಿಕೊಳ್ಳುವ ವಿದ್ಯಾ ಬಾಲನ್ ಕೂಡ, ಭೂಲ್ ಭುಲಯ್ಯ ಪ್ರಾಂಚೈಸಿಗೆ ಮರಳಿದ್ದಾರೆ. ಭೂಲ್ ಭುಲಯ್ಯ 03ರಲ್ಲಿ ಮಂಜುಲಿಕಾ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಇನ್ನೂ ಚಿತ್ರದ ಕಥಾನಾಯಕ ಕಾರ್ತಿಕ್ ಆರ್ಯನ್ ಮುಟ್ಟಿದ್ದೆಲ್ಲ ಚಿನ್ನ ಆಗ್ತಿದೆ. ಭೂಲ್ ಭುಲಯ್ಯ 02 ಕಾರ್ತಿಕ್ ಆರ್ಯನ್ ಗೆ ನೂರು ಕೋಟಿಯ ಸರದಾರ ಎಂಬ ಪಟ್ಟವನ್ನೂ ತಂದು ಕೊಟ್ಟಿದೆ.

ಈ ಎಲ್ಲ ಕಾರಣಗಳಿಂದ ತೃಪ್ತಿಗೆ ಇದು ಬಹುದೊಡ್ಡ ಸುವರ್ಣ ಅವಕಾಶ. ಸಿಕ್ಕ ಈ ಅವಕಾಶವನ್ನ ತೃಪ್ತಿ ಸಮರ್ಥವಾಗಿ ಬಳಿಸಿಕೊಂಡಿದ್ದೇ ಆದಲ್ಲಿ ತೃಪ್ತಿ ದಿಮ್ರಿ ಭವಿಷ್ಯದಲ್ಲಿ ಬಿಡುವಿರದ ನಟಿಯಾಗಿ ಹೊರ ಹೊಮ್ಮುವ ಎಲ್ಲ ಸಾಧ್ಯತೆ ಇದೆ. ಆ ಅರ್ಹತೆ ತೃಪ್ತಿ ದಿಮ್ರಿಗೆ ಇದೆ.

More from Filmibeat

English summary
Animal fame Tripti Dimri comes on board for Kartik Aaryan's horror-comedy Bhool Bhulaiyaa 3
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X