For Quick Alerts
  ALLOW NOTIFICATIONS  
  For Daily Alerts

  ಬಾಯ್‌ಫ್ರೆಂಡ್ ಮರಣದ ಬಗ್ಗೆ ಪ್ರಶ್ನಿಸಿದವರಿಗೆ ಸಂಜಯ್ ದತ್ ಮಗಳ ಖಡಕ್ ಉತ್ತರ

  |

  ಬಾಲಿವುಡ್ ನಟ ಸಂಜಯ್ ದತ್ ಮಗಳು ತ್ರಿಶಾಲಾ ದತ್‌ಳ ಬಾಯ್‌ಫ್ರೆಂಡ್ 2019 ರಲ್ಲಿ ಅಚಾನಕ್ಕಾಗಿ ಮರಣ ಹೊಂದಿದ್ದರು. ಆತನ ನೆನಪಿನಿಂದ ಇನ್ನೂ ಹೊರಬರದ ತ್ರಿಶಾಲಾ ದತ್ ಆಗಾಗ್ಗೆ ಬಾಯ್‌ಫ್ರೆಂಡ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

  ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುವ ತ್ರಿಶಾಲಾಗೆ ಇತ್ತೀಚೆಗೆ ಒಬ್ಬರು, 'ನಿಮ್ಮ ಬಾಯ್‌ಫ್ರೆಂಡ್ ಮರಣಿಸಿದ್ದು ಹೇಗೆ?' ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆ ತ್ರಿಶಾಲಾಗೆ ಅಹಿತವೆನಿಸಿದೆ. ಪ್ರಶ್ನೆಗೆ ತುಸು ಸಿಡುಕಿನಿಂದಲೇ ಉತ್ತರಿಸಿದ್ದಾರೆ ಅವರು.

  ಬಾಲಿವುಡ್ ನಟ ಸಂಜಯ್ ದತ್ ಮಾದಕ ವಸ್ತು ವ್ಯಸನದ ಬಗ್ಗೆ ಪುತ್ರಿ ತ್ರಿಶಾಲಾ ದತ್ ಹೇಳಿದ್ದೇನು?ಬಾಲಿವುಡ್ ನಟ ಸಂಜಯ್ ದತ್ ಮಾದಕ ವಸ್ತು ವ್ಯಸನದ ಬಗ್ಗೆ ಪುತ್ರಿ ತ್ರಿಶಾಲಾ ದತ್ ಹೇಳಿದ್ದೇನು?

  'ನನ್ನ ಉತ್ತರ ನಿಮಗೆ ಒರಟು ಅನ್ನಿಸಬಹುದು ಹಾಗಾಗಿ ಮೊದಲಿಗೆ ಕ್ಷಮೆ ಕೇಳುತ್ತೇನೆ, ನಿಮ್ಮ ಪ್ರಶ್ನೆಯಿಂದ ನನಗೆ ಬೇಸರವೇನೂ ಆಗಿಲ್ಲ ಆದರೆ ಈ ರೀತಿಯ ಸಾಮಾನ್ಯ ವರ್ತನೆಗಳ ಬಗ್ಗೆ ತುಸು ಮಾಹಿತಿ ನೀಡಲು ಬಯಸುತ್ತೇನೆ' ಎಂದು ಉತ್ತರ ಆರಂಭಿಸಿದ್ದಾರೆ.

  'ಯಾರಾದರೂ ಮರಣಿಸಿದಾಗ ಸಾವು ಹೇಗಾಯಿತು ಎಂದು ತಿಳಿದುಕೊಳ್ಳುವುದು ಮಾನವನ ಸಹಜ ವರ್ತನೆ. ಆ ವಿಷಯ ನಮಗೆ ಸಂಬಂಧಿಸಿಲ್ಲದಿದ್ದರೂ ನಾವು ಅದರ ಬಗ್ಗೆ ಕುತೂಹಲಿಗಳಾಗಿರುತ್ತೇವೆ. ಆದರೆ ವ್ಯಕ್ತಿಯೊಬ್ಬನ ಸಾವು ಹೇಗಾಗಿದೆಯೆಂದು ನಿಮಗೆ ಗೊತ್ತಿಲ್ಲವೆಂದರೆ ಮರಣಿಸಿದ ವ್ಯಕ್ತಿಗೆ, ಮರಣಿಸಿದ ವ್ಯಕ್ತಿಯ ಹತ್ತಿರದವರಿಗೆ ನೀವು ಹತ್ತಿರದವರಲ್ಲವೆಂದೇ ಅರ್ಥ. ಆಪ್ತರಲ್ಲದಿದ್ದರೂ ಹೀಗೆ ಪ್ರಶ್ನೆ ಕೇಳುವುದು ಆ ವ್ಯಕ್ತಿಯ ಖಾಸಗಿತನದಲ್ಲಿ ಮೂಗು ತೂರಿಸಿದಂತೆ' ಎಂದಿದ್ದಾರೆ ತ್ರಿಶಾಲಾ.

  'ಸಾವು ಹೇಗೆ ಸಂಭವಿಸಿತು ಎಂದು ಎಲ್ಲರೂ ಸಾಮಾನ್ಯವಾಗಿ ಕೇಳುತ್ತಾರೆ. 'ಸಾವಿನ ಕಾರಣ ತಿಳಿದ ಬಳಿಕ ಆತನ ಹತ್ತಿರದವರಿಗೆ ನಾನು ಏನಾದರೂ ಸಹಾಯ ಮಾಡಬಲ್ಲೆನೆ. ಇಲ್ಲವಾದರೆ ಕೇವಲ ಅಸ್ವಸ್ಥ ಕುತೂಹಲದಿಂದ ಮಾತ್ರವೇ ಪ್ರಶ್ನೆ ಕೇಳುತ್ತಿದ್ದೇನೆಯೇ? ಎಂದು ನೀವೇ ನಿಮ್ಮನ್ನು ಕೇಳಿಕೊಳ್ಳಿ' ಎಂದು ಸಲಹೆ ನೀಡಿದ್ದಾರೆ ತ್ರಿಶಾಲಾ.

  'ಈ ರೀತಿಯ ಪ್ರಶ್ನೆಗಳನ್ನು ಕೇಳುವುದರಿಂದ ದುಃಖದಲ್ಲಿರುವ ವ್ಯಕ್ತಿಗೆ ಸಮಾಧಾನವಾಗಲಾರದು. ಮರಣ ಹೊಂದಿದ ವ್ಯಕ್ತಿಯನ್ನು ಮರಳಿ ಸಹ ಕರೆತರಲಾರಿರಿ' ಎಂದಿದ್ದಾರೆ ತ್ರಿಶಾಲಾ.

  ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ಭೇಟಿಯಾದ ನಟ ಕಿಚ್ಚ ಸುದೀಪ್ | Filmibeat Kannada

  ಸಂಜಯ್ ದತ್ ರ ಮೊದಲ ಪತ್ನಿ ರಿಚಾ ಶರ್ಮಾರ ಮಗಳು ತ್ರಿಶಾಲಾ ದತ್. ಅಮೆರಿಕದಲ್ಲಿ ನೆಲೆಸಿರುವ ತ್ರಿಶಾಲಾ ಇಟಾಲಿಯನ್ ಯುವಕನೊಂದಿಗೆ ಪ್ರೀತಿಯಲ್ಲಿದ್ದರು. ಆದರೆ 2019 ರಲ್ಲಿ ಅಚಾನಕ್ಕಾಗಿ ಆತ ಮರಣ ಹೊಂದಿದ. ತ್ರಿಶಾಲಾ ಎಂಟು ವರ್ಷ ವಯಸ್ಸಿನವರಾಗಿದ್ದಾಗಲೇ ಆಕೆಯ ತಾಯಿ ರಿಚಾ ಶರ್ಮಾ ಮರಣಿಸಿದರು.

  English summary
  Sanjay Dutt's daughter Trishala Dutt gave wonderful answer to Instagram user who asked about her boyfriend's death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X