For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟ ಸಂಜಯ್ ದತ್ ಮಾದಕ ವಸ್ತು ವ್ಯಸನದ ಬಗ್ಗೆ ಪುತ್ರಿ ತ್ರಿಶಾಲಾ ದತ್ ಹೇಳಿದ್ದೇನು?

  |

  ಸಂಜಯ್ ದತ್ ಅವರ ಹಿರಿಯ ಪುತ್ರಿ ತ್ರಶಾಲಾ ದತ್ ಸಿನಿಮಾರಂಗದಿಂದ ದೂರ ಇದ್ದಾರೆ. ಆದರೂ ಅಭಿಮಾನಿಗಳಿಗೆ ತ್ರಿಶಾಲಾ ದತ್ ಪರಿಚಯವಿದೆ. ತ್ರಿಶಾಲಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀಟ್ ಆಗಿದ್ದಾರೆ. ಆಗಾಗ ಫೋಟೋಗಳನ್ನು, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತ್ರಿಶಾಲಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾರೆ.

  ಇತ್ತೀಚಿಗೆ ತ್ರಿಶಾಲಾ 'ಆಸ್ಕ್ ಮಿ ಎನಿಥಿಂಗ್' ಎಂದು ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದರು. ತ್ರಿಶಾಲಾಗೆ ಅಭಿಮಾನಿಗಳು ಮತ್ತು ಫಾಲೋವರ್ಸ್ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಭಿಮಾನಿಯೊಬ್ಬ 'ನಿಮ್ಮ ತಂದೆಯ ಮಾದಕ ವಸ್ತು ವ್ಯಸನದ ಬಗ್ಗೆ ಹೇಳಿ' ಎಂದು ಕೇಳಿಕೊಂಡಿದ್ದಾರೆ.

  ಸಂಜಯ್ ದತ್ ಕೊಟ್ಟಿದ್ದ 100 ಕೋಟಿ ಮೌಲ್ಯದ ಆಸ್ತಿ ಹಿಂದಿರುಗಿಸಿದ ಪತ್ನಿಸಂಜಯ್ ದತ್ ಕೊಟ್ಟಿದ್ದ 100 ಕೋಟಿ ಮೌಲ್ಯದ ಆಸ್ತಿ ಹಿಂದಿರುಗಿಸಿದ ಪತ್ನಿ

  ಮಾದಕ ವಸ್ತು ವ್ಯಸನಿಯಾಗಿದ್ದರು ಸಂಜಯ್ ದತ್

  ಮಾದಕ ವಸ್ತು ವ್ಯಸನಿಯಾಗಿದ್ದರು ಸಂಜಯ್ ದತ್

  ಸಂಜಯ್ ದತ್ ಮಾದಕ ವಸ್ತು ವ್ಯಸನಿ ಆಗಿದ್ದರು ಎನ್ನುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಮಾದಕ ವಸ್ತು ಸಂಜಯ್ ದತ್ ಜೀವನವನ್ನು ನರಕದ ಕೂಪಕ್ಕೆ ತಳ್ಳಿತ್ತು. ಕಠಿಣ ಹೋರಾಟದ ಬಳಿಕ ಸಂಜಯ್ ದತ್ ಮಾದಕ ವಸ್ತು ಚಟದಿಂದ ಹೊರಬಂದಿದ್ದಾರೆ. ಈ ಬಗ್ಗೆ ಮಾತನಾಡಿರು ತ್ರಿಶಾಲಾ ಅಪ್ಪ ಆ ಸಮಸ್ಯೆಯನ್ನು ಒಪ್ಪಿಕೊಂಡು, ಅದರಿಂದ ಹೊರ ಬಂದ ಬಗ್ಗೆ ಹೆಮ್ಮೆಯಾಗುತ್ತೆ ಎಂದು ಹೇಳಿದ್ದಾರೆ.

  ಪ್ರತಿದಿನ ಹೋರಾಡಬೇಕಾದ ರೋಗ- ತ್ರಿಶಾಲಾ

  ಪ್ರತಿದಿನ ಹೋರಾಡಬೇಕಾದ ರೋಗ- ತ್ರಿಶಾಲಾ

  'ನನ್ನ ತಂದೆ ಮಾದಕ ವಸ್ತು ವ್ಯಸನಿಯಾಗಿರುವ ಬಗ್ಗೆ ಹೇಳುವುದಾದರೆ, ಅವರು ಅದರಿಂದ ಯಾವಾಗಲು ಚೇತರಿಸಿಕೊಳ್ಳುತ್ತಾರೆ. ಪ್ರತಿದಿನ ಹೋರಾಡಬೇಕಾದ ರೋಗ. ಅವರು ಇನ್ಮುಂದೆ ಬಳಸದಿದ್ದರೂ, ಅವರು ಅದನ್ನು ಒಪ್ಪಿಕೊಂಡಿದ್ದಕ್ಕಾಗಿ ಮತ್ತು ಅದರಿಂದ ಹೊರಬಂದಿರುವ ಬಗ್ಗೆ ನನಗೆ ಹೆಮ್ಮೆ ಇದೆ. ಇದರಲ್ಲಿ ನಾಚಿಕೆಪಡಲು ಏನು ಇಲ್ಲ' ಎಂದು ಹೇಳಿದ್ದಾರೆ.

  'KGF-2' ಅಧೀರ ಪಾತ್ರಕ್ಕೆ ಅವಕಾಶ ಸಿಕ್ಕಾಗ ಸಂಜಯ್ ದತ್ ಮೊದಲ ಪ್ರತಿಕ್ರಿಯೆ ಹೀಗಿತ್ತು'KGF-2' ಅಧೀರ ಪಾತ್ರಕ್ಕೆ ಅವಕಾಶ ಸಿಕ್ಕಾಗ ಸಂಜಯ್ ದತ್ ಮೊದಲ ಪ್ರತಿಕ್ರಿಯೆ ಹೀಗಿತ್ತು

  ಕ್ಯಾನ್ಸರ್ ಗೆದ್ದಿರುವ ಮುನ್ನಾಭಾಯ್

  ಕ್ಯಾನ್ಸರ್ ಗೆದ್ದಿರುವ ಮುನ್ನಾಭಾಯ್

  ಸಂಜಯ್ ದತ್ ಗೆ 4ನೇ ಹಂತದ ಕ್ಯಾನ್ಸರ್ ಪತ್ತೆಯಾಗಿತ್ತು. ಕಳೆದ ವರ್ಷ ಕ್ಯಾನ್ಸರ್ ಇರುವುದು ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದ ಸಂಜಯ್ ದತ್ ಕ್ಯಾನ್ಸರ್ ಗೆದ್ದು ಹೊರಬಂದಿದ್ದಾರೆ. ಸಿನಿಮಾ ಕೆಲಸಗಳಿಗೆ ಬ್ರೇಕ್ ಹಾಕಿದ್ದ ಸಂಜಯ್ ಸದ್ಯ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

  ಸಂಜಯ್ ದತ್ ದಾಂಪತ್ಯದಲ್ಲಿ ಮತ್ತೆ ಬಿರುಕು ಮೂಡಿದ್ಯಾ..? | Sanjay Dutt | Manyata Sanjay Dutt
  ಅಧೀರನನ್ನು ನೋಡಲು ಅಭಿಮಾನಿಗಳು ಕಾತರ

  ಅಧೀರನನ್ನು ನೋಡಲು ಅಭಿಮಾನಿಗಳು ಕಾತರ

  ಇತ್ತೀಚಿಗಷ್ಟೆ ಬಹು ನಿರೀಕ್ಷೆಯ ಕೆಜಿಎಫ್-2 ಚಿತ್ರೀಣದಲ್ಲೂ ಭಾಗಿಯಾಗಿ ತನ್ನ ಭಾಗದ ಚಿತ್ರೀಕರಣವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಸಂಜಯ್ ದತ್ ಗಾಗಿ ಚಿತ್ರತಂಡ ಅನೇಕ ಸಮಯ ಕಾದು ಕಳೆದ ವರ್ಷ ಕೊನೆಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಅದ್ದೂರಿಯಾಗಿ ಬೀಳ್ಕೊಟ್ಟಿದ್ದಾರೆ. ಕೆಜಿಎಫ್-2ನಲ್ಲಿ ಸಂಜಯ್ ದತ್ ಅಧೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಯಾನಕ ಪಾತ್ರದಲ್ಲಿ ಮಿಂಚಿರುವ ಅಧೀರ ಸಂಜಯ್ ದತ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  English summary
  Trishala Dutt talks about her father Sanjay Dutt's drug addiction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X