ಕಂಗನಾ ಟ್ವಿಟ್ಟರ್ ಖಾತೆ ಅಮಾನತಾದ ಬೆನ್ನಲ್ಲೇ ವೈರಲ್ ಆಗಿರುವ ಟ್ರೋಲ್‌ಗಳಿವು
ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಸಂಸ್ಥೆ ಅಮಾನತು ಮಾಡಿದೆ. ಮೈಕ್ರೋ ಬ್ಲಾಗಿಂಗ್ ಸೈಟ್ ನಿಯಮಗಳಿಗೆ ವಿರುದ್ಧವಾಗಿ ಪದಗಳನ್ನು ಬಳಸಿ ಟ್ವೀಟ್ ಮಾಡುತ್ತಿದ್ದ ಕಾರಣ ಸಸ್ಪೆಂಡ್ ಮಾಡಲಾಗಿದೆ.
Recommended Video
ಇತ್ತೀಚಿಗೆ ಕಂಗನಾ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಗಳನ್ನು ಮಾಡಿದ್ದರು. ಪ.ಬಂಗಾಳದ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಟಿ ಮಮತಾ ಬ್ಯಾನರ್ಜಿಯನ್ನು ಟೀಕಿಸಿದ್ದರು.
ಸಾಲು ಸಾಲು ಆಕ್ಷೇಪಾರ್ಹ ಟ್ವೀಟ್ ಗಳನ್ನು ಮಾಡುತ್ತಿದ್ದ ಕಂಗನಾ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಲಾಗಿದೆ. ಟ್ವಿಟ್ಟರ್ ಖಾತೆ ಅಮಾನತು ಬೆನ್ನಲ್ಲೇ ಕಂಗನಾ ಇನ್ಸ್ಟಾಗ್ರಾಮ್ ಮೂಲಕ ಕಣ್ಣೀರಾಕಿದ್ದಾರೆ. ಇದು ಪ್ರಜಾಪ್ರಭುತ್ವದ ಕೊಲೆ ಎಂದು ಹೇಳಿದ್ದಾರೆ.
ಟ್ವಿಟ್ಟರ್ ನಲ್ಲಿ ಕಂಗನಾ ಟ್ರೆಂಡಿಂಗ್ ನಲ್ಲಿದ್ದು, ನಟಿಯ ವಿರುದ್ಧ ಸಾಕಷ್ಟು ಟ್ರೋಲ್ ಗಳು ವೈರಲ್ ಆಗಿವೆ. ಟ್ರೋಲ್ ಪೇಜ್ ಗಳಲ್ಲಿ ಕಂಗನಾ ಬಗ್ಗೆ ತರಹೇವಾರಿ ಟ್ರೋಲ್ ಗಳು ಹರಿದಾಡುತ್ತಿವೆ. ಮುಂದೆ ಓದಿ..

ಚಪ್ಪಲಿಯಲ್ಲಿ ಹೊಡೆಯುತ್ತಿರುವ ಫೋಟೋ
ಕತ್ತೆಗೆ ಚಪ್ಪಲಿ, ಕಲ್ಲಿನಿಂದ ಹೊಡೆದು ಒಡಿಸುತ್ತಿರುವ ಟ್ರೋಲ್ ನೆಟ್ಟಿಗರ ಗಮನ ಸೆಳೆಯುತ್ತಿದೆ. ಅದರಲ್ಲೂ ಹವಾಯಿ ಚಪ್ಪಲಿಯಿಂದ ಟ್ವಿಟ್ಟರ್ ಸಂಸ್ಥೆ ಹೊಡೆದು ಓಡಿಸುತ್ತಿರುವ ಹಾಗೆ ಫೋಟೋ ಶೇರ್ ಮಾಡಿ, ಕಂಗನಾ ಸ್ಥಿತಿ ಹೀಗೆ ಆಗಿದೆ ಎಂದು ನೆಟ್ಟಿಗನೊಬ್ಬ ಟ್ವೀಟ್ ಮಾಡಿದ್ದಾರೆ.

ನಾಯಿಗೆ ಹೋಲಿಸಿದ ನೆಟ್ಟಿಗರು
ಮತ್ತೊಂದು ಟ್ವೀಟ್ ನಲ್ಲಿ ಕಚ್ಚಲು ಬರುತ್ತಿರುವ ನಾಯಿಯನ್ನು ಚಪ್ಪಲಿಯಿಂದ ಹೊಡೆದು ಹೋಡಿಸುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ನಾಯಿಗೆ ಕಂಗನಾ ಎಂದು ಕ್ಯಾಪ್ಷನ್ ಹಾಕಿದ್ರೆ, ಚಪ್ಪಲಿಗೆ ಟ್ವಿಟ್ಟರ್ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಫೋಟೋ ಸೇರ್ ಮಾಡಿ ಇದಕ್ಕೆ ಕ್ಯಾಪ್ಷನ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ನಾಯಿಯನ್ನು ಹಿಡಿದು ತುಂಬಲಾಗುತ್ತಿದೆ
ನಾಯಿಯನ್ನು ಹಿಡಿದು ಪೊಲೀಸ್ ವ್ಯಾನ್ ನಲ್ಲಿ ತುಂಬುತ್ತಿರುವ ಫೋಟೋ ಕೂಡ ಟ್ವಿಟ್ಟರ್ ನಲ್ಲಿ ಗಮನ ಸೆಳೆಯುತ್ತಿದೆ. ನಾಯಿಗೆ ಕಂಗನಾ ಅಕೌಂಟ್ ಎಂದು ಬರೆದಿದ್ದಾರೆ. ಇಬ್ಬರು ಈ ನಾಯಿಯನ್ನು ಹಿಡಿದು ಒಳಗೆ ತುಂಬುತ್ತಿದ್ದಾರೆ.

ಮಮತಾ ಬ್ಯಾನರ್ಜಿ-ಹೃತಿಕ್ ಫೋಟೋ ವೈರಲ್
ಇನ್ನು ಅನೇಕರು ಮಮತಾ ಬ್ಯಾನರ್ಜಿ ಮತ್ತು ಹೃತಿಕ್ ರೋಷನ್ ಫೋಟೋ ಶೇರ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಹೃತಿಕ್, ಮಮತಾ ಬ್ಯಾನರ್ಜಿ ಭೇಟಿಯಾಗಿದ್ದ ಹಳೆಯ ಫೋಟೋವನ್ನು ನೆಟ್ಟಿಗರು ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಕಂಗನಾ ಮತ್ತು ಹೃತಿಕ್ ನಡುವಿನ ವಿವಾದ ತಾರಕ್ಕೇರಿದ್ದ ಬಗ್ಗೆ ಮತ್ತೀಗ ವಿವರಣೆ ನೀಡಬೇಕಿಲ್ಲ. ಏಕೆಂದರೆ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ದೀದಿ ಮತ್ತು ಹೃತಿಕ್ ಒಟ್ಟಿಗೆ ಇರುವ ಫೋಟೋ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ.

ಕಂಗನಾ ಟ್ವಿಟ್ಟರ್ ಅನ್ನು ಗಾರ್ಬೆಜ್ ಗೆ ಹೋಲಿಸಿದ ಟ್ರೋಲಿಗರು
ಕಂಗನಾ ಟ್ವಿಟ್ಟರ್ ಖಾತೆಯನ್ನು ಗಾರ್ಬೆಜ್ ಗೆ ಹೋಲಿದ್ದಾರೆ. ಟ್ವಿಟ್ಟರ್ ಖಾತೆ ಅಮಾನತು ಮಾಡಿದ ಬಳಿಕ ಸ್ವಚ್ಛವಾಗಿರುವ ನದಿಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ. ಎರಡು ಫೋಟೋಗಳನ್ನು ಹೋಲಿಕೆ ಮಾಡಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಲಾಗಿದೆ.

ಬರ್ನಲ್ ಕೊಡುತ್ತಿರುವ ಮೋದಿ
ಟ್ವಿಟ್ಟರ್ ಖಾತೆ ಅಮಾನತು ಮಾಡಿದ ಬಳಿಕ ಕಂಗನಾ ಕಣ್ಣೀರಿಟ್ಟಿದ್ದಾರೆ. ಟ್ರೋಲಿಗರು ನರೇಂದ್ರ ಮೋದಿ ಬರ್ನಲ್ ಹಿಡಿದು, ಬರ್ನಲ್ ತೆಗೆದುಕೊ ಎಂದು ಹೇಳುತ್ತಿರುವ ಫೋಟೋ ಗಮನ ಸೆಲೆಯುತ್ತಿದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಟ್ರೋಲ್ ಗಳು ಹರಿದಾಡುತ್ತಿದ್ದು, ಕಂಗನಾರನ್ನು ಅಮಾನತು ಮಾಡಿರುವುದನ್ನು ನೆಟ್ಟಿಗರು ಸಹ ಸಂಭ್ರಮಿಸುತ್ತಿದ್ದಾರೆ.


Click it and Unblock the Notifications











