ಸಂಸತ್ ಮುಂದೆ ಪೋಸ್ ನೀಡಿ ಟ್ರೋಲ್ ಆದ ಸೆಲೆಬ್ರಿಟಿ ಸಂಸದೆಯರು

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಲವು ಸಿನಿ ಕಲಾವಿದರು ಗೆದ್ದು ಸಂಸತ್ ಪ್ರವೇಶ ಮಾಡಿದ್ದಾರೆ. ಸನ್ನಿ ಡಿಯೋಲ್, ಹೇಮಾ ಮಾಲಿನಿ, ಸ್ಮೃತಿ ಇರಾನಿ, ರವಿ ಕಿಶನ್, ಮನೋಜ್ ತಿವಾರಿ, ಬಾಬುಲ್ ಸುಪ್ರಿಯೋ ಅಂತವರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಇವರುಗಳ ಮಧ್ಯೆ ನುಸ್ರತ್ ಜಹಾನ್, ಮಿಮಿ ಚಕ್ರಬೋರ್ತಿ, ನವ್ ನೀತ್ ಕೌರ್ ಎಂಬ ಅಂದದ ಚೆಲುವೆಯರು ಈ ಸಲ ಲೋಕಸಭೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸಂಸತ್ ನಲ್ಲೂ ವಾತಾವರಣ ಸ್ವಲ್ಪ ಹಾಟ್ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

ಈ ಮಧ್ಯೆ ಚುನಾವಣೆಯಲ್ಲಿ ಗೆಲುವು ಕಂಡಿರುವ ಇಬ್ಬರು ಯುವ ನಟಿಯರು ಸಂಸತ್ ಮುಂದೆ ಪೋಸ್ ಕೊಟ್ಟು ನೆಟ್ಟಿಗರಿಂದ ಟ್ರೋಲ್ ಗೆ ಒಳಗಾಗಿದ್ದಾರೆ. ಇದು ಸಂಸತ್ ಭವನ ಶೂಟಿಂಗ್ ಸ್ಥಳವಲ್ಲ ಎಂದು ಉಗಿಯುತ್ತಿದ್ದಾರೆ. ಅಷ್ಟಕ್ಕೂ ಆ ನಟಿಯರು ಯಾರು? ಅವರು ಮಾಡಿದ ತಪ್ಪಾದರೂ ಏನು? ಮುಂದೆ ಓದಿ.....

ಟಿಎಂಸಿ ನೂತನ ಸಂಸದೆಯರು

ಟಿಎಂಸಿ ನೂತನ ಸಂಸದೆಯರು

ಮಮತಾ ಬ್ಯಾನರ್ಜಿ ಸಾರಥ್ಯದ ತೃಣಮೂಲ ಕಾಂಗ್ರೆಸ್ ಪಕ್ಷದ ನೂತನ ಸಂಸದೆಯರಾಗಿ ಆಯ್ಕೆಯಾಗಿರುವ ನಟಿ ಮಿಮಿ ಚಕ್ರಬೋರ್ತಿ ಮತ್ತು ನುಸ್ರತ್ ಜಹಾನ್ ಇಬ್ಬರು ಸಂಸತ್ ಭವನದ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. 'ಇಂದು ನಾವು ಅಧಿಕೃತವಾಗಿ ಸಂಸತ್ ನಲ್ಲಿ ಸಂಸದೆಯರಾಗಿ ನಮ್ಮ ಹೆಸರನ್ನ ನಮೂಸಿದೆವು' ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಈ ಪೋಸ್ಟ್ ಈಗ ಟ್ರೋಲ್ ಆಗ್ತಿದೆ.

ಇದು ಶೂಟಿಂಗ್ ಸ್ಥಳವಲ್ಲ.!

ಇದು ಶೂಟಿಂಗ್ ಸ್ಥಳವಲ್ಲ.!

ಜಾಧವ್ ಪುರದ ಸಂಸದೆಯಾಗಿರುವ ಮಿಮಿ ಚಕ್ರಬೋರ್ತಿ ಜೀನ್ಸ್ ಪ್ಯಾಂಟ್ ಮತ್ತು ಬಿಳಿ ಬಣ್ಣದ ಶರ್ಟ್ ಹಾಕಿ ಸಂಸತ್ ಭವನದ ಮುಂದೆ ಪೋಸ್ ಕೊಟ್ಟಿರುವುದನ್ನ ನೆಟ್ಟಿಗರು ಖಂಡಿಸಿದ್ದಾರೆ. ಪಶ್ಚಿಮ ಬಂಗಾಳ ಮತ್ತೋರ್ವ ಟಿಎಂಸಿ ಸಂಸದೆ ನುಸ್ರತ್ ಜಹಾನ್ ವಿರುದ್ಧ ಕೂಡ ಟೀಕೆ ವ್ಯಕ್ತವಾಗಿದೆ. 'ಇದು ನಿಮ್ಮ ಸಿನಿಮಾ ಶೂಟಿಂಗ್ ಸ್ಥಳವಲ್ಲ. ಸಂಸತ್ ಭವನ್ ಮುಂದೆ ನಿಂತು ಹೇಗೆ ಪೋಸ್ ಕೊಡ್ತಿದ್ದೀರಾ?' ಎಂದು ಪ್ರಶ್ನಿಸಿದ್ದಾರೆ.

ಯಾವ ರೀತಿ ಡ್ರೆಸ್ ತೊಡಬೇಕು ಗೊತ್ತಿಲ್ವಾ?

ಯಾವ ರೀತಿ ಡ್ರೆಸ್ ತೊಡಬೇಕು ಗೊತ್ತಿಲ್ವಾ?

''ನಿಮಗೆ ಯಾವ ರೀತಿ ಡ್ರೆಸ್ ಹಾಕಬೇಕು ಎಂಬುದು ಗೊತ್ತಿಲ್ವಾ? ಇದು ಸಿನಿಮಾ ಶೂಟಿಂಗ್ ಅಥವಾ ನೀವು ಟೂರ್ ಗೆ ಹೋಗಿಲ್ಲ. ಇದು ಕೆಲಸದ ಸಮಯ'' ಎಂದು ಕಿಡಿಕಾರಿದ್ದಾರೆ. ಸಿನಿಮಾ ನಟಿಯರು ಎಂಬುದನ್ನ ಮರೆತು ರಾಜಕಾರಣಿಗಳ ರೀತಿ ನಡೆದುಕೊಳ್ಳಿ ಎಂದು ಕಾಲೆಳೆಯುತ್ತಿದ್ದಾರೆ.

ನಾಟಕ ಮಾಡಬೇಡಿ

ನಾಟಕ ಮಾಡಬೇಡಿ

'ಇದು ಸಂಸತ್ ಭವನ. ಇಲ್ಲಿ ನಾಟಕ ಮಾಡಬೇಡಿ. ಬಂಗಾಳದ ಮಾರ್ಯದೆ ಹೋಗುತ್ತೆ' ಎಂದು ಟೀಕಿಸಿದ್ದಾರೆ. ಇದೆಲ್ಲ ಮಾಡುವುದನ್ನ ನಿಲ್ಲಿಸಿ, ದುಡ್ಡಿನ ಹಿಂದೆ ಹೋಗುವುದು ಬಿಟ್ಟು ಸರಿಯಾಗಿ ವರ್ತಿಸಿ' ಎಂದು ಕೂಡ ಕಾಂಮೆಂಟ್ ಮಾಡಿದ್ದಾರೆ. ಇಂತಹ ಜೋಕರ್ ಗಳನ್ನ ಸಂಸತ್ ಗೆ ಆಯ್ಕೆ ಮಾಡಿರುವುದಕ್ಕೆ ಬಂಗಾಳದ ಪ್ರಜೆಗಳು ನಾಚಿಕೆ ಪಡಬೇಕು'' ಎಂದು ಕೂಡ ಕೆಲವರು ಬೈಯುತ್ತಿದ್ದಾರೆ.

More from Filmibeat

English summary
Trinamool congress new Mp's Mimi chakraborty and nusrat jahan trolled for posing in front of parliament.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X