ಓಟ್ಸ್ ತಿನ್ನೋಕೆ ಬೇಜಾರಾ?: ಒಮ್ಮೆ ನಟಿ ರಕುಲ್ ಪ್ರೀತ್ ಸಿಂಗ್ ಅವರ ಬನಾನಾ ಓಟ್ ಮೀಲ್ ಕುಕೀಸ್ ಟ್ರೈ ಮಾಡಿ!

ಆರೋಗ್ಯವಾಗಿರೋದು ಯಾರಿಗೆ ತಾನೇ ಇಷ್ಟವಿಲ್ಲ. ಆದರೆ ಇಷ್ಟ ಪಟ್ಟು ತಿನ್ನುವ ತಿಂಡಿಗಳನ್ನು ಬಿಟ್ಟು ಡಯಟ್ ಮಾಡೋದು ಕಷ್ಟನೇ ಅಲ್ವಾ? ಡಯಟ್‌ನಲ್ಲಿ ಹಲವು ಮಂದಿ ನ್ಯೂಟ್ರಿಷಿಯನ್ಸ್ ಹೇಳಿವುದು ಓಟ್ಸ್ ತಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಿ ಅಂತ. ಆದ್ರೆ, ಓಟ್ಸ್ ತಿನ್ನೋಕೆ ಇಷ್ಟ ಪಡೋರು ಯಾರು?

ಸೆಲಬ್ರಿಟಿಗಳು ಕೂಡ ತಮ್ಮ ಆಹಾರ ಇಂತಿಷ್ಟೇ ಪ್ರಮಾಣದಲ್ಲಿ ಇರಬೇಕು, ತಮ್ಮ ಊಟದಲ್ಲಿ ಏನು ಇರಬೇಕು, ಎಷ್ಟು ಪ್ರಮಾಣದಲ್ಲಿ ಇರಬೇಕು ಎಂದು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಕೆಲವು ತಾರೆಯರು ತಾವು ಇಷ್ಟಪಡುವ ತಿಂಡಿಗಳ ಬಗ್ಗೆ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ತಿಂಡಿ ಮಾಡುವ ವಿಧಾನ, ರೆಸಿಪಿಯನ್ನು ಶೇರ್ ಮಾಡಿಕೊಳ್ಳುತ್ತಾರೆ. ನಟಿ ರಕುಲ್ ಪ್ರೀತ್ ಸಿಂಗ್ ಕೂಡ ಸಕತ್ ಆಗಿರುವ ಓಟ್ಸ್ ಮಿಲ್ ರೆಸಿಪಿ ಶೇರ್ ಮಾಡಿದ್ದಾರೆ.

rakul-preet-singhs-banana-chocolate-oatmeal

ಬನಾನಾ ಚಾಕೊಲೇಟ್ ಓಟ್ ಮೀಲ್ ಕುಕೀ

ಕನ್ನಡದ ಗಿಲ್ಲಿ ಚಿತ್ರದಿಂದ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ರಕುಲ್ ಪ್ರೀತ್ ಸಿಂಗ್. ದಕ್ಷಿಣ ಭಾರತದ ಸಿನಿಮಾಗಳ ಜೊತೆಗೆ ಬಾಲಿವುಡ್‌ನಲ್ಲಿಯೂ ಮಿಂಚು ಹರಿಸಿದ ನಟಿ, ತನ್ನ ಫಿಟ್ನೆಸ್‌ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಆರೋಗ್ಯಕರವಾಗಿಯೂ, ಟೆಸ್ಟಿಯಾಗಿರು ಇರುವ ಆಹಾರಗಳನ್ನು ತೆಗೆದುಕೊಳ್ಳಬೇಕು ಎನ್ನುವ ಅವರು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಹಲವು ರೆಸಿಪಿಗಳನ್ನು ಶೇರ್ ಮಾಡುತ್ತಿರುತ್ತಾರೆ.

ಹೀಗೆ ಅವರು ಹಂಚಿಕೊಂಡ ಅನೇಕ ತಿಂಡಿಗಳಲ್ಲಿ ಹೆಚ್ಚು ವೈರಲ್ ಆಗಿದ್ದು ಬನಾನಾ ಚಾಕೊಲೇಟ್ ಓಟ್ ಮೀಲ್ ಕುಕೀಸ್ ರೆಸಿಪಿ. ಹೌದು ತುಂಬಾ ಹಿಂದೆಯೇ ನಟಿ ರಾಕುಲ್ ಈ ಬಿಸ್ಕತ್ ಮಾಡುವ ಸಂಪೂರ್ಣ ಪಾಕವಿಧಾನ ಹಂಚಿಕೊಂಡಿದ್ದರು. ಆದರೆ, ಇವತ್ತಿಗೂ ಅನೇಕ ವ್ಲಾಗರ್‌ಗಳು, ತಿಂಡಿ ಪ್ರಿಯರು ಇದನ್ನು ಟ್ರೈ ಮಾಡುತ್ತಿರುತ್ತಾರೆ. ಓಟ್ಸ್ ಅನ್ನು ಇಷ್ಟು ರುಚಿಯಾಗಿ ತಿನ್ನಲು ಹೇಳಿಕೊಟ್ಟ ರಕುಲ್ ಪ್ರೀತ್ ಸಿಂಗ್ ಅವರಿಗೆ ಧನ್ಯವಾದ ಹೇಳುತ್ತಾರೆ. ಹಾಗಾದ್ರೆ ಈ ಬಿಸ್ಕತ್‌ಗಳನ್ನು ಮಾಡುವುದು ಹೇಗೆ ಅನ್ನೋದನ್ನ ತಿಳಿಯೋಣ.

ಬನಾನಾ ಚಾಕೊಲೇಟ್ ಓಟ್ ಮೀಲ್ ಕುಕೀಸ್ ಮಾಡಲು ಬೇಕಾದ ಪದಾರ್ಥಗಳು

*ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳು: 2

*ಓಟ್ಸ್: 50 ಗ್ರಾಂ

*ಮ್ಯೂಸ್ಲಿ (ಬೇಕಿದ್ದರೇ ಹಾಕಿಕೊಳ್ಳಬಹುದು/ ಬೇಡ ಎನ್ನಿಸಿದರೆ ಬಿಡಬಹುದು)

*ಕೋಕೋ: 2 ಟೀ ಸ್ಪೂನ್

*ತುರಿದ ಚಾಕೊಲೇಟ್

rakul-preet-singhs-banana-chocolate-oatmeal

ಬನಾನಾ ಚಾಕೊಲೇಟ್ ಓಟ್ ಮೀಲ್ ಕುಕೀಸ್ ಮಾಡುವ ವಿಧಾನ

ಈ ಬಿಸ್ಕತ್‌ಗಳನ್ನು ಮಾಡಲು ನಟಿ ರಕುಲ್ ಎರಡು ಮಾಗಿದ ಬಾಳೆಹಣ್ಣುಗಳನ್ನು ತೆಗೆದುಕೊಂಡು ಸಿಪ್ಪೆ ತೆಗೆದು ಬಟ್ಟಲಿನಕ್ಕಿ ಹಾಕಿಕೋಮಡು ಚಮಚದ ಸಹಾಯದಿಂದ ಚೆನ್ನಾಗಿ ಹಿಸುಕಿಕೊಂಡರು. ಇದನ್ನು ಮಿಕ್ಸಿಯಲ್ಲಿ ಕುಬ್ಬಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಬಳಿಕ ಈ ಬಾಳೆಹಣ್ಣಿನ ಮಿಶ್ರಣಕ್ಕೆ ಓಟ್ಸ್ ಸೇರಿಸಬೇಕು.

ಓಟ್ಸ್ ಸೇರಿಸಿದ ನಂತರ ಇದಕ್ಕೆ ಅಲ್ಪ ಪ್ರಮಾಣದಲ್ಲಿ ಮ್ಯೂಸ್ಲಿ (ಓಟ್ಸ್ ತರಹದ್ದೆ ಮತ್ತೊಂದು ಪ್ರಕಾರ) ಸೇರಿಸಿಕೊಂಡರು. ಈ ಮಿಶ್ರಣಕ್ಕೆ, ಅವರು ಎರಡು ಚಮಚ ಸಿಹಿಯಲ್ಲದ ಕೋಕೋವನ್ನು ಸೇರಿಸಿದರು. ಇದಾದ ನಂತರ ರಕುಲ್ ಪ್ರೀತ್ ಸಿಗ್ ಒಂದು ಚಾಕೊಲೇಟ್ ಬಾರ್ ಅನ್ನು ತುರಿದು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದ್ದಾರೆ.

ಬಳಿಕ, ನಟಿ ಒಂದು ಟ್ರೇ ತೆಗೆದುಕೊಂಡು ಅದಕ್ಕೆ ಸ್ಪಲ್ಪ ತುಪ್ಪದಿಂದ ಚೆನ್ನಾಗಿ ಗ್ರೀಸ್ ಮಾಡಿದ್ದಾರ. ಬಳಿಕ ಈ ಮಿಶ್ರಣದಿಂದ ಸ್ವಲ್ಪ ಭಾಗವನ್ನು ಕೈಯಲ್ಲಿ ತೆಗೆದುಕೊಂಡು ಸಣ್ಣ ವೃತ್ತಗಳನ್ನು ಮಾಡಿ, ಅದನ್ನು ಎರಡೂ ಕೈಗಳಿಂದ ಒತ್ತಿ ಕುಕೀಸ್ ಆಕಾರಕ್ಕೆ ತಂಡು ಟ್ರೂನಲ್ಲಿ ಜೋಡಿಸಿದ್ದಾರೆ. ಇದಾದ ನಂತರ ಓವೆನ್‌ನಲ್ಲಿ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 10 ರಿಂದ 12 ನಿಮಿಷಗಳ ಕಾಲ ಬೇಯಿಸಿದತೆ ರಕುಲ್ ಪ್ರೀತ್ ಸಿಂಗ್ ಅವರ ಫೆವರಿಟ್ ಬನಾನಾ ಚಾಕೊಲೇಟ್ ಓಟ್ ಮೀಲ್ ಕುಕೀಸ್ ಸವಿಯಲು ಸಿದ್ಧ!.

More from Filmibeat

English summary
Try Rakul Preet Singh banana chocolate oatmeal cookies recipe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X