ಬಾಕ್ಸಾಫೀಸ್‌ಗೆ ಅಪ್ಪಳಿಸಿದ 'ತುಂಬಾಡ್' ತೂಫಾನ್, ಅವತ್ತು ಚಿತ್ರ ಸೋತಾಗ ಕಣ್ಣೀರು, ಇವತ್ತು ಆನಂದಬಾಷ್ಪ...!

ಸಾಮಾನ್ಯವಾಗಿ ಒಂದು ಚಿತ್ರ ಅಂದುಕೊಂಡಂತೆ ಯಶಸ್ವಿಯಾಗದೇ ಇದ್ದರೆ, ಆ ಚಿತ್ರಕ್ಕೆ ಪ್ರೇಕ್ಷಕರು ಬಾರದೇ ಇದ್ದರೆ.. ಆ ಚಿತ್ರದ ಸೋಲಿಗೆ ಪ್ರೇಕ್ಷಕರನ್ನು ಹೊಣೆಯಾಗಿಸುವ ಕೆಲಸವನ್ನು ಕೆಲವರು ತುಂಬಾ ಪ್ರಾಮಾಣಿಕವಾಗಿ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ಚಿತ್ರದ ಸೋಲಿಗೆ ಚಿತ್ರಮಂದಿರದ ಮಾಲೀಕರನ್ನು.. ಚಿತ್ರ ವಿತರಕರನ್ನು.. ಚಿತ್ರಮಂದಿರದ ಮೇಲೆ ಬಿಗಿ ಹಿಡಿತ ಹೊಂದಿರುವ ಪಟ್ಟಭದ್ರರತ್ತ ಬೆರಳು ತೋರಿಸುತ್ತಾರೆ. ಮತ್ತೂ ಕೆಲವರು ಎಲ್ಲ ಅಸ್ತವ್ಯಸ್ತ ವ್ಯವ್ಯಸ್ಥೆಗೆ OTT ಎಂಬ ಪೆಡಂಭೂತ ಕಾರಣವೆಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಚಿತ್ರರಂಗದತ್ತ ಇನ್ನೆಂದು ತಿರುಗಿ ನೋಡದಂತೆ ಮರಳಿ ಮನೆ ಸೇರುತ್ತಾರೆ.

ಆದರೆ, ವಾಸ್ತವದಲ್ಲಿ ಪ್ರೇಕ್ಷಕರು ಉತ್ತಮವಾದ ಚಿತ್ರವನ್ನು ಯಾವತ್ತು ಕೈ ಬಿಡುವುದಿಲ್ಲ. ಅಪ್ಪಿ ತಪ್ಪಿ ಕಣ್ತಪ್ಪಿನಿಂದಾಗಿ ಆ ಚಿತ್ರವನ್ನು ಕಡೆಗಣಿಸಿದರು ಮುಂದೊಂದು ದಿನ ತಮ್ಮ ಈ ತಪ್ಪಿಗೆ ಪ್ರೇಕ್ಷಕರು ಪ್ರಾಯಶ್ಚಿತ ಪಡುತ್ತಾರೆ. ಚಿತ್ರಮಂದಿರದಲ್ಲಿ ನೋಡಲಾಗದ ಚಿತ್ರವನ್ನು ಮನೆಯಲ್ಲಿಯೇ ನೋಡಿ ಆ ಚಿತ್ರಕ್ಕೆ ತಮ್ಮ ಮನದಲ್ಲಿ ವಿಶೇಷವಾದ ಸ್ಥಾನ ನೀಡುತ್ತಾರೆ. ಇದಕ್ಕೆ ತುಂಬಾಡ್ ಅತ್ಯುತ್ತಮ ಉದಾಹರಣೆ.

Tumbbad Re-Release Box Office Collection Day 3 Soars 125 Above Original Opening Weekend

ಹೌದು, 2018ರಲ್ಲಿ ತುಂಬಾಡ್ ತೆರೆಗೆ ಬಂದಾಗ ಈ ಚಿತ್ರವನ್ನು ಮಹಾನಗರದಲ್ಲಿರುವ ಮಹಾಜನತೆ ಮೂಸಿಯೂ ನೋಡಿರಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ತುಂಬಾಡ್ ಶ್ರೇಷ್ಠ ಕಲಾಕೃತಿಯೆಂದಿದ್ದರು. ಚಿತ್ರದ ಕುರಿತು ನಾಲ್ಕು ಒಳ್ಳೇಯ ಮಾತು ಮಾತನಾಡಿದ್ದರು. ಆದರೆ, ಈ ಮಾತು ಜನರ ಕಿವಿಗಳಿಗೆ ತಲುಪಿ ಅವರೆಲ್ಲ ಚಿತ್ರಮಂದಿರಕ್ಕೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಬೆಳ್ಳಿತೆರೆಯಲ್ಲಿ ತುಂಬಾಡ್‌ನ ವಾಡೆ ಮಾಯವಾಗಿತ್ತು.

ಹಾಗಂಥ ತುಂಬಾಡ್‌ನ ನಿರ್ಮಾಪಕ ಮತ್ತು ನಾಯಕ ಸೋಹಮ್ ಶಾ, ಚಿತ್ರದ ಸೋಲಿಗೆ ಪ್ರೇಕ್ಷಕರನ್ನು ದೂರಲಿಲ್ಲ. ಬೆವರು ಸುರಿಸಿ ದುಡಿದ ಹಣ ಎಲ್ಲ ಕಳೆದುಕೊಂಡು ಕಣ್ಣೀರು ಹಾಕುತ್ತಾ ಕೂಡ ಕೂರಲಿಲ್ಲ. ಬದಲಿಗೆ ಹಣೆಬರಹ ಸರಿ ಇಲ್ಲ ಎಂದುಕೊಂಡು ಸುಮ್ಮನಾದರು. ಇನ್ಯಾವತ್ತು ಚಿತ್ರವನ್ನು ನಿರ್ಮಾಣ ಮಾಡುವ ಹುಂಬುತನ ಮಾಡಬಾರದೆಂದು ನಿರ್ಧಾರ ಮಾಡಿದರು.

Tumbbad Re-Release Box Office Collection Day 3 Soars 125 Above Original Opening Weekend

ಆದರೆ, ಹಾಕಿರುವ ಶ್ರಮಕ್ಕೆ ಒಂದಿಲ್ಲೊಂದು ದಿನ ಬೆಲೆ ಸಿಕ್ಕಿಯೇ ಸಿಗುತ್ತೆ. ಇದಕ್ಕೆ ಉದಾಹರಣೆ ಎನ್ನುವಂತೆ ತುಂಬಾಡ್‌ನಲ್ಲಿ ಕಳೆದುಕೊಂಡ ಹಣ ಇವತ್ತು ಸೋಹಮ್ ಷಾಗೆ ತುಂಬಾಡ್‌ನಲ್ಲಿಯೇ ಸಿಗುತ್ತಿದೆ. 2018ರಲ್ಲಿ ಬಾರದ ಪ್ರೇಕ್ಷಕರ ದಂಡು ಈ ಬಾರಿ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮರು ಬಿಡುಗಡೆಗೊಂಡ ಮೊದಲ ದಿನದಲ್ಲಿ 1.65 ಕೋಟಿ ಗಳಿಸಿದ್ದ ಚಿತ್ರ ಎರಡನೇ ದಿನ 2.65 ಕೋಟಿ ಗಳಿಸಿದೆ. ಮೂರನೇ ದಿನದ ಗಳಿಕೆ ಮೊದಲೆರಡು ದಿನಕ್ಕಿಂತ ಹೆಚ್ಚಿದೆ. ಚಿತ್ರ ಭಾನುವಾರ 3.04 ಕೋಟಿಯನ್ನು ಬಾಕ್ಸಾಫೀಸ್‌ನಲ್ಲಿ ದೋಚಿದೆ. ನೆನಪಿರಲಿ 2018ರಲ್ಲಿ ಚಿತ್ರ ತೆರೆಗೆ ಬಂದಾಗ ಚಿತ್ರದ ಒಟ್ಟಾರೆ ಗಳಿಕೆ 14 ಕೋಟಿಯ ಗಡಿಯನ್ನು ಕೂಡ ದಾಟಿರಲಿಲ್ಲ. ಆದರೆ ಈಗ ಕೇವಲ ಮೂರೇ ದಿನದಲ್ಲಿ ಚಿತ್ರ 7.5 ಕೋಟಿ ಹಣವನ್ನು ಗಳಿಸಿದೆ. ಅತ್ಯುತ್ತಮವಾದ ಚಿತ್ರ ಯಾವ ಭಾಷೆಯದ್ದೇ ಇರಲಿ, ಅದು ಯಾವತ್ತಾದರೂ ಬಿಡುಗಡೆ ಆಗಲಿ, ಪ್ರೇಕ್ಷಕರು ಕೈ ಬಿಡುವುದಿಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ..?

ಒಟ್ನಲ್ಲಿ ಸದ್ಯಕ್ಕೆ ತುಂಬಾಡ್‌ ಎಂಬ ತೂಫಾನ್ ಬಾಲಿವುಡ್‌ಗೆ ಅಪ್ಪಳಿಸಿದೆ. ತುಂಬಾಡ್ ಬಂದ ನಂತರ ಸ್ತ್ರೀ 2 ಚಿತ್ರದ ಅಬ್ಬರ ಕಡಿಮೆಯಾಗಿದೆ. ಇನ್ನೂ ತುಂಬಾಡ್ ಎದುರು ಬಂದ ಕರೀನಾ ಕಪೂರ್ ಖಾನ್ ಅಭಿನಯದ 'ದಿ ಬಕಿಂಗ್ಹ್ಯಾಮ್ ಮರ್ಡರ್ಸ್' ಚಿತ್ರದ ಸ್ಥಿತಿ ಚಿಂತಾಜನಕವಾಗಿದೆ. ಸದ್ಯದ ಲೆಕ್ಕಾಚಾರ ನೋಡುತ್ತಿದ್ದರೆ ಮರುಬಿಡುಗಡೆಯ ವಿಚಾರದಲ್ಲಿ ರಣ್ಬೀರ್ ಕಪೂರ್ ಅಭಿನಯದ ರಾಕ್ ಸ್ಟಾರ್ ಚಿತ್ರದ ರಿ ರಿಲೀಸ್ ದಾಖಲೆಯನ್ನು ತುಂಬಾಡ್ ಸಲೀಸಾಗಿ ಮುರಿಯಲಿದೆ.

More from Filmibeat

Read more about: re release box office bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X