For Quick Alerts
  ALLOW NOTIFICATIONS  
  For Daily Alerts

  ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ವೇಳೆ ಹೃದಯಾಘಾತ; 46 ವರ್ಷದ ನಟ ಸಾವು!

  |

  ಹಿಂದಿ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ( 46 ) ಇಂದು ( ನವೆಂಬರ್ 11 ) ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಿದ್ಧಾಂತ್ ವೀರ್ ಸೂರ್ಯವಂಶಿ ಅಗಲಿದ್ದಾರೆ. 1975ರ ಡಿಸೆಂಬರ್ 15ರಂದು ಮುಂಬೈನಲ್ಲಿ ಜನಿಸಿದ್ದ ಸಿದ್ಧಾಂತ್ ವೀರ್ ಸೂರ್ಯವಂಶಿ 2001ರಲ್ಲಿ ಖುಸುಮ್ ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಪಯಣ ಆರಂಭಿಸಿದ್ದರು.

  ನಂತರ ಕೃಷ್ಣ ಅರ್ಜುನ್, ಮಮ್ತ, ವಿರುದ್ಧ್, ಫಿಯರ್ ಫೈಲ್ಸ್, ಸೂಫಿಯಾನಾ ಪ್ಯಾರ್ ಮೇರಾ ಧಾರಾವಾಹಿಗಳಲ್ಲಿ ನಟಿಸಿದ್ದ ಸಿದ್ಧಾಂತ್ ವೀರ್ ಸೂರ್ಯವಂಶಿ ಬಾಕ್ಸ್ ಕ್ರಿಕೆಟ್ ಲೀಗ್ ಎಂಬ ಸ್ಪೋರ್ಟ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇನ್ನು ನಟನೆಯ ಜತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಸಿದ್ಧಾಂತ್ ವೀರ್ ಸೂರ್ಯವಂಶಿ 2017ರಲ್ಲಿ ರಷ್ಯಾ ಮೂಲದ ಮಾಡೆಲ್ ಹಾಗೂ ಫ್ಯಾಷನ್ ಕೊರಿಯೊಗ್ರಫರ್ ಆದ ಅಲೆಸಿಯಾ ರೌತ್ ಅವರನ್ನು ವಿವಾಹವಾದರು.

  ಇನ್ನು ಆನಂದ್ ಸೂರ್ಯವಂಶಿ ಎಂದೂ ಸಹ ಕರೆಯಲ್ಪಡುವ ಇವರು ಜಿಮ್‌ನಲ್ಲಿ ಕುಸಿದು ಬಿದ್ದ ತಕ್ಷಣ ಕೋಕಿಲಾಬಾಯಿ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು 45 ನಿಮಿಷಗಳ ಕಾಲ ಎಷ್ಟೇ ಹರಸಾಹಸ ಮಾಡಿದರೂ ಸಿದ್ಧಾಂತ್ ವೀರ್ ಸೂರ್ಯವಂಶಿ ಬದುಕುಳಿಯಲೇ ಇಲ್ಲ. ಈ ಮೂಲಕ ಸಿದ್ಧಾರ್ಥ್ ಶುಕ್ಲಾ, ರಾಜು ಶ್ರೀವಾಸ್ತವ ರೀತಿಯೇ ಸಿದ್ಧಾಂತ್ ವೀರ್ ಸೂರ್ಯವಂಶಿ ಸಹ ಕಾರ್ಡಿಯಕ್ ಅರೆಸ್ಟ್‌ನಿಂದ ಸಾವನ್ನಪ್ಪಿದ್ದಾರೆ.

  ಹೀಗೆ ಅಕಾಲಿಕ ಮರಣ ಹೊಂದಿದ ಸಿದ್ಧಾಂತ್ ವೀರ್ ಸೂರ್ಯವಂಶಿ ಕುರಿತು ನೆಟ್ಟಿಗರು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದು ನೋವನ್ನು ಹೊರಹಾಕಿದ್ದಾರೆ.

  English summary
  TV actor Siddhaanth Vir Surryavanshi passed away at the age of 46 due to cardiac arrest. Read on
  Friday, November 11, 2022, 18:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X