ಕಸ್ಟಮರ್ಸ್ ಸೋಗಿನಲ್ಲಿ ಹೋಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕಿರುತೆರೆ ನಟಿಯನ್ನು ಬಂಧಿಸಿದ ಪೊಲೀಸರು
ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಕಿರುತೆರೆ ನಟಿ, ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿಟ್ಟಲ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಪೊಲೀಸರ ಸೋಶಿಯಲ್ ಬ್ರಾಂಚ್ ಇಬ್ಬರು ಪೊಲೀಸರ್ ಅಧಿಕಾರಿಗಳನ್ನು ಗ್ರಾಹಕರ ಸೋಗಿನಲ್ಲಿ ಕಳುಹಿಸಿ ಇಬ್ಬರು ಮಾಡೆಲ್‌ಗಳನ್ನು ರಕ್ಷಿಸಿದ್ದಾರೆ. ಸೋಶಿಯಲ್ ಸರ್ವೀಸ್ ಬ್ರ್ಯಾಂಚ್ ಸಂಪೂರ್ಣ ವಿಚಾರಣೆ ನಡೆಸಿ, ಘಟನೆಗೆ ಸಂಬಂಧಿಸಿದ ವಿವರಗಳನ್ನು ಸಾಕ್ಷಿಯ ವಿಡಿಯೋ ಚಿತ್ರೀಕರಿಸಿದ್ದಾರೆ.
27 ವರ್ಷದ ಫೀಮೇಲ್ ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿಟ್ಟಲ್ ವೇಶ್ಯಾವಾಟಿಗೆ ದಂಧೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೇಳಿಕೊಂಡು ಬರುವ ನಟಿಯರು, ಮಾಡೆಲ್‌ಗಳನ್ನು ಆರತಿ ಗ್ರಾಹಕರ ಬಳಿ ಕಳುಹಿಸುತ್ತಿದ್ದಳು. ಹೆಚ್ಚಿನ ಹಣ ಸಿಗುತ್ತಿದ್ದರಿಂದ ಅವರು ಗ್ರಾಹಕರ ಬಳಿ ಹೋಗುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಆಕೆಯ ಮೇಲೆ ಕಣ್ಣಿಟ್ಟಿದ್ದರು. ಮುಂಬೈ ಸೋಶಿಯಲ್ ಸರ್ವಿಸ್ ಬ್ರಾಂಚ್ ಪೊಲೀಸರು ಅನುಮಾನ ಬಾರದಂತೆ ಇಬ್ಬರು ಪೊಲೀಸರನ್ನು ಗ್ರಾಹಕರ ರೀತಿ ಆಕೆಯ ಬಳಿಗೆ ಕಳುಹಿಸಿದರು.

ಅಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಮಾಡಲ್‌ಗಳನ್ನು ರಕ್ಷಿಸಿ, ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇಡೀ ಪ್ರಕರಣದ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಆರೋಪಿ ಆರತಿ ಮಿಟ್ಟಲ್ ಸಿನಿಮಾ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಿದ್ದು ಓಶಿಯಾವಾರದ ಆರಾಧನಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಳು. ಸಿನಿಮಾಗಳ ಹೆಸರಿನಲ್ಲಿ ಮಾಡೆಲ್‌ಗಳನ್ನು ಭೇಟಿ ಮಾಡಿ ಅವರಿಗೆ ಹಣದ ಆಮಿಷವೊಡ್ಡಿ, ವೇಶ್ಯಾವಾಟಿಕೆಗೆ ದೂಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆ ಇನ್ಸ್‌ಪೆಕ್ಟರ್ ಮನೋಜ್ ಸುತಾರ್ ಒಂದು ತಂಡ ಸಿದ್ಧಪಡಿಸಿದ್ದರು. ತಂಡದ ಇಬ್ಬರನ್ನು ಗ್ರಾಹಕರಂತೆ ಆರತಿ ಬಳಿ ಕಳುಹಿಸಿದ್ದರು. ಸುತಾರ್ ತಮ್ಮ ಸ್ನೇಹಿತರಿಗೆ ಇಬ್ಬರು ಹುಡುಗಿಯರು ಬೇಕು, ಹೋಟೆಲ್‌ಗೆ ಕಳುಹಿಸುವಂತೆ ಕೇಳಿದ್ದಾರೆ. ಅದಕ್ಕೆ ಆಕೆ 60 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದಾಳೆ. ಆಕೆ ಸುತಾರ್ ಫೋನ್ ಮಾಡಿ ಇಬ್ಬರು ಹುಡುಗಿಯರ ಫೋಟೊಗಳನ್ನು ಕಳುಹಿಸಿದ್ದಾಳೆ. ಅವರಿಬ್ಬರು ಗೊರೆಗಾವ್‌ನ ಹೋಟೆಲ್‌ವೊಂದಕ್ಕೆ ಬರ್ತಾರೆ ಎಂದಿದ್ದಾಳೆ. ನಂತರ ಪೊಲೀಸರು ಆ ಹೋಟೆಲ್‌ನಲ್ಲಿ 2 ರೂಂ ಬುಕ್ ಮಾಡಿ, ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ಕಳುಹಿಸಿದ್ದಾರೆ.

ಆರತಿ ಮಾಡೆಲ್ಸ್ ಜೊತೆ ಬಂದಿದ್ದು, ಅವರಿಗೆ ಕಾಂಡೋಮ್ ಸಹ ನೀಡಿದ್ದಾಳೆ. ಅದೆಲ್ಲಾ ಸ್ಪೈ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ದಿಂಡೋಷಿ ಪೊಲೀಸ್ ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿದ ಕೂಡಲೇ ಆರತಿ ಮಿಟ್ಟಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಾಡೆಲ್‌ಗಳಿಗೆ ತಲಾ 15 ಸಾವಿರ ರೂ. ನೀಡುವುದಾಗಿ ಆರತಿ ಆಮಿಷವೊಡ್ಡಿದಾಗಿ ವಿಚಾರಣೆಯಲ್ಲಿ ಗೊತ್ತಾಗಿದೆ.
ಐಪಿಸಿ ಸೆಕ್ಷನ್ 370ರ ಜೊತೆಗೆ ಮಹಿಳೆಯರ ಅಕ್ರಮ ಸಾಗಾಟಿಕೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಆರತಿ ಮಿಟ್ಟಲ್ ವಿರುದ್ಧ ಕೇಸ್ ದಾಖಲಾಗಿದೆ. ಇನ್ನು ಆರತಿ 'ಅಪ್ನಾಪನ್' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾಳೆ. ಬಂಧನಕ್ಕೂ ಮುನ್ನ ನಟ ಮಾಧವನ್ ಜೊತೆ ಸಿನಿಂಆ ಚಿತ್ರೀಕರಣದಲ್ಲಿ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಳು. ಪೊಲೀಸರು ಸದ್ಯ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications











