For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ವೇಳೆ ಕಳ್ಳತನ ಮಾಡಿ ಸಿಕ್ಕಿಬಿದ್ದ ನಟಿಯರು ಅರೆಸ್ಟ್

  |

  ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಆರೇ ವ್ಯಾಪ್ತಿಯ ಪೊಲೀಸರು ಇಬ್ಬರು ಟಿವಿ ನಟಿಯರನ್ನು ಬಂಧಿಸಿರುವ ಘಟನೆ ಶುಕ್ರವಾರ (ಜೂನ್ 18) ನಡೆದಿದೆ.

  ಕೊರೊನಾ ವೈರಸ್ ಹಿನ್ನೆಲೆ ಲಾಕ್‌ಡೌನ್ ಮಾಡಿದ ಸಂದರ್ಭದಲ್ಲಿ ಚಿತ್ರೀಕರಣ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಕೆಲಸವನ್ನು ನಂಬಿಕೊಂಡಿದ್ದ ಈ ನಟಿಯರು ಹಣದ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆ ಕಳ್ಳತನಕ್ಕೆ ಮುಂದಾದರು ಎಂದು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ.

  ಮೇ 18 ರಂದು ಸ್ನೇಹಿತರೊಬ್ಬರ ನಡೆಸುತ್ತಿದ್ದ ಪಿಜಿಗೆ ಇಬ್ಬರು ನಟಿಯರು ಸ್ಥಳಾಂತರವಾಗಿದ್ದರು. ಅವರು ಬಂದ ಬಳಿಕ ನೆರೆ ರೂಮಿನಲ್ಲಿದ್ದ ಮಹಿಳೆಯೊಬ್ಬರ ಲಾಕರ್‌ನಲ್ಲಿ 3.28 ಲಕ್ಷ ಹಣ ಕಾಣೆಯಾಗಿದೆ.

  ಹಣ ಕಳೆದುಕೊಂಡ ಮಹಿಳೆ ಆರೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಟಿಯರಾದ ಸುರಭಿ ಸುರೇಂದ್ರ ಲಾಲ್ ಶ್ರೀವಾಸ್ತವ (25) ಮತ್ತು ಮೊಸಿನಾ ಮುಖ್ತಾರ್ ಶೇಖ್ (19) ಕದ್ದಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.

  ಮಹಿಳೆಯ ದೂರಿನ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರಿಗೆ ಈ ಇಬ್ಬರು ನಟಿಯರು ಹಣದೊಂದಿಗೆ ಸುತ್ತಾಡುವುದು ಗಮನಕ್ಕೆ ಬಂದಿದೆ. ನಂತರ ವಶಕ್ಕೆ ಪಡೆದು ಸಿಸಿಟಿವಿ ದೃಶ್ಯಗಳ ಸಮೇತ ತೋರಿಸಿದಾದ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

  ಅಂದ್ಹಾಗೆ, ಸಾವದಾನ್ ಇಂಡಿಯಾ ಮತ್ತು ಕ್ರೈಂ ಪೆಟ್ರೊಲ್ ಎಂಬ ಟಿವಿ ಕಾರ್ಯಕ್ರಮಗಳಲ್ಲಿ ಈ ಇಬ್ಬರು ಕೆಲಸ ಮಾಡಿದ್ದರು ಎಂದು ತಿಳಿದು ಬಂದಿದೆ. ಇದಲ್ಲದೇ ಕೆಲವು ವೆಬ್ ಸಿರೀಸ್‌ಗಳಲ್ಲಿ ನಟಿಸಿದ್ದಾರೆ.

  Sudeep ಅವರು Chess ಆಡುವಾಗ ಮೋಸ ಮಾಡಿದ ಆರೋಪ | Filmibeat Kannada

  ಕದ್ದ ಹಣದಲ್ಲಿ ಸುರಭಿ ಮತ್ತು ಮೊಸಿನಾ ಬಳಿ 50 ಸಾವಿರ ರೂಪಾಯಿ ಸಿಕ್ಕಿದೆ, ಹಣವನ್ನು ನಟಿಯರಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಜೂನ್ 23ರವರೆಗೂ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

  English summary
  TV Actress arrested for stealing Rs 3.28 Lakhs from the paying guest accommodation they stayed at, in Aarey Colony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X