ಶೃಂಗಾರದ ಬಗ್ಗೆ ಅಕ್ಷಯ್ ಪತ್ನಿ ಟ್ವಿಂಕಲ್ ಖುಲ್ಲಾಂಖುಲ್ಲಾ ಮಾತು; ಸಿಕ್ಕಾಪಟ್ಟೆ ಟ್ರೋಲ್
ಬಾಲಿವುಡ್ ಮಂದಿ ಹುಚ್ಚಾಟಗಳು ಒಂದೆರಡಲ್ಲ. ಅವರ ನಡೆ ನುಡಿ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ವೇದಿಕೆಗಳಲ್ಲಿ, ಕಿರುತೆರೆ ಕಾರ್ಯಕ್ರಮ, ಓಟಿಟಿ ಶೋಗಳಲ್ಲಿ ವಿಚಿತ್ರ ಕಾಮೆಂಟ್ ಮಾಡಿ ಸುದ್ದಿಯಾಗುತ್ತಿರುತ್ತಾರೆ. ಸದ್ಯ ನಟ ಅಕ್ಷಯ್‌ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಶೃಂಗಾರರದ ಬಗ್ಗೆ ಖುಲ್ಲಾಂ ಖುಲ್ಲಾ ಮಾತನಾಡಿ ಟ್ವಿಂಕಲ್ ಈಗ ಗಮನ ಸೆಳೆದಿದ್ದಾರೆ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಹಾಗೂ ನಟಿ ಕಾಜೋಲ್ ಕೂಡ ಟ್ವಿಂಕಲ್ ಜೊತೆ ಸೇರಿ ಆಡಿರುವ ಮಾತುಗಳು ವೈರಲ್ ಆಗ್ತಿದೆ. ಫಿಸಿಕಲ್ ಚೀಟಿಂಗ್ ತಪ್ಪೇ ಅಲ್ಲ ಎನ್ನುವಂತೆ ಅವರು ಮಾತನಾಡಿರುವುದು ಚರ್ಚೆ ಹುಟ್ಟಾಕ್ಕಿದೆ. ಬಾಲಿವುಡ್ ಅಭಿಮಾನಿಗಳು ಟ್ರೋಲ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಮಾಜಕ್ಕೆ ಎಂತಹ ಸಂದೇಶ ನೀಡುತ್ತಿದ್ದೀರಾ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಪ್ರೈಂ ವೀಡಿಯೋದಲ್ಲಿ 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಎಂಬ ಟಾಕ್ ಶೋ ಪ್ರಸಾರವಾಗುತ್ತಿದೆ. ಈ ವಾರ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಹಾಗೂ ನಟಿ ಜಾನ್ವಿ ಕಪೂರ್ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಶೋನಲ್ಲಿ ಫಿಸಿಕಲ್ ರಿಲೇಷನ್ ಹಾಗೂ ಎಮೋಷನಲ್ ರಿಲೇಷನ್ ಬಗ್ಗೆ ಚರ್ಚೆ ನಡೆದಿದೆ.
ನಿರೂಪಕಿಯರಿಬ್ಬರು ಸೇರಿ ಫಿಸಿಕಲ್ ಚೀಟಿಂಗ್‌ಗಿಂತ ಎಮೋಷನಲ್ ಚೀಟಿಂಗ್ ದೊಡ್ಡ ದ್ರೋಹ ಎನ್ನುವ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಕಾಜೋಲ್, ಕರಣ್ ಹಾಗೂ ಟ್ವಿಂಕಲ್ ಎಮೋಷನಲ್ ಚೀಟಿಂಗ್ ತಪ್ಪು ಎಂದಿದ್ದಾರೆ. ಫಿಸಿಕಲ್ ಚೀಟಿಂಗ್ ದೊಡ್ಡ ವಿಷಯ ಅಲ್ಲವೇ ಅಲ್ಲ, 'ರಾತ್ ಗಯೀ ಬಾತ್ ಗಯೀ', ಎಂದು ಪಾರ್ಟ್ನರ್ಸ್ ಶಾರೀರಿಕ ಸಂಬಂಧದ ವಿಚಾರದಲ್ಲಿ ತಪ್ಪು ಮಾಡಿದ್ರು ಪರವಾಗಿಲ್ಲ ಎನ್ನುವಂತೆ ಮಾತನಾಡಿದ್ದಾರೆ. ಜಾನ್ವಿ ಇದಕ್ಕೆ ಒಪ್ಪಲಿಲ್ಲ.
ಎಮೋಷನಲ್ ಚೀಟಿಂಗ್ ಹಾಗೂ ಫಿಸಿಕಲ್ ಚೀಟಿಂಗ್ ಎರಡೂ ತಪ್ಪು ಎಂದು ಜಾನ್ವಿ ಹೇಳಿದ್ದಾರೆ. "ಕೆಲವೊಮ್ಮೆ ಚಳಿ ಆಗುತ್ತದೆ ಎಂದು ಕರಣ್ ಹೇಳಿದ್ದು ಅದಕ್ಕೆ ಬ್ಲಾಂಕೆಟ್ ತಗೋಬಹುದು" ಎಂದು ಜಾನ್ವಿ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಟ್ವಿಂಕಲ್ ಖನ್ನಾ "20ರ ಹರಯದಲ್ಲಿ ಹಿಂಗೆ ಇರುತ್ತೆ. ಆದರೆ 50 ವರ್ಷ ವಯಸ್ಸಾದಾಗ ನಾವು ಹೇಳುವುದನ್ನೇ ಜಾನ್ವಿ ಒಪ್ಪುತ್ತಾಳೆ ನೋಡ್ತಾಯಿರಿ. ನಾವು ನೋಡಿದ್ದನ್ನು ಅವಳು ಇನ್ನು ನೋಡಿಲ್ಲ" ಎಂದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.
ಇದೇ ಟಾಕ್ ಶೋನಲ್ಲಿ ಕರಣ್ ಜೋಹರ್ ತಮ್ಮ ವೇಯ್ಟ್ ಲಾಸ್ ಬಗ್ಗೆಯೂ ಮಾತನಾಡಿದ್ದಾರೆ. ಇತ್ತೀಚೆಗೆ ಕರಣ್ ದೇಹದ ತೂಕ ಇಳಿಸಿಕೊಂಡು ತೆಳ್ಳಗಾಗಿದ್ದಾರೆ. ಸಿಕ್ಕಾಪಟ್ಟೆ ತೆಳ್ಳಗಾಗಿರುವುದು ಕೆಲವರು ಅಚ್ಚರಿಗೆ ಕಾರಣವಾಗಿದೆ. ಯಾವುದೇ ಮಾತ್ರೆ, ಇಂಜೆಕ್ಷನ್ ಸಹಾಯದಿಂದ ಹೀಗೆ ದೇಹದ ತೂಕ ಇಳಿಸಿರಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಟ್ವಿಂಕಲ್ ತಮಾಷೆಯಾಗಿ, "ಮಗನೇ, ಇಷ್ಟೊಂದು ಇಂಜೆಕ್ಷನ್ ತೆಗೆದುಕೊಳ್ಳುವುದನ್ನು ನಿಲ್ಲಿಸು. ನೀನು ಎಷ್ಟು ತೆಳ್ಳಗಾಗಿದ್ದೀಯಾ. ನಿನ್ನ ತಾಯಿ ಇದಕ್ಕೆ ಏನು ಹೇಳುತ್ತಾರೆ?" ಎಂದು ಕೇಳಿದ್ದಾರೆ. ಕರಣ್ ಪ್ರತಿಕ್ರಿಯಿಸಿ "ಪಾಪ ನಮ್ಮ ಅಮ್ಮ.. ಇತ್ತೀಚಿನ ದಿನಗಳಲ್ಲಿ ಒಂದು ಮಾತನ್ನೂ ಆಕೆ ಹೇಳುವುದಿಲ್ಲ" ಎಂದಿದ್ದಾರೆ. 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಶೋನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳು ಭಾಗಿ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಾರೆ.


Click it and Unblock the Notifications











