ದಾವೂದ್ ಇಬ್ರಾಹಿಂ ಎದುರು ಡ್ಯಾನ್ಸ್ ಮಾಡಿದ್ರಾ ಟ್ವಿಂಕಲ್ ಖನ್ನಾ ?
ಭೂಗತ ಲೋಕದಲ್ಲಿ ದಾವೂದ್ ಇಬ್ರಾಹಿಂ ಮೆರೆದಾಡುತ್ತಿದ್ದ ಕಾಲದಲ್ಲಿ, ಬಾಲಿವುಡ್ ಗೆ ಸಂಬಂಧಿಸಿದ ವರ್ಣರಂಜಿತ ಸುದ್ದಿಗಳಿಗೆ ಬರ ಇರಲಿಲ್ಲ. ಒಂದರ್ಥದಲ್ಲಿ ಇಂದಿನ ಕಾಲಘಟ್ಟದಂತೆ ಆಗೇನಾದರೂ ಸಾಮಾಜಿಕ ಜಾಲತಾಣ ಮತ್ತು ಟಿವಿ ಮಾಧ್ಯಮ ಇದ್ದಿದ್ದರೆ ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ಸಿಗುವ ಕಾಲ ಅದು.
ಇಂತಹ ಕಾಲದಲ್ಲಿ ಅಕ್ಷಯ್ ಕುಮಾರ್ ಪತ್ನಿ ಮತ್ತು ಆ ಕಾಲದ ಖ್ಯಾತ ನಟಿ ಟ್ವಿಂಕಲ್ ಖನ್ನಾ ದಾವೂದ್ ಇಬ್ರಾಹಿಂ ಪಾರ್ಟಿಯಲ್ಲಿ ಮನಸೋ ಇಚ್ಚೆ ಕುಣಿದಾಡಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ವಾದ-ವಿವಾದದ ವಾತಾವರಣ ನಿರ್ಮಾಣವಾಗಿ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು.

ಆದರೆ ಈ ಚರ್ಚೆಯಲ್ಲಿ..ಟ್ವಿಂಕಲ್ ಖನ್ನಾ ನೇರವಾಗಿ ಅಥವಾ ಪರೋಕ್ಷವಾಗಿ ಅವತ್ತು ಭಾಗವಹಿಸಿರಲಿಲ್ಲ. ಈ ಕಾರಣಕ್ಕೆ..ಬೆಂಕಿ ಇಲ್ಲದೇ ಹೊಗೆಯಾಡಲ್ಲ ಎಂದುಕೊಂಡು ಎಲ್ಲರು ಈ ಸುದ್ದಿಯನ್ನ ನಿಜ ಎಂದು ಅಂದುಕೊಂಡಿದ್ದರು.ಆದರೆ.. ಅಸಲಿಗೆ ಈ ಸುದ್ದಿ ಸುಳ್ಳಾಗಿತ್ತು.ಹೀಗೊಂದು ಸ್ಪಷ್ಟೀಕರಣ ವನ್ನ ಟ್ವಿಂಕಲ್ ಖನ್ನಾ ಹೆಚ್ಚು ಕಡಿಮೆ ಒಂದೂವರೆ ದಶಕದ ನಂತರ ಕೊಟ್ಟಿದ್ದಾರೆ. ಫೇಕ್ ನ್ಯೂಸ್ ಗೆ ಬಲಿಯಾದವರಲ್ಲಿ ನಾನು ಒಬ್ಬಳು ಎಂದು ಅಲವತ್ತುಕೊಂಡಿದ್ದಾರೆ.
ಹೌದು. ದಾವೂದ್ ಇಬ್ರಾಹಿಂ ಮತ್ತು ಡ್ಯಾನ್ಸ್ ಸುತ್ತ ಮುತ್ತದ ವಿಚಾರದ ಮೇಲೆ ಬ್ಲಾಗ್ ಮೂಲಕ ಬೆಳಕು ಚೆಲ್ಲಿರುವ ಟ್ವಿಂಕಲ್ ಖನ್ನಾ ದಾವೂದ್ ತನಗಿಂತ ಹೆಚ್ಚು ನುರಿತ ಪ್ರದರ್ಶಕನಿಗೆ ಆದ್ಯತೆ ನೀಡುತ್ತಿದ್ದರು. ಹೀಗಾಗಿ ನಾನು ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ ಎಂಬುದು ಶುದ್ದ ಸುಳ್ಳು ಎಂದಿದ್ದಾರೆ

ನನ್ನ ಡ್ಯಾನ್ಸ್ ನೋಡಲು, ನನ್ನ ಮಕ್ಕಳೇ ಇಷ್ಟ ಪಡಲ್ಲ ಹೀಗಿರುವಾಗ ನಾನು ದಾವೂದ್ ಇಬ್ರಾಹಿಂ ಮುಂದೆ ಕುಣಿಯಲು ಹೇಗೆ ಸಾಧ್ಯ ಎಂಬರ್ಥದಲ್ಲಿ ತಮ್ಮ ಮನದ ಮಾತು ಹಂಚಿಕೊಂಡಿರುವ ಟ್ವಿಂಕಲ್ ಖನ್ನಾ, ಇವತ್ತು ಕುಸ್ತಿ ಪಟುಗಳ ಪ್ರತಿಭಟನೆಯ ವಿಚಾರದಿಂದ ಹಿಡಿದು, ಕೊರೊನಾ ವೈರಸ್ ಸೇರಿ ಅನೇಕ ವಿಚಾರದಲ್ಲಿ ಸುಳ್ಳು ಸುದ್ದಿಯನ್ನ ಹಬ್ಬಿಸುವ ಕೆಲಸವನ್ನ ಅನೇಕರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಆ ಕಾಲದಲ್ಲಿ ನನ್ನ ಮತ್ತು ದಾವೂದ್ ಇಬ್ರಾಹಿಂ ವಿಚಾರದಲ್ಲಿಯೂ ಕೂಡ ಇದೇ ಆಗಿತ್ತು ಅಂದಿದ್ದಾರೆ. ಎಲ್ಲವೂ ಫೇಕ್ ನ್ಯೂಸ್ ಅಂದಿದ್ದಾರೆ.
ಅಂದ್ಹಾಗೇ ಟ್ವಿಂಕಲ್ ಖನ್ನಾ ಇವತ್ತು ಅದೆಲ್ಲವೂ ಸುಳ್ಳು, ಶುದ್ದ ಕಪೋಲಕಲ್ಪಿತ ಸುದ್ದಿಗಳು ಎಂದು ಹೇಳುವ ಮೂಲಕ, ತಮ್ಮ ಹೆಸರಿಗೆ ಅಂಟಿಕೊಂಡ ಕಲೆಯನ್ನ ತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ. ಈ ಪ್ರಯತ್ನವನ್ನ 2010ರಲ್ಲಿಯೇ ಅಕ್ಷಯ್ ಕುಮಾರ್ ಮಾಡಿದ್ದರು. ದಾವೂದ್ ಜೊತೆ ಟ್ವಿಂಕಲ್ ಹೆಸರು ಥಳುಕು ಹಾಕಿಕೊಂಡ ಬೆನ್ನಲ್ಲಿಯೇ ಪತ್ರಿಕಾಗೋಷ್ಠಿಯನ್ನ ಕರೆದಿದ್ದರು. ಹರಿದಾಡುತ್ತಿರುವ ಸುದ್ದಿ ಎಲ್ಲವೂ ಸುಳ್ಳು ಎಂದು ಹೇಳಿದ್ದರು. ಇಷ್ಟೇ ಅಲ್ಲ ದಾವೂದ್ ಇಬ್ರಾಹಿಂ ಜೊತೆಗಿನ ಸಂಪರ್ಕವನ್ನು ಪರಿಶೀಲಿಸಲು ಸಿಬಿಐ ತಂಡದಿಂದ ಯಾರೂ ಅವರ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು.

ಈಗ ವರ್ಷಗಳ ನಂತರ ಅವತ್ತು ಅಕ್ಷಯ್ ಕುಮಾರ್ ಹೇಳಿದ್ದ ಮಾತನ್ನೇ ಟ್ವಿಂಕಲ್ ಖನ್ನಾ ಪುನರುಚ್ಚಿಸಿದ್ದಾರೆ. ಎಲ್ಲವೂ ಶುದ್ದ ಸುಳ್ಳು ಅಂದಿದ್ದಾರೆ.
ಸದ್ಯಕ್ಕೆ ದಾವೂದ್ ಇಬ್ರಾಹಿಂ ಪಾರ್ಟಿಯಲ್ಲಿ ನಾನು ಕುಣಿದಿಲ್ಲ.. ನನಗೂ ದಾವೂದ್ ಇಬ್ರಾಹಿಂಗೂ ಯಾವುದೇ ಸಂಬಂಧ ಇಲ್ಲ ಎಂದು ಟ್ವಿಂಕಲ್ ಖನ್ನಾ ಹೇಳಿದ ನಂತರವೂ ಬಾಲಿವುಡ್ ಈ ವಿಚಾರದ ಬಗ್ಗೆ ಚರ್ಚೆ ಮಾಡ್ತಿದೆ. ಗೊತ್ತಿಲ್ಲ.. ಮುಂದೆ ಟ್ವಿಂಕಲ್ ಖನ್ನಾ ಅವರ ಈ ಅಭಿಪ್ರಾಯ ಎಡ-ಬಲ ಯುದ್ದಕ್ಕೆ ಕಾರಣವಾದರೂ ಆಗಬಹುದು. ಟ್ವಿಂಕಲ್ ಮತ್ತು ದಾವೂದ್ ಹೆಸರಿನಲ್ಲಿ ರಾಜಕೀಯದ ಚದುರಂಗದಾಟವೂ ನಡೆಯಬಹುದು


Click it and Unblock the Notifications











