For Quick Alerts
  ALLOW NOTIFICATIONS  
  For Daily Alerts

  350ಕ್ಕೂ ಹೆಚ್ಚು ಜೊತೆ ಶೂಗಳು, 11 ಜನ ಸ್ಟೈಲಿಸ್ಟ್; ಅಕ್ಷಯ್ ಫ್ಯಾಷನ್ ರಹಸ್ಯ ಬಿಚ್ಚಿಟ್ಟ ಪತ್ನಿ

  |

  ಭಾರತೀಯ ಸಿನಿಮಾರಂಗದ ಖ್ಯಾತ ನಟ, ಅತಿ ಹೆಚ್ಚು ಸಂಭಾವನೆ ಪಡೆಯುವ ಬಹುಬೇಡಿಕೆಯ ಸ್ಟಾರ್ ಕಿಲಾಡಿ ಅಕ್ಷಯ್ ಕುಮಾರ್ ಫ್ಯಾಷನ್ ಸಿಕ್ರೆಟ್ ಬಿಚ್ಚಿಟ್ಟಿದ್ದಾರೆ ಪತ್ನಿ ಟ್ವಿಂಕಲ್ ಖನ್ನಾ. ಅಕ್ಷಯ್ ಮತ್ತು ಟ್ವಿಂಕಲ್ ಬಾಲಿವುಡ್ ನ ಜನಪ್ರಿಯ ಸ್ಟಾರ್ ಕಪಲ್ ಗಳಲ್ಲಿ ಒಬ್ಬರು. ಮದುವೆಯಾಗಿ 20 ವರ್ಷ ಕಳೆದಿದೆ. ಇಬ್ಬರ ಬಾಂಧವ್ಯ ಅನೇಕ ಯುವ ಜೋಡಿಗಳಿಗೆ ಮಾದರಿಯಾಗಿದೆ.

  ಕಳೆದ ಎರಡು ವರ್ಷಗಳ ಹಿಂದೆ ಅಕ್ಷಯ್ ಮತ್ತು ಟ್ವಿಂಕಲ್ ಜೋಡಿ ಫ್ಯಾಷನ್ ಮತ್ತು ಸ್ಟೈಲ್ ಪ್ರಶಸ್ತಿ ಗೆದ್ದು ಬೀಗಿದ್ದರು. ಸಿನಿಮಾ ತಾರೆಯರು ಅಂದ್ಮೇಲೆ ಫ್ಯಾಷನ್ ಮತ್ತು ಸ್ಟೈಲ್ ಮೂಲಕ ಸದಾ ಅಭಿಮಾನಿಗಳನ್ನು ಆಕರ್ಷಿಸುತ್ತಿರುತ್ತಾರೆ. ಸ್ಟಾರ್ ನಟರು ತೊಡುವ ಉಡುಪು, ಹೇರ್ ಸ್ಟೈಲ್, ಶೂ, ವಾಚ್ ಹೀಗೆ ಪ್ರತಿಯೊಂದು ವಿಚಾರದಲ್ಲೂ ಗಮನ ಸೆಳೆಯುತ್ತಿರುತ್ತಾರೆ.

  ಫ್ಯಾಷನ್ ವಿಚಾರದಲ್ಲಿ ನಟ ಅಕ್ಷಯ್ ಕುಮಾರ್ ಏನು ಹಿಂದೆ ಇಲ್ಲ. ಅಕ್ಷಯ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾರೆ ಎಂದು ಹೇಳಿದರು ತಪ್ಪಾಗಲ್ಲ. ಅಕ್ಷಯ್ ಕುಮಾರ್ ಸ್ಟೈಲಿಶ್ ಲುಕ್ ನ ಹಿಂದಿನ ರಹಸ್ಯವನ್ನು ಪತ್ನಿ ಟ್ವಿಂಕಲ್ ಖನ್ನಾ ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗೆ ಸ್ಟಾರ್ ಜೋಡಿ ಫ್ಯಾಷನ್ ಬಗ್ಗೆ ಮಾತನಾಡಿದ್ದು, ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಮುಂದೆ ಓದಿ..

  350 ಶೂಗಳು, 11 ಮಂದಿ ಸ್ಟೈಲಿಸ್ಟ್

  350 ಶೂಗಳು, 11 ಮಂದಿ ಸ್ಟೈಲಿಸ್ಟ್

  ಅಕ್ಷಯ್ ಕುಮಾರ್ ಬಳಿ 350ಕ್ಕೂ ಹೆಚ್ಚು ಜೊತೆ ಶೋಗಳು ಇವೆ ಎಂದು ಹೇಳಿದ್ದಾರೆ. ಎಲ್ಲಾ ಶೂಗಳಿಂದ ಒಂದು ರೂಮ್ ತುಂಬಿ ಹೋಗುತ್ತೆ ಎಂದಿದ್ದಾರೆ. ಇನ್ನು ವಿಶೇಷ ಎಂದರೆ ಅಕ್ಷಯ್ 11 ಜನ ಸ್ಟೈಲಿಸ್ಟ್ ಹೊಂದಿದ್ದಾರೆ ಎಂದು ಟ್ವಿಂಕಲ್ ಹೇಳಿದ್ದಾರೆ. ಒಮ್ಮೆ ರೆಡಿಯಾಗಲು ಅಕ್ಷಯ್ ಗೆ 11 ಮಂದಿ ಸ್ಟೈಲಿಸ್ಟ್ ಗಳು ಸಹಾಯ ಮಾಡುತ್ತಾರೆ ಎಂದು ಟ್ವಿಂಕಲ್ ವಿವರಿಸಿದ್ದಾರೆ.

  ಮೋಸ್ಟ್ ಸ್ಟೈಲಿಶ್ ಪ್ರಶಸ್ತಿ ಗಿದ್ದ ಬಗ್ಗೆ ಅಕ್ಷಯ್ ಪ್ರತಿಕ್ರಿಯೆ

  ಮೋಸ್ಟ್ ಸ್ಟೈಲಿಶ್ ಪ್ರಶಸ್ತಿ ಗಿದ್ದ ಬಗ್ಗೆ ಅಕ್ಷಯ್ ಪ್ರತಿಕ್ರಿಯೆ

  2018ರಲ್ಲಿ ಮೋಸ್ಟ್ ಸ್ಟೈಲಿಸ್ಟ್ ಪ್ರಶಸ್ತಿ ಮತ್ತು ಟ್ರೆಂಡ್ ಸೆಟ್ಟರ್ ಪ್ರಶಸ್ತಿ ಪಡೆದ ಬಗ್ಗೆ ಮಾತನಾಡಿದ ಅಕ್ಷಯ್, "ತುಂಬಾ ಮುಖ್ಯವಾದ ಮತ್ತು ಸ್ಟೈಲಿಶ್ ಪ್ರಶಸ್ತಿ ಪಡೆದಾಗ ತುಂಬಾ ಸಂತೋಷವಾಗುತ್ತೆ" ಎಂದಿದ್ದಾರೆ. ಇದೆ ಸಮಯದಲ್ಲಿ ಮಧ್ಯ ಮಾತನಾಡಿದ ಟ್ವಿಂಕಲ್ "ನೀವು ಪ್ರಧಾನ ಮಂತ್ರಿಯಂತೆ ಏಕೆ ಭಾಷಣ ಮಾಡುತ್ತೀರಿ" ಎಂದು ಪತಿಯ ಕಾಲೆಳೆದರು.

  ಕಾಮನಬಿಲ್ಲಿನ ಪ್ಯಾಂಟ್ ಖರೀದಿಗೆ ನಾನು ಹೇಳಿಲ್ಲ- ಟ್ವಿಂಕಲ್

  ಕಾಮನಬಿಲ್ಲಿನ ಪ್ಯಾಂಟ್ ಖರೀದಿಗೆ ನಾನು ಹೇಳಿಲ್ಲ- ಟ್ವಿಂಕಲ್

  ತನಗಿಂತ ಹೆಚ್ಚಿನ ಶೂಗಳನ್ನು ಅಕ್ಷಯ್ ಹೊಂದಿದ್ದಾರೆ ಎಂದು ಟ್ವಿಂಕಲ್ ಹೇಳಿದ್ದಾರೆ. ಅಕ್ಷಯ್ ಬಳಿ ಇರುವ ವಿಭಿನ್ನ ರೀತಿಯ ಪ್ಯಾಂಟ್ ಕಲರ್ ಬಗ್ಗೆ ಮಾತನಾಡಿ ಬಹುತೇಕ ಎಲ್ಲಾ ಬಣ್ಣದ ಪ್ಯಾಂಟ್ ಗಳಿವೆ, ಅದನ್ನು ಖರೀದಿಸಲು ಟ್ವಿಂಕಲ್ ಹೇಳಿದ್ದು ಅಂತ ಅಕ್ಷಯ್ ವಿವರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಟ್ವಿಂಕಲ್ "ಕಾಮನಬಿಲ್ಲಿನ ಪ್ಯಾಂಟ್ ಗಳನ್ನು ಖರೀದಿ ಮಾಡಿ ಎಂದು ನಾನು ಹೇಳಿಲ್ಲ" ಎಂದಿದ್ದಾರೆ.

  Darshan ವಿಚಾರದಲ್ಲಿ ಸುಳ್ಳು ಹೇಳಿದ್ರ ಹೋಟೆಲ್ ಮಾಲೀಕ ಸಂದೇಶ್ | Darshan Hotel Controversy |Filmibeat Kannada
  ಇಬ್ಬರಲ್ಲಿ ಬೇಗ ರೆಡಿಯಾವುದು ಯಾರು?

  ಇಬ್ಬರಲ್ಲಿ ಬೇಗ ರೆಡಿಯಾವುದು ಯಾರು?

  ಇನ್ನು ರೆಡಿಯಾಗಲು ಅಕ್ಷಯ್ ಕುಮಾರ್ ಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವುದಾಗಿ ಟ್ವಿಂಕಲ್ ಒಪ್ಪಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಅವರಿಗೆ ರೆಡಿಯಾಗಲು 11 ಮಂದಿ ಸಹಾಯ ಮಾಡುತ್ತಾರೆ. ಆದರೆ ನನಗೆ ಯಾರು ಇಲ್ಲ. ಆದ್ದರಿಂದ ನಾನು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತೇನೆ" ಎಂದು ಟ್ವಿಂಕಲ್ ಖನ್ನಾ ಫ್ಯಾಷನ್ ಬಗ್ಗೆ ಬಹಿರಂಗ ಪಡಿಸಿದ್ದಾರೆ.

  English summary
  Twinkle Khanna revealed her husband Akshay Kumar has room just for his clothes and 11 people to dress him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X