'ಕೇಸರಿ' ಸಿನಿಮಾ ನೋಡಿ ಭಾವುಕವಾದ ಅಕ್ಷಯ್ ಕುಮಾರ್ ಪತ್ನಿ
ಬಾಲಿವುಡ್ ನ ಬಹು ನಿರೀಕ್ಷಿತ 'ಕೇಸರಿ' ಸಿನಿಮಾ ಇಂದು ಬಿಡುಗಡೆಯಾಗಿದೆ. ಭಾರತದ 3600 ಸ್ಕ್ರೀನ್ ಹಾಗೂ ವಿದೇಶದ 600 ಸ್ಕ್ರೀನ್ ಸೇರಿದಂತೆ ಒಟ್ಟು 4200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ.
'ಕೇಸರಿ'ಗೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಚಿತ್ರತಂಡದ ಶ್ರಮಕ್ಕೆ ಇಂದು ಫಲ ಸಿಕ್ಕಿದೆ. ಹೋಳಿ ಹಬ್ಬದ ವಿಶೇಷವಾಗಿ ಬಿಡುಗಡೆಯಾದ ಸಿನಿಮಾವನ್ನು ಜನ ನೋಡಿ ಇಷ್ಟ ಪಡುತ್ತಿದ್ದಾರೆ.
1897ರಲ್ಲಿ 10 ಸಾವಿರ ಅಪ್ಘಾನರ ವಿರುದ್ಧ ಕೇವಲ 21 ಸಿಖ್ಖರು ನಡೆಸಿದ ಯುದ್ಧದ ಕಥೆ ಆಧರಿಸಿ 'ಕೇಸರಿ' ಚಿತ್ರವನ್ನು ಮಾಡಲಾಗಿದೆ. ಹವಿಲ್ದಾರ್ ಇಸಾರ್ ಸಿಂಗ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.
ಇನ್ನು ಬಾಲಿವುಡ್ ನಟ, ನಟಿಯರು ಸಿನಿಮಾ ನೋಡಿ ಟ್ವೀಟ್ ಮಾಡುತ್ತಿದ್ದಾರೆ. ಜೊತೆಗೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಮುಂದೆ ಓದಿ...
ಭಾವುಕವಾದ ಅಕ್ಷಯ್ ಪತ್ನಿ
'ಕೇಸರಿ' ಸಿನಿಮಾ ನೋಡಿ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಚಿತ್ರದ ಆಕ್ಷನ್ ಅನ್ನು ಬಹಳ ಇಷ್ಟಪಟ್ಟಿದ್ದಾರೆ. ''ಸಿನಿಮಾದ ಅದ್ಬುತ ಕಥೆಯನ್ನು ಸಾಹಸದ ಜೊತೆಗೆ ಚೆನ್ನಾಗಿ ಹೇಳಿದ್ದಾರೆ. ಸಿನಿಮಾ ನೋಡುತ್ತ ಕೊನೆಯಲ್ಲಿ ನಾನು ಭಾವುಕಳಾದೆ.'' ಎಂದು ಟ್ವೀಟ್ ಮಾಡಿದ್ದಾರೆ.
ಅಧ್ಬುತ ಸಿನಿಮಾ ಎಂದ ಕಿಯಾರಾ ಅಡ್ವಾನಿ
ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಕಿಯಾರಾ ಅಡ್ವಾನಿ ಕೂಡ ಮೊದಲ ದಿನವೇ 'ಕೇಸರಿ' ಸಿನಿಮಾವನ್ನು ವೀಕ್ಷಿಸಿದ್ದಾರೆ. ''ಕೇಸರಿ ಅಧ್ಬುತವಾಗಿ ಮಾಡಿರುವ ಸಿನಿಮಾ. ಸುಂದರವಾಗಿ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಅಕ್ಷಯ್ ಕುಮಾರ್ ಸರ್ ನೀವು ಪ್ರತಿ ಪಾತ್ರದ ಆಳಕ್ಕೆ ಸುಲಭವಾಗಿ ಹೋಗುತ್ತೀರಿ. ಇಂತಹ ಧೈರ್ಯವಂತಿಕೆಯ ಸಿನಿಮಾ ಮಾಡಿದ ತಂಡಕ್ಕೆ ಅಭಿನಂದನೆ.'' ಎಂದಿದ್ದಾರೆ.
ಅಕ್ಷಯ್ ಹುಟ್ಟಿದ್ದೇ ಈ ಪಾತ್ರ ಮಾಡಲು - ಅರ್ಜುನ್ ಕಪೂರ್
''ನಿಜ ಹೇಳಬೇಕು ಅಂದರೆ ಅಕ್ಷಯ್ ಕುಮಾರ್ ಹುಟ್ಟಿದ್ದೇ ಈ ಪಾತ್ರದಲ್ಲಿ ಅಭಿನಯ ಮಾಡಲು ಅನಿಸುತ್ತದೆ. ಅವರ ಪವರ್ ಸಿನಿಮಾವನ್ನು ಚಂದಗೊಳಿಸಿದೆ. ಸಿನಿಮಾದ ಕಲಾವಿದ ಹಾಗೂ ತಾಂತ್ರಿಕ ತಂಡಕ್ಕೆ ಖ್ಯಾತಿ ಸಲ್ಲಬೇಕು. ನೀವು 'ಕೇಸರಿ' ಚಿತ್ರವನ್ನು ಅನುಭವಿಸಲು ಒಬ್ಬ ಸಿಖ್ ಧರ್ಮದವರಾಗಬೇಕಿಲ್ಲ.'' ಎಂದು ಅರ್ಜುನ್ ಕಪೂರ್ ಹಾಡಿ ಹೊಗಳಿದ್ದಾರೆ.

ಅಪ್ಪಟ್ಟ ಕಲಾವಿದ ಅಕ್ಷಯ್ ಕುಮಾರ್
ನಟ ಅಕ್ಷಯ್ ಕುಮಾರ್ ಸಿನಿಮಾದಿಂದ ಸಿನಿಮಾಗೆ ದೊಡ್ಡ ಯಶಸ್ಸು ಕಾಣುತ್ತಿದ್ದಾರೆ. ಅವರು ಆಯ್ಕೆ ಮಾಡಿಕೊಳ್ಳುತ್ತಿರುವ ಪಾತ್ರ, ಕಥೆ, ಸಿನಿಮಾ ಅವರ ಮೇಲಿನ ಗೌರವ ಹೆಚ್ಚು ಮಾಡುತ್ತಿದೆ. ಸವಾಲಿನ ಪಾತ್ರಗಳನ್ನು ಅಧ್ಬುತವಾಗಿ ನಿರ್ವಹಿಸಿ ನಿರಂತರವಾಗಿ ಚಪ್ಪಾಳೆ ಪಡೆಯುತ್ತಿದ್ದಾರೆ. 'ಕೇಸರಿ' ಕೂಡ ಅಕ್ಷಯ್ ಹಿಟ್ ಲಿಸ್ಟ್ ಗೆ ಸೇರುವ ಸಾಧ್ಯತೆ ಇದೆ.


Click it and Unblock the Notifications











