»   » 'ಮಧುರ'ವಾದ ಕ್ಯಾಲೆಂಡರ್ ಗರ್ಲ್ಸ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

'ಮಧುರ'ವಾದ ಕ್ಯಾಲೆಂಡರ್ ಗರ್ಲ್ಸ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ನಿರ್ದೇಶಕ ಮಧುರ್ ಡಾರ್ಕರ್ ಮತ್ತೆ ಬಾಲಿವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಲು ಬಂದಿದ್ದಾರೆ. ರಿಯಲ್ ಕಥೆಗಳನ್ನು ರೀಲ್ ಜಗತ್ತಿನಲ್ಲಿ ತೋರಿಸುವ ಮೂಲಕ ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರಿಬ್ಬರನ್ನು ಮೆಚ್ಚಿಸುವ ಕಲೆ ಕರಗತ ಮಾಡಿಕೊಂಡಿರುವ ಮಧುರ್ ಮತ್ತೊಮ್ಮೆ ಫ್ಯಾಷನ್, ಮಾಡೆಲಿಂಗ್, ಜೂಜಾಟ, ಕ್ರಿಕೆಟ್ ಕಳ್ಳಾಟ ಎಲ್ಲದರ ರೀಮಿಕ್ಸ್ ನಂತಿರುವ ಚಿತ್ರವನ್ನು ನೀಡುತ್ತಿದ್ದಾರೆ.

ಬಹು ನಿರೀಕ್ಷಿತ 'ಕ್ಯಾಲೆಂಡರ್‌ ಗರ್ಲ್ಸ್‌' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕೆಲವರು ಇದೇನು ಹಳೆ ಚಿತ್ರಗಳ ಕಾಕ್ ಟೈಲ್ ನಂತಿದೆ ಎಂದರೆ ಮತ್ತೆ ಕೆಲವರು ಸಕತ್ ಕಿಕ್ ಕೊಡುವಂತಿದೆ ಎಂದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

ಗ್ಲಾಮರ್ ಜಗತ್ತಿಗೆ ಕಾಲಿರಿಸಿದ ಐವರು ಯುವತಿಯರು ವಿವಿಧ ಕ್ಷೇತ್ರಗಳ ಮೂಲಕ ತಮ್ಮ ಗುರಿಯನ್ನು ಮುಟ್ಟುವುದು ಹಾಗೂ ನಂತರ ಕಥೆಯನ್ನು ಕ್ಯಾಲೆಂಡರ್ ಗರ್ಲ್ ಹೊಂದಿದೆ.

ಅಂದ ಹಾಗೆ ಕಿಂಗ್ ಫಿಷರ್ ಕ್ಯಾಲೆಂಡರ್ ಗಳು ಈ ಚಿತ್ರಕ್ಕೆ ಸ್ಪೂರ್ತಿ ನೀಡಿವೆ ಎಂದು ಮಧುರ್ ಹೇಳಿಕೊಂಡಿದ್ದಾರೆ. ಸೋಲನ್ನು ಅರಗಿಸಿಕೊಂಡು ಗೆಲುವನ್ನು ಸಹಿಸಿಕೊಂಡು ಯಶಸ್ಸನ್ನು ತಲೆ ಮೇಲೆ ಹೊತ್ತುಕೊಂಡು ತಿರುಗುವುದು ಬೆಂಕಿ ಸಹವಾಸದಂತೆ ಎಂದಿರುವ ಮಧುರ್ ಅವರ ಕ್ಯಾಲೆಂಡರ್ ಗರ್ಲ್ ಟೀಸರ್ ನಲ್ಲಿ ಎಲ್ಲವೂ ನಿರೀಕ್ಷಿತವಾಗಿ ಮೂಡಿಬಂದಿದೆ.

ಐವರು ಹಾಟ್ ಗರ್ಲ್ಸ್ ಕಥೆ ವ್ಯಥೆ

ಆಕಾಂಕ್ಷಾ ಪುರಿ, ಅವಾನಿ ಮೋದಿ, ಕೈರಾ ದತ್, ರೂಹಿ ಸಿಂಗ್ ಹಾಗೂ ಸತಾರೂಪ ಪೈನ್ ಅವರು ಹಾಟ್ ಗರ್ಲ್ಸ್ ಗಳಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಧುರ್ ಚಿತ್ರವೆಂದ ಮೇಲೆ ನಿರೀಕ್ಷೆ ಹೆಚ್ಚಳ

"Photographs are perfect becuase they are still but life doesn't stand still" ಎಂಬ ಪಂಚ್ ವಾಕ್ಯಗಳನ್ನು ಹೊಂದಿರುವ ಕ್ಯಾಲೆಂಡರ್ ಗರ್ಲ್ಸ್ ಚಿತ್ರದ ಟೀಸರ್ ಹಾಗೂ ಟ್ವಿಟ್ಟರ್ ಪ್ರತಿಕ್ರಿಯೆಗಳು ಮಂದಿವೆ

ಕ್ಯಾಲೆಂಡರ್ ಗರ್ಲ್ಸ್ ಟೀಸರ್

ಮಧುರ್ ಅವರ ಹೊಚ್ಚ ಹೊಸ ಚಿತ್ರ ಕ್ಯಾಲೆಂಡರ್ ಗರ್ಲ್ಸ್ ಟೀಸರ್ ಇಲ್ಲಿದೆ ನೋಡಿ

ವಿಶ್ವದಲ್ಲೆಡೆ ಟಾಪ್ ಟ್ರೆಂಡಿಂಗ್ ಹೇಗೆ?

ಕ್ಯಾಲೆಂಡರ್ ಗರ್ಲ್ಸ್ #CalendarGirlsTeaser ವಿಶ್ವದಲ್ಲೆಡೆ ಟಾಪ್ ಟ್ರೆಂಡಿಂಗ್ ಹೇಗೆ? ಏಕೆ? ಯಾವನಿಗೊತ್ತು.

ಅಯ್ಯೋ ಟೀಸರ್ ನೋಡೋಕೆ ಆಗಲ್ಲಪ್ಪ

ಅಯ್ಯೋ ಟೀಸರ್ ನೋಡೋಕೆ ಆಗಲ್ಲಪ್ಪ ಎಂಬ ಮಹಿಳೆಗೆ ಅಲ್ಲೇ ಟಾಂಗ್ ಕೊಟ್ಟ ಮತ್ತೊಬ್ಬ

ಇದು ಒಳ್ಳೆ ಪೇಜ್ 3 ಚಿತ್ರ ರೀಮೇಕ್ ನಂತಿದೆ

ಇದು ಒಳ್ಳೆ ಪೇಜ್ 3 ಚಿತ್ರ ರೀಮೇಕ್ ನಂತಿದೆ. ಮಧುರ್ ತಮ್ಮ ಹಳೆ ಚಿತ್ರಗಳನ್ನೇ ರೀಮಿಕ್ಸ್ ಮಾಡುತ್ತಿದ್ದಾರೆ.

ಐಪಿಎಲ್ ಬಗ್ಗೆ ಏನು ಹೇಳಿದ್ದಾರೆ

ಐಪಿಎಲ್ ಬಗ್ಗೆ ಏನು ಹೇಳಿದ್ದಾರೆ ಲಲಿತ್ ಮೋದಿ ನೀವು ನೋಡಿ ಎಂದ ಅಭಿಮಾನಿಗಳು

English summary
Makers of Calendar Girls have released the first teaser of the film. Directed by Madhur Bhandarkar, Calendar Girls is a story about five super models and their scandalous lives. Here are the twitter reaction to raunchy teaser.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada